ದೊಡ್ಡಬಳ್ಳಾಪುರ, (ನ.24): ತಮ್ಮ ಸುತ್ತಲೂ ಇರುವ ಸಂಬಂಧಗಳನ್ನು ಗಟ್ಟಿಯಾಗಿ ಕಟ್ಟಿಕೊಳ್ಳಲು, ಮಕ್ಕಳಿಗೆ ವಿದ್ಯಾರ್ಥಿ ಹಂತದಿಂದಲೆ ಓದಿನೊಂದಿಗೆ ಸಂಸ್ಕಾರದ ಗ್ರಹಿಕೆಯ ಪ್ರಜ್ಞೆಗಳನ್ನು ತುಂಬುವುದು ಶಿಕ್ಷಕರ ಪೋಷಕರ ಕರ್ತವ್ಯವಾಗಿದೆ ಎಂದು ದೇವರಾಜು ಅರಸು ಪ್ರಥಮ ದರ್ಜೆ ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಎಂ.ಚಿಕ್ಕಣ್ಣ ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಜಾಗೃತ ಪರಿಷತ್ ವತಿಯಿಂದ ನಡೆಯುತ್ತಿರುವ ನವಂಬರ್ ತಿಂಗಳ ಸಾಹಿತ್ಯ-ವಿಜ್ಞಾನ- ಸಂಸ್ಕೃತಿ ಸಮಾಗಮ ಕಾರ್ಯಕ್ರಮ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮಗಳ ಅಂಗವಾಗಿ, ತೂಬಗೆರೆ ಹೋಬಳಿ ಕಸಾಪ ಘಟಕದಿಂದ ತೂಬಗೆರೆ ಸರ್ಕಾರಿ ಪ್ರೌಡಶಾಲೆಯಲ್ಲಿ ಬುಧವಾರ ನಡೆದ ಸಾಹಿತ್ಯ-ವಿಜ್ಞಾನ-ಸಂಸ್ಕೃತಿ ಸಮಾಗಮ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಸಾಹಿತ್ಯ, ಸಂಸ್ಕಾರ, ವಿಜ್ಞಾನ ಇಲ್ಲದ ಬದುಕು ಅಭದ್ರತೆಯ ನೆರಳಲ್ಲೆ ಜೀವಿಸಬೇಕಾಗುತ್ತದೆ. ಇಂತಹ ಸೂಕ್ಷ್ಮ ವಿಷಯಗಳನ್ನು ವಿದ್ಯಾರ್ಥಿಗಳು ಗ್ರಹಿಸಿದರೆ ಮಾತ್ರ ಮಕ್ಕಳು ಓದಿನೊಂದಿಗೆ ಸಂಸ್ಕಾರಯುತ ಬದುಕು ಕಟ್ಟಿಕೊಳ್ಳಲು ಸಾಧ್ಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಸ್ತುತ ಆಧುನಿಕ ಶಿಕ್ಷಣ ಪದ್ದತಿ ಮಾನವೀಯತೆ ಇಲ್ಲದ ವಿದ್ಯಾವಂತರನ್ನು ಸೃಷ್ಢಿಸುತ್ತಿದೆ. ಅಂಕಗಳಿಗೆ ಮಾತ್ರ ಪ್ರಾಶಸ್ತ್ಯ ನೀಡುವ ಇಂದಿನ ಶಿಕ್ಷಣವೂ ದೇಶಕ್ಕೆ ಬೇಕಾದ ಸದೃಡ ನಾಯಕರನ್ನು ನೀಡುವಲ್ಲಿ ವೈಪಲ್ಯ ಕಾಣುತ್ತಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರೌಡಶಾಲೆಯ ಮುಖ್ಯಶಿಕ್ಷಕ ಗಿರೀಶ್ ಮಾತನಾಡಿ, ಆಯಾ ಕಾಲಮಾನಕ್ಕೆ ತಕ್ಕಂತೆ ಮನುಷ್ಯರನ್ನು ತಿದ್ದುವಲ್ಲಿ ಸಾಹಿತ್ಯ ಪ್ರಕಾರಗಳ ಬದಲಾಗುತ್ತಿರುತ್ತವೆ. ಹೀಗಾಗಿ ಆಯಾ ಕಾಲಮಾನದ ಸಮಸ್ಯೆಗಳ ಅರಿನೊಂದಿಗೆ ಹೊಸ ಸಾಹಿತಿಗಳು ಹುಟ್ಟುವುದದು ಅನಿವಾರ್ಯವಾಗಿದೆ. ಇಂತಹ ಸದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ತೂಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಬಾಬು, ಅಭಿವೃದ್ಧಿ ಅಧಿಕಾರಿ ವೆಂಕಟೇಶ್, ಸದಸ್ಯರಾದ ಶಿವಣ್ಣ, ಕಸಾಪ ತೂಬಗೆರೆ ಹೋಬಳಿ ಘಟಕ ಅಧ್ಯಕ್ಷ ರಾಜೇಶ್.ಎಸ್.ಜಿ ಮುಕ್ಕೇನಹಳ್ಳಿ, ಗೌರವ ಕಾರ್ಯದರ್ಶಿ ಉದಯಾರಾಧ್ಯ, ಪದಾಧಿಕಾರಿಗಳಾದ ನಾರಾಯಣ್, ಶ್ರೀಧರ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

