ದೊಡ್ಡಬಳ್ಳಾಪುರ, (03): ನಗರದ ಉಪ ನೋಂದಣಾಧಿಕಾರಿ ಕಚೇರಿಗೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ಸತತ ಐದು ಗಂಟೆಗಳಿಂದ ನಡೆಸುತ್ತಿರುವ ಪರಿಶೀಲನೆ ರಾತ್ರಿ 9.45 ಆದರೂ ಮುಂದುವರೆದಿದೆ.

ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಲೋಕಯುಕ್ತ ಎಸ್ಪಿ ಪವನ್ ನೆತ್ತೂರು ನೇತೃತ್ವದಲ್ಲಿ ಉಪ ನೋಂದಣಾಧಿಕಾರಿ ಕಚೇರಿಗೆ ದಾಳಿ ನಡೆದಿದ್ದು, ಅವರೊಂದಿಗೆ ಲೋಕಾಯುಕ್ತ ಡಿವೈಎಸ್ಪಿ ರೇಣುಕಾ ಪ್ರಸಾದ್ ಮತ್ತು ಚಿಕ್ಕಬಳ್ಳಾಪುರ ಪೋಲೀಸ್ ಇಲಾಖೆ ಸಿಬ್ಬಂದಿಗಳನ್ನು ಬಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಭ್ರಷ್ಟಾಚಾರದ ಹಾವಳಿ ಕುರಿತಂತೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆ ಲೊಕಾಯುಕ್ತ ಪೊಲೀಸರು ದಾಳಿ ಇಂದು ನಡೆಸಿದ್ದಾರೆ.
ಇದಕ್ಕೂ ಮುನ್ನಾ ದಾಳಿಯ ವೇಳೆ ಕಚೇರಿಯ ಒಳಗಿದ್ದ, ಸುಮಾರು ಇಪ್ಪತ್ತು ಮಂದಿ ಸಾರ್ವಜನಿಕರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದರು.
ಈ ವೇಳೆ ಅಧಿಕಾರಿಗಳನ್ನು ಬಿಟ್ಟು ಸಾರ್ವಜನಿಕರನ್ನು ವಿಚಾರಣೆ ನಡೆಸುತ್ತಿದ್ದಾರೆಂದು ಬಿಜೆಪಿ ಮುಖಂಡ ಕೋಡಿ ನರಸಿಂಹಮೂರ್ತಿ ಹಾಗೂ ಮತ್ತಿತರರು ಆಕ್ಷೇಪಿಸಿದರು.
ಈ ವೇಳೆ ವಿಚಾರಣೆ ಪೂರ್ಣಗೊಳಿಸಿದ ಲೋಕಾಯುಕ್ತ ಅಧಿಕಾರಿಗಳು 15 ಮಂದಿ ಸಾರ್ವಜನಿಕರನ್ನು ಹೊರ ಕಳಿಸಿದ್ದಾರೆ.
ಗುರುವಾರ ಸಂಜೆ 5 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ಸೇರಿದಂತೆ ಸುಮಾರು 20 ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಪ್ರಸ್ತುತ ದಾಖಲೆಗಳ ಪರಿಶೀಲನೆ, ವಿಚಾರಣೆ ಕಾರ್ಯ ಮುಂದುವರಿದಿದ್ದು, ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳ ಸಂಬಂಧಿಕರು ಕಚೇರಿ ಬಳಿ ಕಾದು ನಿಂತಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
