ದೊಡ್ಡಬಳ್ಳಾಪುರ, (04): ನಗರದ ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಗುರುವಾರ ನಡೆದಿದ್ದ ಲೋಕಾಯುಕ್ತ ಪೊಲೀಸರ ದಾಳಿ, ಸತತ ಏಳು ಗಂಟೆಗಳ ನಂತರ ಪೂರ್ಣಗೊಂಡಿತು.
ಭ್ರಷ್ಟಾಚಾರದ ಹಾವಳಿ ಕುರಿತಂತೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆ ಲೊಕಾಯುಕ್ತ ಪೊಲೀಸರು ನಡೆಸಿದ ದಾಖಲೆಗಳ ಪರಿಶೀಲನೆ, ಅಧಿಕಾರಿಗಳ ವಿಚಾರಣೆ ರಾತ್ರಿ 11.30ರ ವೇಳೆಗೆ ಮುಕ್ತಾಯವಾಯಿತು.
ಈ ವೇಳೆ ಸಣ್ಣ ಪ್ರಮಾಣದ ದಾಖಲೆಗಳನ್ನು ಹೊರತು ಪಡಿಸಿದರೆ ಲೋಕಾಯುಕ್ತ ಪೊಲೀಸರು ಮತ್ಯಾವುದೇ ದಾಖಲೆ, ಅಧಿಕಾರಿಗಳ ವಶ ಕಂಡು ಬರಲಿಲ್ಲ.
ಲೋಕಾಯುಕ್ತ ಪೊಲೀಸರ ದಾಳಿಯ ವೇಳೆ ಅಧಿಕಾರಿಗಳ ಬೆಂಬಲಿಸಿ ಕುಟುಂಬದವರಲ್ಲದ ಕೆಲವರು ಕಚೇರಿಯ ಬಳಿ ತಡರಾತ್ರಿವರೆಗೂ ಕಾದು ನಿಂತಿದ್ದು ಪೊಲೀಸರಲ್ಲಿ ಅನುಮಾನವನ್ನುಂಟು ಮಾಡಿತ್ತು.
ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಲೋಕಯುಕ್ತ ಎಸ್ಪಿ ಪವನ್ ನೆತ್ತೂರು ನೇತೃತ್ವದಲ್ಲಿ ಉಪ ನೋಂದಣಾಧಿಕಾರಿ ಕಚೇರಿಗೆ ದಾಳಿ ನಡೆದಿದ್ದು, ಅವರೊಂದಿಗೆ ಲೋಕಾಯುಕ್ತ ಡಿವೈಎಸ್ಪಿ ರೇಣುಕಾ ಪ್ರಸಾದ್ ಮತ್ತು ಚಿಕ್ಕಬಳ್ಳಾಪುರ ಪೋಲೀಸ್ ಇಲಾಖೆ 12ಕ್ಕೂ ಸಿಬ್ಬಂದಿಗಳು ದಾಳಿ ನಡೆಸಿದ್ದರು.
ಇದಕ್ಕೂ ಮುನ್ನಾ ದಾಳಿಯ ವೇಳೆ ಕಚೇರಿಯ ಒಳಗಿದ್ದ, ಸುಮಾರು ಇಪ್ಪತ್ತು ಮಂದಿ ಸಾರ್ವಜನಿಕರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದರು.
ಈ ವೇಳೆ ಅಧಿಕಾರಿಗಳನ್ನು ಬಿಟ್ಟು ಸಾರ್ವಜನಿಕರನ್ನು ವಿಚಾರಣೆ ನಡೆಸುತ್ತಿದ್ದಾರೆಂದು ಸಾರ್ವಜನಿಕರ ಆಕ್ಷೇಪ ಕಂಡುಬಂತು.
ಈ ವೇಳೆ ವಿಚಾರಣೆ ಪೂರ್ಣಗೊಳಿಸಿದ ಲೋಕಾಯುಕ್ತ ಅಧಿಕಾರಿಗಳು 15 ಮಂದಿ ಸಾರ್ವಜನಿಕರನ್ನು ಹೊರ ಕಳಿಸಿದ್ದರು.
ಗುರುವಾರ ಸಂಜೆ 5 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ಸೇರಿದಂತೆ ಹಲವು ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಹೆಚ್ಚಿನ ಮಾಹಿತಿಗೆ ದಾಖಲೆ ಕುರಿತು ಲೋಕಾಯುಕ್ತ ಇಲಾಖೆಯಿಂದ ಬಿಡುಗಡೆಯಾಗುವ ಮಾಧ್ಯಮ ವರದಿಗಾಗಿ ನಿರೀಕ್ಷಿಸಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

