ಬೆಂ.ಗ್ರಾ, (ನ.18): ಜಿಲ್ಲೆಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ 2022-23ನೇ ಸಾಲಿಗೆ ಕೆಳಕಂಡ ಫಲಾನುಭವಿ ಆಧಾರಿತ ಯೋಜನೆಗಳಿಗೆ ಆನ್-ಲೈನ್ ಮತ್ತು ಆಫ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಹ ಫಲಾನುಭವಿಗಳು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 30 2022 ಕೊನೆಯ ದಿನಾಂಕವಾಗಿದೆ.

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾದ ಯೋಜನೆಗಳು: ಉನ್ನತ ಶಿಕ್ಷಣ ಪಡೆಯುವ ವಿಕಲಚೇತನರಿಗೆ ಶುಲ್ಕ ಮರುಪಾವತಿ. ಟಾಕಿಂಗ್ ಲ್ಯಾಪ್-ಟಾಪ್ ಯೋಜನೆ. ಸಾಧನ ಸಲಕರಣೆಗಳು. ಯಂತ್ರಚಾಲಿತ ದ್ವಿಚಕ್ರವಾಹನ ಯೋಜನೆ ಅಂಧ ವಿದ್ಯಾರ್ಥಿಗಳಿಗೆ ಬ್ರೇಂಲ್ ಕಿಟ್‌ಗಳ ವಿತರಣೆ.

ಸೇವಾ ಸಿಂಧು (ಸುವಿಧಾ) ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾದ ಯೋಜನೆಗಳು: ಪ್ರತಿಭಾವಂತ ಅಂಗವಿಕಲರಿಗೆ ಪ್ರೋತ್ಸಾಹಧನ ಶಿಶುಪಾಲನಾ ಭತ್ಯೆ ನಿರುದ್ಯೋಗ ಭತ್ಯೆ, ಆಧಾರ ಯೋಜನೆ, ಸಾಧನೆ ಯೋಜನೆ, ಪ್ರತಿಭೆ ಯೋಜನೆ ಹಾಗೂ ವೈದ್ಯಕೀಯ ಪರಿಹಾರ ನಿಧಿ ಯೋಜನೆ
ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ 03, ಜಿಲ್ಲಾಢಳಿತ ಭವನ ಬೀರಸಂದ್ರ ಗ್ರಾಮ ದೇವನಹಳ್ಳಿ ತಾಲ್ಲೂಕು. ದೂರವಾಣಿ ಸಂಖ್ಯೆ 080-29787441, ಗೆ ಸಂಪರ್ಕಿಸಿ ನಿಗಧಿತ ನಮೂನೆಯನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರು ನಂಜುಂಡಪ್ಪ ದೇವನಹಳ್ಳಿ ದೂರವಾಣಿ ಸಂಖ್ಯೆ 9945098701, ನಾರಾಯಣಸ್ವಾಮಿ ದೊಡ್ಡಬಳ್ಳಾಪುರ ದೂರವಾಣಿ ಸಂಖ್ಯೆ 7026967015, ರತ್ನಮಾಲ ಹೊಸಕೋಟೆ ದೂರವಾಣಿ ಸಂಖ್ಯೆ 9611999487 ಹಾಗೂ ಜ್ಯೋತಿ ನೆಲಮಂಗಲ ದೂರವಾಣಿ ಸಂಖ್ಯೆ 8310812876 ಇವರನ್ನು ಸಂಪರ್ಕಿಸಬಹುದು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
