ಹರಿತಲೇಖನಿ ದಿನಕ್ಕೊಂದು ಕಥೆ: ಯಜಮಾನರನ್ನೇ ಸುಡುವ ಬೆಂಕಿ

ಕೆಲವರಿಗೆ ಒಂದು ರೋಗವಿರುತ್ತದೆ. ತಾವು ಎಷ್ಟೇ ದೊಡ್ಡವರಾಗಿದ್ದರೂ, ಬಹಳ ಶ್ರೇಷ್ಠ ಸ್ಥಾನದಲ್ಲಿದ್ದರೂ ಮತ್ತೊಬ್ಬರ ಬಗ್ಗೆ ಯಾರಾದರೂ ಒಳ್ಳೆಯ ಮಾತು ಹೇಳಿದರೆ ಹೊಟ್ಟೆ ಉರಿದು ಹೋಗುತ್ತದೆ, ತಳಮಳವಾ­ಗುತ್ತದೆ, ಅದನ್ನು ತಡೆದು­ಕೊಳ್ಳು­ವು­ದು ಆಗುವುದಿಲ್ಲ. ಹೀಗೆ ಇರುವವರ ಬದುಕು ಹೇಗಾ­ಗು­ತ್ತದೆ ಎಂದು ಹೇಳುವ ಸುಂದರವಾದ ಕಥೆಯನ್ನು ನೇಪಾಳದಲ್ಲಿ ಜನ ಹೇಳುತ್ತಾರೆ.

ದೇಶದ ರಾಜನಿಗೆ ಯಾರೋ ಪರದೇಶದವರು ವಿಶೇಷ ಲಕ್ಷಣದ ಆನೆಮ­ರಿ­ಯನ್ನು ಕಾಣಿಕೆಯಾಗಿ ಕೊಟ್ಟರು. ಅದು ಬೆಳೆದಂತೆಲ್ಲ ಮತ್ತಷ್ಟು ವಿಶೇಷವಾಗಿ ಕಾಣ­­­­­ತೊಡಗಿತು. ಅದರ ಮೈಕಾಂತಿ ಅಪರೂಪವಾಗಿತ್ತು. ಅದರ ದೊಡ್ಡ ಗಾತ್ರ, ಗಂಭೀರ­­­ವಾದ ನಡೆ, ಸೌಮ್ಯ ವರ್ತನೆ ಎಲ್ಲರಿಗೂ ಪ್ರಿಯ­ವಾಗಿತ್ತು. ಅದನ್ನು ನೋಡಿ­­ಕೊ­­ಳ್ಳುತ್ತಿದ್ದ ಮಾವುತನಿಗೂ ಅದು ತುಂಬ ವಿಶೇಷ ಎನ್ನಿಸಿತು.

ಅವನು ಮೆಲು­ವಾಗಿ ಏನು ಹೇಳಿದರೂ ತಕ್ಷಣವೇ ಮಾಡಿಬಿ­ಡುತ್ತಿತ್ತು. ರಾಜನಿಗೆ ಅದರ ಮೇಲೆ ಬಲು ಪ್ರೀತಿ. ಅದಕ್ಕೆ ಚೆನ್ನಾಗಿ ಅಲಂಕಾರ ಮಾಡಿಸಿ ಅದರ ಮೇಲೆ ಅಂಬಾರಿ­ಯನ್ನು ಬಿಗಿಸಿ ತಾನು ಅದರಲ್ಲಿ ಕುಳಿತು ನಗರ ಪ್ರದಕ್ಷಿಣೆಗೆ ಹೋಗು­ತ್ತಿದ್ದ. ನಗರದ ಜನರಿಗೆ ಇದೊಂದು ಸುಂದರ ದೃಶ್ಯ. ಒಂದು ತಿಂಗಳು ಈ ರೀತಿ ಮೆರವಣಿಗೆ­ಯಾದ ಮೇಲೆ ಅವ­­ನಿಗೆ ಜನರು ಮಾತನಾಡಿಕೊಳ್ಳುವುದು ಕಿವಿಗೆ ಬಿತ್ತು. ಅವರು ಸುಂದರವಾದ ಅನೆ­­ಯನ್ನು ಹೊಗಳುವಾಗ ಅವನ ಬಗ್ಗೆ ಒಳ್ಳೆಯ ಮಾತನ್ನಾಡುತ್ತಿರಲಿಲ್ಲ.

ಇಷ್ಟು ಅದ್ಭುತ­­­­ವಾದ ಆನೆ ನಿಜವಾಗಿಯೂ ಚಕ್ರ­ವರ್ತಿಯ ಬಳಿಗೆ ಇರಬೇಕು, ನಮ್ಮ ಸಾಮಂತ ರಾಜನ ಬಳಿ ಅಲ್ಲ ಎಂದು ಕೆಲವರೆಂದರೆ ಮತ್ತೆ ಕೆಲವರು, ಅಯ್ಯೋ, ಅಷ್ಟು ದೊಡ್ಡ ಆನೆಯ ಮೇಲೆ ನಮ್ಮ ರಾಜ ಒಣಗಿದ ಮರದ ಬೊಂಬೆಯಂತೆ ಕಾಣು­­­ತ್ತಾನೆ ಎಂದರು. ತನಗಿಂತ ಹೆಚ್ಚಾಗಿ ಜನ ಆನೆ­ಯನ್ನು ಹೊಗಳಿದಾಗ ರಾಜ ಕೋಪ­­­­­ದಿಂದ ಕುದಿದು ಹೋದ.

ಒಂದು ದಿನ ಮಾವುತ­ನನ್ನು ಕರೆದು ಕೇಳಿದ, ‘ನಮ್ಮ ಪಟ್ಟದಾನೆ ನಿಜವಾಗಿ­ಯೂ ವಿಶೇಷ­ವಾಗಿ­ದೆಯೇ?’ ಆತ, ‘ಪ್ರಭೂ, ನಾವು ತಲೆ­­­­­ತಲಾಂತರದಿಂದ ಆನೆಗಳನ್ನೇ ನೋಡಿ­ಕೊಂಡ­ವರು. ಆದರೆ ಇಂಥ ಆನೆಯನ್ನು ನಾವು ಕಂಡೇ ಇಲ್ಲ.

ಇದೆಲ್ಲೋ ದೇವತೆಯೇ ಇರಬೇಕು’ ಎಂದ. ರಾಜನಿಗೆ ಮತ್ತಷ್ಟು ರೋಷ ಉಕ್ಕಿತು. ‘ಹಾಗಾದರೆ ಅದು ನೀನು ಹೇಳಿದ್ದನ್ನೆಲ್ಲ ಮಾಡು­ತ್ತ­ದೆಯೇ?’ ಎಂದು ಕೇಳಿದ. ಮಾವುತ, ‘ಸ್ವಾಮೀ, ಅದಕ್ಕೆ ನಾನು ಬಾಯಿ ಬಿಟ್ಟು ಯಾವ ಆಜ್ಞೆ­ಯನ್ನೂ ಮಾಡುವ ಕಾರಣವಿಲ್ಲ. ನನ್ನ ಮನಸ್ಸಿಗೆ ಹೊಳೆದದ್ದನ್ನೇ ತಕ್ಷಣ ಮಾಡುತ್ತದೆ’ ಎಂದ. ಹಾಗಾದರೆ ನಾಳೆ ಅದನ್ನು ಪರ್ವತದ ತುದಿಗೆ ಕರೆದು­ಕೊಂಡು ನಡೆ ಎಂದು ಆಜ್ಞೆ ಮಾಡಿದ ರಾಜ.

ಅವನ ಬುದ್ಧಿವಂತನಾದ ಮಂತ್ರಿಗೆ ರಾಜನ ಕುತಂತ್ರ ಹೊಳೆಯಿತು. ಮರುದಿನ ರಾಜ ಮತ್ತು ಮಂತ್ರಿ ಕೂಡ ಪರ್ವತದ ಕೋಡಿಗೆ ನಡೆದರು. ಆನೆ ಅಲ್ಲಿಗೆ ಸರಾಗ­ವಾಗಿ ನಡೆದುಬಂತು. ಅದು ಪ್ರಪಾತಕ್ಕೆ ಎದುರಾಗಿ ಅಂಚಿಗೇ ನಿಲ್ಲುವಂತೆ ರಾಜ ಹೇಳಿದ. ಅದು ತೀರ ಅಂಚಿಗೇ ಹೋಗಿ ನಿಂತಿತು. ನಂತರ ಮುಂದಿನ ಎರಡು ಕಾಲು­­ಗ­­­ಳನ್ನು ಎತ್ತಿ ಹಿಂಗಾಲುಗಳ ಮೇಲೆ ನಿಲ್ಲುವಂತೆ ಹೇಳಿದ. ಅದು ಹಾಗೆ ಮಾಡಿತು. ಆಮೇಲೆ ಒಂದೇ ಕಾಲಿನ ಮೇಲೆ ನಿಲ್ಲು ಎಂದ. ಅದು ಅಂತೆಯೇ ನಿಂತಿತು.

ಈರ್ಷೆಯಿಂದ ರಾಜ ಹೇಳಿದ, ಪ್ರಪಾತದಲ್ಲಿ ಹಾರಿಕೋ. ಆನೆ ತಕ್ಷಣ ತಿರುಗಿ ಅವನಿ­ದ್ದ­ಲ್ಲಿಗೆ ಬಂದು ಆತನನ್ನು ಸೊಂಡಿಲಿನಲ್ಲಿ ಹಿಡಿದು ಗರ­­­ಗರನೇ ತಿರು­ಗಿಸಿ ಪ್ರಪಾತಕ್ಕೆ ಎಸೆದು­­ಬಿಟ್ಟಿತು. ನಂತರ ಜ್ಞಾನಿ ಮಂತ್ರಿಯನ್ನು ಬೆನ್ನ­ಮೇಲೆ ಕೂಡ್ರಿಸಿಕೊಂಡು ನಗರಕ್ಕೆ ಬಂದು ಸಿಂಹಾಸನದ ಮೇಲೆ ಕೂಡ್ರಿಸಿತು. ಜನರೂ ಆನೆಯ ತೀರ್ಮಾನ­ವನ್ನು ಒಪ್ಪಿದರು. ಈರ್ಷೆ, ದ್ವೇಷಗಳು ಬೆಂಕಿ ಇದ್ದಂತೆ. ಅದನ್ನು ಹೊಟ್ಟೆ­­­ಯಲ್ಲಿ ತುಂಬಿಕೊಂಡ ಯಜಮಾನರನ್ನೇ ಮೊದಲು ಬಲಿ ತೆಗೆದು­ಕೊಳ್ಳು­ತ್ತವೆ.

ಕೃಪೆ: ಮುಖ ಪುಸ್ತಕ. ಸಂಗ್ರಹ: ನರಸಿಂಹಮೂರ್ತಿ ಬರಗೂರು‌.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ದೊಡ್ಡಬಳ್ಳಾಪುರದಲ್ಲಿ JDS ಪ್ರತಿಭಟನೆ..!: ಕಾಂಗ್ರೆಸ್ ವಿರುದ್ಧ ಹರೀಶ್ ಗೌಡ ವಾಗ್ದಾಳಿ

ದೊಡ್ಡಬಳ್ಳಾಪುರದಲ್ಲಿ JDS ಪ್ರತಿಭಟನೆ..!: ಕಾಂಗ್ರೆಸ್ ವಿರುದ್ಧ ಹರೀಶ್ ಗೌಡ ವಾಗ್ದಾಳಿ

ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿ ಮಾಡಲು ಅವಕಾಶ ಕೊಡದ ಕಾಂಗ್ರೆಸ್, ಮಹಿಳಾ ವಿರೋಧಿ ಎಂಬುದು ಸಾಬೀತು ಮಾಡಿದೆ ಎಂದು ಜೆಡಿಎಸ್ (JDS) ಹಿರಿಯ ಮುಖಂಡ ಹರೀಶ್

[ccc_my_favorite_select_button post_id="121251"]
ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ಸುಳ್ಳು ವಿಡಿಯೋ ಪೋಸ್ಟ್.. ನಟ ದುನಿಯಾ ವಿಜಯ್‌, ಭಾಸ್ಕರ್ ರಾವ್ಗೆ ಸಂಕಷ್ಟ..!

ಸುಳ್ಳು ವಿಡಿಯೋ ಪೋಸ್ಟ್.. ನಟ ದುನಿಯಾ ವಿಜಯ್‌, ಭಾಸ್ಕರ್ ರಾವ್ಗೆ ಸಂಕಷ್ಟ..!

ಝಾಂಬಿ ಡ್ರಗ್ಸ್ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯ ವಿಡಿಯೊ ಶೇರ್ ಮಾಡಿದ್ದ ನಟ ದುನಿಯಾ ವಿಜಯ್‌ಗೆ (Duniya Vijay) ಸಂಕಷ್ಟ ಎದುರಾಗಿದೆ.

[ccc_my_favorite_select_button post_id="121217"]
ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ಕ್ಯಾಂಟರ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ (Accident) ಸಂಭವಿಸಿ, ಓರ್ವ ಸಾವನಪ್ಪಿರುವ ಘಟನೆ ತಾಲೂಕಿನ *** ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

[ccc_my_favorite_select_button post_id="121087"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!