ಬೆಂಗಳೂರು: ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಲ್ಲಿ ಸಿಲುಕಿಕೊಂಡಿದ್ದ ಶ್ವಾನವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಶ್ವಾನ ರಕ್ಷಣಾ ತಂಡ ಯಶಸ್ವಿಯಾಗಿದೆ.
ಬ್ರಿಗೇಡ್ ಮೆಟ್ರೊಪೊಲಿಸ್ ಬಳಿ ಗರುಡಾಚಾರ್ ಪಾಳ್ಯ ಮೆಟ್ರೋ ಹಳಿಯಲ್ಲಿ ಶ್ವಾನ ಸಿಲುಕಿರುವ ಬಗ್ಗೆ ಮಾಹಿತಿ ಪಡೆದ BMRTCL, BBMP ಮತ್ತು ಕೆಲವು ಸ್ವಯಂಸೇವಕರು ತಕ್ಷಣ ಕಾರ್ಯಾಚರಣೆಗೆ ಧುಮುಕಿದರು.
ಎಚ್‌ಟಿ ವಿದ್ಯುತ್ ಸಂಪರ್ಕವನ್ನು ತಕ್ಷಣವೇ ಸ್ಥಗಿತಗೊಳಿಸಿ ಪಶುಸಂಗೋಪನಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು. ಇಡೀ ತಂಡದ ಸತತ ಪ್ರಯತ್ನದ ನಂತರ ಅಂತಿಮವಾಗಿ ಶ್ವಾನವನ್ನು ರಕ್ಷಿಸಲಾಯಿತು ಮತ್ತು ಈಗ ಕಾರ್ಟ್‌ಮ್ಯಾನ್ ಆಸ್ಪತ್ರೆಯಲ್ಲಿ ಅದರ ಆರೈಕೆ ನಡೆಸಲಾಗುತ್ತಿದೆ.
ತಮ್ಮ ನಿರಂತರ ಕಾರ್ಯಾಚರಣೆ ಮತ್ತು ಅದ್ಭುತ ಸಮನ್ವಯದ ಮೂಲಕ ಆ ಶ್ವಾನವನ್ನು ಯಶಸ್ವಿಯಾಗಿ ರಕ್ಷಿಸಿದ BMRCL ಮತ್ತು BBMP ಸಿಬ್ಬಂದಿ ಹಾಗೂ ಸ್ವಯಂಸೇವಕರ ಪರಿಶ್ರಮ ಮತ್ತು ಕಾಳಜಿಗೆ ಶಾಸಕ ಅರವಿಂದ ಲಿಂಬಾವಳಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

