ದೊಡ್ಡಬಳ್ಳಾಪುರ, (ನ.21): ಬರಹಗಾರರು ಹಾಗೂ ದಿನಪತ್ರಿಕೆಯೊಂದರಲ್ಲಿ ಸುಮಾರು 40 ವರ್ಷಗಳ ಕಾಲ ತಾಲ್ಲೂಕು ಸುದ್ದಿ ಸಂಗ್ರಹಕರಾಗಿ ಸೇವೆಸಲ್ಲಿದ್ದ ಎಂ.ಎಸ್.ಸಂಪತ್ತಯ್ಯಂಗಾರ್ (95ವರ್ಷ) ಸೋಮವಾರ ವಯೋಸಹಜ ಆರೋಗ್ಯದ ಸಮಸ್ಯೆಯಿಂದ ನಿಧನ ಹೊಂದಿದ್ದಾರೆ.

ದೊಡ್ಡಬಳ್ಳಾಪುರ ಪುರಸಭೆಗೆ ಸತತ ಐದು ಬಾರಿ ಸದಸ್ಯರಾಗಿ, ಉಪಾಧ್ಯಕ್ಷ ರಾಗಿ ಸೇವೆ ಸಲ್ಲಿದ್ದ ಅವರು ಸಾಂಸ್ಕೃತಿಕ, ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು.

ಸಾಂಪ್ರದಾಯಿಕ ಪಾಕಶಾಸ್ತ್ರ, ನಾಳೆ ತಿಂಡಿ ಏನು ? ಸುಗುಣ ಕುಬೇರ ಮತ್ತು ಇತರ ಕಥೆಗಳು ಸೇರಿದಂತೆ ಕಥಾ ಸಂಕಲನ ಪುಸ್ತಕಗಳನ್ನು ತಮ್ಮದೇ ಅದ ವಿಭಾಶ್ರೀ ಪ್ರಕಾಶನದ ಮೂಲಕ ಪ್ರಕಟಿಸಿದ್ದರು.
ದೊಡ್ಡಬಳ್ಳಾಪುರ ಸಾಧಕರನ್ನು ಕುರಿತ ‘ಮಣಿಮಾಲೆ’ ಪುಸ್ತಕದ ಸಂಪಾದಕರಾಗಿದ್ದರು.
ಶ್ರೀವೈಷ್ಣವ ಮತ್ತಿತರ ಸಸ್ಯಹಾರಿ ವಿಶೇಷ ಖಾದ್ಯಗಳ ತಯಾರಿಕೆ ಕುರಿತ ‘ಸಾಂಪ್ರದಾಯಿಕ ಪಾಕಶಾಸ್ತ್ರ’ ಇಂಗ್ಲಿಷ್ ಗೂ ಅನುವಾದವಾಗಿ ವಿದೇಶಗಳಲ್ಲೂ ಖ್ಯಾತಿಗಳಿಸಿ ಎರಡು ಮುದ್ರಣಗಳನ್ನು ಕಂಡಿದೆ.
ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಮೃತರ ದೇಹವನ್ನು ಕೋಲಾರದ ದೇವರಾಜ ಅರಸ್ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ.
ಸೋಮವಾರ ಸಂಜೆ ಡಿ.ಕ್ರಾಸ್ ಸಮೀಪದ ಮೃತರ ಸ್ವಗೃಹದಿಂದ ದೇಹವನ್ನು ಕೊಂಡೊಯ್ಯಲಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
