ದೊಡ್ಡಬಳ್ಳಾಪುರ, (ನ.16): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆವತಿಯಿಂದ ಬಾಶೆಟ್ಟಿಹಳ್ಳಿಯ ಅಜಾಕ್ಸ್ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ, ಬುಧವಾರ ಆಯೋಜಿಸಲಾಗಿದ್ದ 2022-23ನೇ ಶೈಕ್ಷಣಿಕ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪನಿರ್ದೇಶ ಎನ್.ಶ್ರೀಕಂಠ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಶಿಕ್ಷಕರು ಕೇವಲ ಬೋಧನಾ ಚಟುವಟಿಕೆಗಳಿಗೆ ಸೀಮಿತರಾಗದೆ ಸಹಪಠ್ಯ ಚಟುವಟಿಕೆಗಳಿಗೂ ಆಧ್ಯತೆ ನೀಡಿ, ಮಕ್ಕಳನ್ನು ಸಹ ತೊಡಗಿಸುಕೊಳ್ಳುವಂತೆ ಪ್ರೇರೆಪಿಸಬೇಕೆಂದು.
ಸ್ಪರ್ಧೆಯಲ್ಲಿ ಸರ್ಕಾರಿ/ಅನುದಾನಿತ/ಅನುದಾನ ರಹಿತ ಶಾಲೆಗಳಿಂದ ನೂರಕ್ಕೂ ಹೆಚ್ಚು ಶಿಕ್ಷಕ/ಶಿಕ್ಷಕಿಯರು ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ 42 ಮಂದಿ ಸ್ಪರ್ಧಿಗಳಿಗೆ ಮೊದಲ ಬಹುಮಾನವಾಗಿ 1500ರೂ ನಗದು ಹಾಗೂ ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನ 1000 ರೂ ನಗದು ಹಾಗೂ ಪ್ರಶಸ್ತಿ ಪತ್ರ, ತೃತೀಯ ಬಹುಮಾನ 500ರೂ ನಗದು ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಂಗಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಜೈಕುಮಾರ್, ಕಾರ್ಯದರ್ಶಿ ಎಸ್.ವಿ.ವಸಂತಗೌಡ, ಕ್ಷೇತ್ರಸಮನ್ವಯಾಧಿಕಾರಿ ಹನುಮಂತಪ್ಪ ಹಿಂದಿನಮನಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಹೆಚ್.ನರಸಿಂಹಮೂರ್ತಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ರಾಜಶೇಖರ್, ರಾಜ್ಯ ಪರಿಷತ್ ಸದಸ್ಯ ಟಿ.ಕೆ.ಪ್ರಕಾಶ್, ಶಿಕ್ಷಕರ ಸಂಘದ ಖಜಾಂಚಿ ಕೆ.ಆರ್.ನರಸಿಂಹಮೂರ್ತಿ, ಸದಸ್ಯರಾದ ಅಮ್ಜದ್ ಖಾನ್, ಹೆಚ್.ಎ.ಶ್ರೀನಿವಾಸ್ ಮೂರ್ತಿ, ಜಿಲ್ಲಾ ಉಪಾಧ್ಯಕ್ಷೆ ಶಾಂತಮ್ಮ, ಇಲಾಖಾ ಅಧಿಕಾರಿಗಳಾದ ಎಂ.ಶ್ರೀಕಾಂತ್, ಬಿ.ವಿ.ಶಿವಕುಮಾರ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

