ದೊಡ್ಡಬಳ್ಳಾಪುರ, (ನ.14): ಎರಡು ತಿಂಗಳ ನಂತರ ನಡೆದ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ಎರಡು ತಿಂಗಳ ನಂತರ ಸೋಮವಾರ ಹುಂಡಿ ಕಾಣಿಕೆ ಎಣಿಕೆ ಮಾಡಲಾಗಿದ್ದು, ರೂ.72 ಲಕ್ಷ ಹಣ ಸಂಗ್ರಹವಾಗಿದೆ.

ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಘಾಟಿ ಸುಬ್ರಹ್ಮಣ್ಯ ದೇವರ ಹುಂಡಿಯಲ್ಲಿ ಹಾಕಲಾಗಿದ್ದ ಕಾಣಿಕೆಯನ್ನು ಸೋಮವಾರ ಎಣಿಕೆ ಮಾಡಲಾಯಿತು. ಹುಂಡಿ ಎಣಿಕೆಯಲ್ಲಿ ಒಟ್ಟು 73,37,098 ರೂ. ಮೊತ್ತ ಸಂಗ್ರಹವಾಗಿದೆ.

ಇದರೊಂದಿಗೆ 40 ಸಾವಿರ ರೂ ಮೌಲ್ಯದ 9 ಗ್ರಾಂ 870ಮಿಲಿ ಚಿನ್ನ, 73200 ರೂ ಮೌಲ್ಯದ 02 ಕೆಜಿ 400 ಗ್ರಾಂ ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.
ಹುಂಡಿಯನ್ನು ನಿಯಮಾನುಸಾರ ತೆಗೆದು ಎಣಿಸಲಾಗಿದ್ದು, ಎಣಿಕೆ ಕಾರ್ಯದಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು.
ಈ ವೇಳೆ ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಜೆ.ಜೆ.ಹೇಮಾವತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ.ನಾಗರಾಜ್, ಪ್ರಧಾನ ಅರ್ಚಕ ಎಸ್.ಎನ್.ಸುಬ್ಬಕೃಷ್ಣಶಾಸ್ತ್ರೀ, ದೇವಾಲಯದ ಸೂಪರ್ ಡೆಂಟ್ ರಘು ಹುಚ್ಚಪ್ಪ, ನಂಜಪ್ಪ, ಸೇರಿದಂತೆ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗ, ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ಹಣ ಎಣಿಸಲಾಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
-->
