ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗುವುದರ ಮೂಲಕ ವಿವಾದಕ್ಕೆ ಕಾರಣವಾದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಕಾಲೇಜು ಫೆಸ್ಟ್ ಅಲ್ಲಿ ಈ ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಕೂಡ ನಡೆದಿದೆ ಎಂದು ಹೇಳಲಾಗಿತ್ತು. ಈ ಕುರಿತು ನಟ ಚೇತನ್ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ಪರ ಧ್ವನಿ ಎತ್ತಿದ್ದಾರೆ.
ನಿನ್ನೆ ನಡೆದ ಕಾಲೇಜು ಫೇಸ್ಟ್ ನಲ್ಲಿ ಬೆಂಗಳೂರಿನ 3 ವಿದ್ಯಾರ್ಥಿಗಳು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ವಿನೋದಕ್ಕಾಗಿ ಮಾಡಲಾಗಿದೆ. ಈ ಕಾರಣಕ್ಕಾಗಿ ಆರ್ಯನ್, ರಿಯಾ ಮತ್ತು ದಿನಕರ್ ಅವರನ್ನು ಥಳಿಸಿದ ಬೆದರಿಸಿ ಮತ್ತು ಪೊಲೀಸ್ ಕಸ್ಟಡಿಗೆ ತಗೆದುಕೊಳ್ಳಲಾಗಿದೆ. ಇದು ಅಸಂಬಂಧ ಮತ್ತು ಅಪಾಯಕಾರಿ’ ಎಂದು ಅವರು ಫೇಸ್ಬುಕ್ ಅಲ್ಲಿ ಪೋಸ್ಟ್ ಅಲ್ಲಿ ಮಾಡಿದ್ದಾರೆ.
ಪಾಕಿಸ್ತಾನದ ಜನರು ನಮ್ಮ ಸಹೋದರಿಯರು ಮತ್ತು ಸಹೋದರರು ಶತ್ರುಗಳಲ್ಲ. ವಿದ್ಯಾರ್ಥಿಗಳನ್ನು ಥಳಿಸಿ ಬೆದರಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದು ಅಪಾಯಕಾರಿ. ವಾಕ್ ಸ್ವಾತಂತ್ರ್ಯವನ್ನು ನಾವು ಎತ್ತಿ ಹಿಡಿಯಬೇಕು ಎಂದು ವಿವಾದಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಇದೀಗ ಸಾಕಷ್ಟು ವೈರಲ್ ಆಗಿದ್ದು, ಪಾಕಿಸ್ತಾನ್ ಜಿಂದಾಬಾದ್ ಎಂದು ಕರೆದ ದೇಶದ್ರೋಹಿಗಳ ಜೊತೆ ಚೇತನ್ ನಿಂತಿದ್ದಾರೆ ಎಂದು ಕೆಲವರು ಕಾಮೆಂಟ್ ಕೂಡ ಮಾಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

