ಒಂದು ಊರಿನಲ್ಲಿ ಒಬ್ಬ ರಾಜನಿದ್ದನು, ಆ ರಾಜ್ಯದಲ್ಲಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಇದ್ದ ಕಾರಣ ಆ ರಾಜ ಆಗಾಗ ಬೇಟೆಗೆಂದು ಕಾಡಿಗೆ ಹೋಗಿ ಕ್ರೂರ ಮೃಘಗಳನ್ನು ಬೇಟೆಯಾಡಿ ಬರುತ್ತಿದ್ದನು.
ಒಮ್ಮೆ ಇದೆ ರೀತಿ ಬೇಟೆಗೆಂದು ಹೊರಡುವ ಸಮಯದಲ್ಲಿ ತನ್ನ ಅರಮನೆಯಲ್ಲಿನ ರಾತ್ರಿ ಸೆಕ್ಯೂರಿಟಿ (ಭದ್ರತಾ ಸಿಬ್ಬಂದಿ) ದೊರೆಯನ್ನು ತಡೆದು ಮನವಿ ಮಾಡಿದನು, ಮಹಾಪ್ರಭು ನೀವು ಈ ದಿನ ಬೇಟೆಗೆ ಹೋಗುವುದರಿಂದ ಅನಾವುತ ಸಂಭವಿಸಬಹುದು ಎಂದು ನನಗೆ ಅನಿಸುತ್ತಿದೆ ಆದ್ದರಿಂದ ನೀವು ತಪ್ಪು ಭಾವಿಸದೆ, ಈ ದಿನದ ಬದಲು ಬೇರೆ ದಿನ ಹೋಗಿರೆಂದು ಬೇಡಿಕೊಳ್ಳುತ್ತಾನೆ.
ಅದಕ್ಕೆ ರಾಜ ಏಕೆ ಈ ರೀತಿ ಹೇಳುತ್ತಿರುವೆ ನನಗೆ ತೊಂದರೆ ಸಂಭವಿಸಬಹುದು ಎಂದು ಹೇಗೆ ಹೇಳುತ್ತೀಯಾ ಎಂದು ಕೇಳಿದಾಗ, ಸೆಕ್ಯೂರಿಟಿ ಹೇಳುತ್ತಾನೆ ಮಹಾಪ್ರಭು ರಾತ್ರಿ ನನ್ನ ಸ್ವಪ್ನದಲ್ಲಿ (ಕನಸಲ್ಲಿ) ನೀವು ಬೇಟೆಗೆ ಹೋಗುವ ಅರಣ್ಯ ದಾರಿಯಲ್ಲಿ ಜೋರಾದ ಚಂಡ ಮಾರುತ ಬಂದು ತುಂಬಾ ಕಷ್ಟ ನಷ್ಟಗಳು ಆಗುತ್ತವೆ ಎಂಬ ಕನಸು ಕಂಡೆ, ಆದರಿಂದ ಈ ದಿನ ಬಿಟ್ಟು ಬೇರೆ ದಿನ ಹೋಗಿ ಎಂದು ಕೇಳಿಕೊಳ್ಳುತ್ತಾನೆ.
ಅದಕ್ಕೆ ಒಪ್ಪಿದ ರಾಜ ಅಂದು ಬೇಟೆಗೆ ಹೋಗುವುದಿಲ್ಲ, ಆ ಸೆಕ್ಯೂರಿಟಿ ಹೇಳಿದ ರೀತಿಯೇ ಆ ಕಾಡಿನಲ್ಲಿ ಅಂದು ಜೋರಾದ ಚಂಡಮಾರುತ ಬಂದು ಎಷ್ಟೋ ನಷ್ಟಗಳು ತಪ್ಪುತ್ತದೆ,
ಇದರಿಂದ ಸಂತೋಷಗೊಂಡ ರಾಜ ಆ ಸೆಕ್ಯೂರಿಟಿಯನ್ನು ಕರೆದು ಅವನ ಜೀವನೋಪಾಯಕ್ಕೆ ಸ್ವಲ್ಪ ಹಣ ಕೊಟ್ಟು ಹೇಳುತ್ತಾನೆ, ನೀನು ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದು. ಗಲಿಬಿಲಿಗೊಂಡ ಸೆಕ್ಯೂರಿಟಿ ಸ್ವಾಮೀ ನಾನು ಏನು ತಪ್ಪು ಮಾಡಿದೆ ಎಂದು ನನ್ನನ್ನು ಕೆಲಸದಿಂದ ತೆಗೆಯುತ್ತಿದ್ದಿರಾ..? ನಿಮ್ಮ ಪ್ರಾಣ ಉಳಿಸಿದಕ್ಕೆ ಇದೇನಾ ಶಿಕ್ಷೆ ಎಂದು ಕೇಳುತ್ತಾನೆ..!!
ಪ್ರತ್ಯುತ್ತರವಾಗಿ ರಾಜ ಅರಮನೆಯಲ್ಲಿ ನಿನ್ನ ಕೆಲಸ ಏನು ರಾತ್ರಿ ವೇಳೆಯ ಸೆಕ್ಯೂರಿಟಿ ಕೆಲಸ, ಅದನ್ನು ಬಿಟ್ಟು ನೀನು ಕನಸು ಕಾಣುತ್ತಿದ್ದೀಯ ಎಂದರೆ..? ನೀನು ಸರಿಯಾಗಿ ಕೆಲಸ ನಿರ್ವಯಿಸುತ್ತಿಲ್ಲ. ರಾತ್ರಿ ವೇಳೆಯಲ್ಲಿ ನೀನು ನಿದ್ರಿಸುತ್ತಿರುವೆ ಎಂದು ಇದರಲ್ಲೇ ತಿಳಿಯುತ್ತದೆ, ಇದೆ ಕಾರಣಕ್ಕೆ ನಿನ್ನನ್ನು ಕೆಲಸದಿಂದ ವಜಾ ಗೊಳಿಸುತ್ತಿರುವೆ ಎಂದು ಹೇಳಿ ಕಳುಹಿಸುತ್ತಾನೆ ,
ಸಂಗ್ರಹ: ಸಾಮಾಜಿಕ ಜಾಲತಾಣ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

