ದೊಡ್ಡಬಳ್ಳಾಪುರ, (ನ.09): ನವೆಂಬರ್ 09 ರಿಂದ ಡಿಸೆಂಬರ್ 08ರವರೆಗೆ ಆಯೋಜಿಸಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ – 2023ರ ಜಾಗೃತಿ ಜಾಥಾವನ್ನು ತಾಲೂಕು ಪಂಚಾಯಿತಿ ಇಒ ಶ್ರೀನಾಥಗೌಡ ಚಾಲನೆ ನೀಡಿದರು.
ತಾಲೂಕಿನ ದರ್ಗಾಜೋಗಹಳ್ಳಿ ಗ್ರಾಮಪಂಚಾಯಿತಿ ಆವರಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ – 2023ರ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.
ಈ ಕುರಿತಂತೆ ಹರಿತಲೇಖನಿಗೆ ಮಾಹಿತಿ ನೀಡಿರುವ ತಾಪಂ ಇಒ ಮತ್ತು ತಾಲ್ಲೂಕು ಚುನಾವಣಾ ಸ್ವೀಪ್ (SVEEP) ಸಮಿತಿ ಅಧ್ಯಕ್ಷ ಶ್ರೀನಾಥಗೌಡ, ಹೊಸ ಮತದಾರರ ನೋಂದಣೆಗಾಗಿ ನಮೂನೆ-6, ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ-7, ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆಗೆ ನಮೂನೆ-6(ಬಿ) ಮತ್ತು ವಾಸಸ್ಥಳ ಬದಲಾವಣೆ ಒಳಗೊಂಡ ಇತರೆ ತಿದ್ದುಪಡಿಗಾಗಿ ನಮೂನೆ-8 ಅರ್ಜಿಗಳನ್ನು ಬಿ.ಎಲ್.ಓ ಗಳಿಗೆ ನೀಡುವ ಅಥವಾ VHA App ಮುಖಾಂತರ ಸಲ್ಲಿಸುವ ಕುರಿತು ಮತದಾರರಲ್ಲಿ ಅರಿವು ಮೂಡಿಸಲು ಈ ಜಾಥಾವನ್ನು ಚಾಲನೆ ನೀಡಲಾಗಿದೆ.
ವಿಶೇಷ ನೋಂದಣಿ ಅಭಿಯಾನವನ್ನು ನವೆಂಬರ್ ತಿಂಗಳ 12, 20, ಡಿಸೆಂಬರ್ ತಿಂಗಳ 03 ಮತ್ತು 04 ರಂದು ಹಮ್ಮಿಕೊಂಡಿದ್ದು, ಬೆಳಗ್ಗೆ 10.00 ರಿಂದ ಸಂಜೆ 05.00 ತನಕ ಸಮೀಪದ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಅನುಕೂಲ ಪಡೆಯಬಹುದಾಗಿದೆ ಎಂದರು.
ಈ ವೇಳೆ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೊಡ್ಡನಂಜುಡಪ್ಪ, ತಾಲ್ಲೂಕು ಯೋಜನಾಧಿಕಾರಿ ರಾಮಾಂಜುನೇಯ, ಪಿಡಿಓ ನಾರಾಯಣಸ್ವಾಮಿ, ಗ್ರಾಮಪಂಚಾಯಿತಿ ಸದಸ್ಯರು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

