ರಾಮನು ಬ್ರಾಹ್ಮಣನಾಗಿದ್ದನು. ರಾಮ, ದೇವರ ಅವತಾರವಾದರೂ, ಕ್ಷತ್ರಿಯರ ಕುಟುಂಬದಲ್ಲಿ ಜನಿಸಿದನು ಜಾತಿ ಯಲ್ಲಿ ರಾಮನನ್ನು ತೂಗುವುದಾದರೆ, ರಾವಣನಿಗಿಂತ ಕೆಳಮಟ್ಟದ್ದಾಗಿರುತ್ತಾನೆ ಬ್ರಾಹ್ಮಣ ರಾವಣನು ರಾಕ್ಷಸನಾಗಿರುತ್ತಾನೆ. ರಾಮ ದೇವ ಸ್ವರೂಪಿ ಅವತಾರ ಪುರುಷನಾಗಿರುತ್ತಾನೆ. ರಾವಣನು ಬ್ರಹ್ಮ-ಜ್ಞಾನದ ರಕ್ಷಕನಾಗಿದ್ದನು (ದೇವರ ಜ್ಞಾನ) ಉಳ್ಳವನಾಗಿದ್ದನು.
ರಾಮನು ರಾವಣನ ಬಳಿ, ಯುಧ್ಧ ಮಾಡಲು ಅಣಿಯಾಗುತ್ತಿದ್ದ ಸಂಧರ್ಭದಲ್ಲಿ, ಅಲ್ಲಿ ಹನುಮಂತನನ್ನು ಕುರಿತು: ನಾನು ರಾವಣನ ಜೊತೆಗೆ ಯುಧ್ಧ ಮಾಡುವ ಮುಂಚೆ, ಶಿವನನ್ನು ಆರಾಧಿಸುತ್ತಾ ಒಂದು ಅಗ್ನಿ ಹೋಮವನ್ನು ಮಾಡಬೇಕೇಂದಿರುವೆ. ಅಗ್ನಿ ಹೋಮದ ಪೂಜೆಗೆ, ಸರ್ವೋತ್ತಮ ಬ್ರಾಹ್ಮಣನ ಅವಶ್ಯಕತೆ ಇದೆ. ಎಂದು ರಾಮ ಹೇಳುವಷ್ಟರಲ್ಲಿ.
ಹನುಮ ಕ್ಷಣ ಮಾತ್ರದಲ್ಲಿ, ನಿಮ್ಮ ಮುಂದೆ ಬ್ರಾಹ್ಮಣೋತ್ತಮನನ್ನು ಕರೆತರುತ್ತೇನೆ. ಎಂದು ಹೇಳುತ್ತಾ ತನ್ನ ಕಪಿ ಸೈನ್ಯವನ್ನು ಕರೆಯುತ್ತಾನೆ. ಆಗ ರಾಮ ಇದು ನನ್ನ ಮತ್ತು ರಾವಣನ ನಡುವಿನ ಯುಧ್ಧ ದೊಡ್ಡ ಕಾರ್ಯವನ್ನು ಆಶೀರ್ವದಿಸಲು ಭಗವಂತ ಶಿವವನ್ನು ಮೆಚ್ಚಿಸಲು ಒಂದು ಅಗ್ನಿ ಹೋಮದ ಅವಶ್ಯಕತೆ ಇದೆ.
ರಾಮ ಹೇಳುತ್ತಿದ್ದಂತೆ, ಹೋಮಕ್ಕಾಗಿ, ಎಲ್ಲಾ ವ್ಯವಸ್ಥೆಗಳನ್ನು ತ್ವರಿತವಾಗಿ ಮಾಡಲಾಗುತ್ತಿತ್ತು, ರಾಮನು ತನ್ನ ಮನಸ್ಸಿನಲ್ಲಿರುವ ಪರಿಸ್ಥಿತಿಯನ್ನು ನೆನೆದು ಹೆಚ್ಚು ಚಿಂತನೆ ಮಾಡಿದ. ನಂತರ ಬಹಳ ವಿಚಿತ್ರವಾದ ಮಾತನ್ನು ತನ್ನ ಪ್ರೀತಿ ಪಾತ್ರ ಹನುಮನನ್ನು ಕುರಿತು ಹೇಳುತ್ತಾ’ ನೀನು ಈಗ ಲಂಕೆಗೆ, ಹೋಗಿ ರಾವಣನನ್ನು ಕರೆತರಬೇಕು. ಈ ಅಗ್ನಿ ಹೋಮಕ್ಕೆ ಪೂಜಾ ಕೈಂಕಾರ್ಯವನ್ನು ನೇರವೇರಿಸಲು ಮಹಾನ್ ” ಶಿವಭಕ್ತ ಭ್ರಾಹ್ಮಣೋತ್ತಮ ರಾವಣನು ಶ್ರೇಷ್ಟನಾಗಿದ್ದಾನೆ. ಅವನ ಪೂಜೆಯ ಶ್ರೇಷ್ಟತೆಯ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಎಂದು ಹೇಳಿದಾಗ ಸಂಪೂರ್ಣ ಕಪಿಸೈನ್ಯ ರಾಮನ ಮಾತನ್ನು ಕೇಳಿ, ಆಘಾತಕ್ಕೊಳಗಾಯಿತು.
ಆಗ ಹನುಮಂತ ರಾಮನ ಮಾತಿಗೆ ಮರು ಮಾತನಾಡದೆ, ತನ್ನ ಯಜಮಾನನ ಆಜ್ಞೆಯನ್ನು ಅನುಸರಿಸಲು ಮುಂದಾಗುತ್ತಾನೆ. ಮತ್ತು ರಾವಣನಿಗೆ ಆಹ್ವಾನ ನೀಡಿ,ಕರೆತರಲು ರಾವಣನ ಬಳಿಗೆ ಹೋಗುತ್ತಾನೆ.
“ಹನುಮಂತನು ನನ್ನ ಪ್ರಭುಗಳಾದ ರಾಮನ ಆಹ್ವಾನವನ್ನು ರಾವಣನ ಮುಂದೆ ಪ್ರಸ್ತಾಪಿಸಾದಾಗ ರಾವಣನು ತುಂಬು ಮನಸಿನಿಂದ ಒಪ್ಪಿಕೊಳ್ಳುತ್ತಾನೆ. ಹೌದು. ಅವರು’ ವಿಧ್ಯುಕ್ತವಾದ ಮತ್ತು ಶಿವನ ಆರಾಧಕನಾದ ರಾಮನನ್ನು ಮೆಚ್ಚಿ, ನನ್ನ ಮೇಲೆ ಅಭಿಮಾನವಿಟ್ಟು ಪೂಜಾ ಕೈಂಕಾರ್ಯಕ್ಕೆ ಕರೆದ ರಾಮನ ಶಿವನ ಪೂಜೆಯ ಮನವಿಯನ್ನು ನಿರಾಕರಿಸಲಿಲ್ಲ. ಪೂಜೆಯ ಕರೆ ಸ್ವತಃ ಅವನ ಶತ್ರು ರಾಮನಿಂದ ಬಂದರೂ ಸಹ, ರಾವಣನು ರಾಮನಿಗೆ ಪೂಜೆ ಮಾಡಿಕೊಡಲು ಹನುಮನ ಜೊತೆಗೆ, ರಾಮನಿರುವಲ್ಲಿಗೆ, ಬರುತ್ತಾನೆ.
ರಾವಣನು ರಾಮನ ಸಕಲ ಪೂಜೆಯ ವ್ಯವಸ್ಥೆಯನ್ನು ಗಮನಿಸಿ, ಅಯೋಧ್ಯೆಯ ರಾಜಕುಮಾರ ರಾಮನಿಗೆ, ಈ ರೀತಿಯಾಗಿ ಹೇಳಿದರು. ಎಲ್ಲಾ ವ್ಯವಸ್ಥೆಗಳು ಅತ್ಯಾದ್ಬುತವಾಗಿವೆ. ಆದರೆ ಒಂದನ್ನು ಹೊರತುಪಡಿಸಿ, ಆಗ ಪ್ರತಿಯೊಬ್ಬರೂ ರಾವಣನ ಬಾಯಿಂದ ಯಾವ ಮಾತು ಬರಬಹುದು ಎಂದು ಎದುರು ನೋಡುತ್ತಿದ್ದಾಗ ರಾವಣ ಮಹಾಶಯ ‘ನಿಮ್ಮ ಪತ್ನಿ’ ಸೀತಾ” ಇಲ್ಲದ ಕಾರಣ ನಿಮಗೆ ಈ ಹೋಮದಲ್ಲಿನ ಪೂಜೆಯ ಫಲ ದಕ್ಕುವುದಿಲ್ಲವೆಂದಾಗ’ ಆಗ ಆ ಸ್ಥಳದಲ್ಲಿ ಸಂಪೂರ್ಣ ಮೌನ. ಪ್ರತಿಯೊಬ್ಬರಲ್ಲೂ ಫಲಕಾರಿಯಾಗದ ಪೂಜೆಯ ಕುರಿತು ಅಂತಕವೆರ್ಪಾಡುತ್ತದೆ.
ರಾಮನು ತನ್ನ ನಿಲುವನ್ನು ಈ ರೀತಿಯಾಗಿ ಪ್ರತಿಕ್ರಿಯಿಸುತ್ತಾನೆ “ಹೇ ರಾವಣ ಬ್ರಾಹ್ಮಣ ಶ್ರೇಷ್ಠ ‘ ಈ ಸಮಸ್ಯೆಗೆ ಪರಿಹಾರವನ್ನು ಸೂಚಿಸಿರಿ. ಏಕೆಂದರೆ ನೀವು ಮಹಾನ್ ಪಾಂಡಿತ್ಯ ‘ಹೊಂದಿರುವಿರಿ. ನಿಮಗೆ ತಿಳಿಯದಿರುವುದಾದರೂ ಏನಿದೆ? ಈ ಸಮಸ್ಯೆಗೆ ಪರಿಹಾರವನ್ನು ನೀವು ಸೂಚಿಸಬೇಕು.
ರಾವಣನು ರಾಮನಿಗೆ ಪ್ರತ್ಯುತ್ತರವಾಗಿ, ನಾನು ಶಿವ ಹೋಮವನ್ನು ಹಾಳುಮಾಡುವ ವ್ಯಕ್ತಿಯಾಗಲಾರೆ” ನಾನು ಒಬ್ಬ ಶಿವನ ಭಕ್ತನಾಗಿದ್ದೇನೆ, ಆದ್ದರಿಂದ ನಾನು ಪೂಜೆಯ ಸಮಾರಂಭದ ಕಾಲದಲ್ಲಿ ದೇವಿ ಸೀತೆಯನ್ನು ಕರೆತರುತ್ತೇನೆ. ಹಾಗೂ ಶಿವನ ಅಗ್ನಿ ಹೋಮ ಮುಗಿಯಲ್ಪಟ್ಟಾಗ’ ಸೀತೆಯನ್ನು ಲಂಕಾಗೆ ಕರೆದೊಯ್ಯುತ್ತೇನೆ. ಹೌದು, ರಾವಣನು ಇದನ್ನು ಮಾಡುತ್ತಾನೆ. ಶಿವನ ಪೂಜೆಯನ್ನು ಅತ್ಯುತ್ತಮ ರೀತಿಯಲ್ಲಿ, ಪೂರ್ಣಗೊಳಿಸಲಾಗುತ್ತದೆ.
ಹಾಗಾಗಿ ರಾವಣನು ಸೀತೆಯನ್ನು ಪೂಜೆಗಾಗಿ, ಕರೆತಂದು. ಪೂಜೆಯ ನಂತರ, ಭಗವಂತ ರಾಮ ಮತ್ತು ಸೀತಾ ರಾವಣನ ಪಾದಗಳನ್ನು ಮುಟ್ಟಿದಾಗ ರಾವಣನು ವಿಜಯಿಭವಃ, ಎಂದು ಹೇಳುವ ಮೂಲಕ ರಾಮನನ್ನು ಆಶೀರ್ವದಿಸುತ್ತಾನೆ . ಹಾಗೆ ಮಾಡಲು ಅವರಿಗೆ ಯಾವುದೇ ಆಯ್ಕೆ ಇರಲಿಲ್ಲ.
ಯಾರಾದರೂ ಬ್ರಾಹ್ಮಣರ ಪಾದಗಳನ್ನು ಸ್ಪರ್ಶಿಸಿದಾಗ, ಅವರು ಆ ವ್ಯಕ್ತಿಯನ್ನು ಆಶೀರ್ವದಿಸಲೇ ಬೇಕಾಗುತ್ತದೆ. ಆ ಸಂದರ್ಭದಲ್ಲಿ ರಾವಣನು ರಾಮನಿಗೆ ವಿಜಯಿಭವಃ ಎಂದ ಅಲ್ಲದೆ ತನ್ನ ಕಾಲುಗಳನ್ನು ಸ್ಪರ್ಷಿಸಿದ ಸೀತೆಗೆ, ರಾವಣನು ಧೀರ್ಘಾ ಸುಮಂಗಲಿ ಭವಃ ಎಂದು ಹೇಳುವುದರ ಮೂಲಕ ಸೀತೆಯನ್ನು ಆಶೀರ್ವದಿಸಿದನು.
ರಾವಣನು ಶಿವನ ಪೂಜೆ ಪುರೈಸಿದ ಮೇಲೆ, ರಾಮ ತಮ್ಮ ಸಮಯವನ್ನು ಪೂಜೆಯ ಭಾಗವಾಗಿ ಮಾಡಿ, ಈ ಸಮಾರಂಭಕ್ಕೆ,ಬಂದಿದ್ದಕ್ಕೆ, ರಾಮನು ರಾವಣನಿಗೆ, ಪ್ರತಿಯಾಗಿ, ಪೂಜಾ ಕಾರ್ಯದ ಶುಲ್ಕವನ್ನು ಕೊಡಲು ಹೋದಾಗ. ರಾವಣ ಶಿವನ ಪೂಜೆಗೆ ತಗುಲಿದ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ.
ರಾಮನು ಶಿವನ ಪೂಜಾ ಶುಲ್ಕ ತೆಗೆದುಕೊಳ್ಳುವಂತೆ, ಹಲವು ಬಾರಿ ರಾವಣನಿಗೆ ಬೇಡಿಕೆಯಿಟ್ಟರೂ, ರಾವಣನು ಅದನ್ನು ತಿರಸ್ಕರಿಸಿ, “ಓ ಶ್ರೀರಾಮ, ನೀನು ಚೆನ್ನಾಗಿ ತಿಳಿದಿದ್ದೀಯಾ? ,” ಈ ನನ್ನ ಜೀವವು ಹೊರಟು ಹೋಗುವಾಗ ನೀನು ನನ್ನ ಹತ್ತಿರ ನಿಲ್ಲುವೆ” ಅದೆ ನೀನು ನನಗೆ ನೀಡುವ ಶುಲ್ಕ “. ಎಂದು ಹೇಳಿ ಸೀತೆಯನ್ನು ತನ್ನ ಜೊತೆಗೆ ಲಂಕೆಗೆ ಕರೆದೊಯ್ಯುತ್ತಾನೆ.
ಕೃಪೆ: ಸಾಮಾಜಿಕತಾಣ. ಸಂಗ್ರಹ: ನರಸಿಂಹಮೂರ್ತಿ ಬರಗೂರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

