ಭಗವದ್ಗೀತೆಯಲ್ಲಿ ಅರ್ಜುನನು ಶ್ರೀಕೃಷ್ಣನಿಗೆ ನೀನು ಹೇಳಿದಂತೆ ಯೋಗವನ್ನು ಸಿದ್ದಿ ಮಾಡಿಕೊಳ್ಳುವುದು ಕಷ್ಟ ಸಾಧ್ಯ ಎಂದಾಗ ಶ್ರೀಕೃಷ್ಣ ‘ ಅಭ್ಯಾಸೇನ ತು ಕೌಂತೇಯ, ಪ್ರಯತ್ನಂ ಚ ಪರಂತಪ ‘ ಎನ್ನುತ್ತಾನೆ. ಅಂದರೆ ಸತತ ಪ್ರಯತ್ನದಿಂದ ( ತಾಳ್ಮೆಯಿಂದ ) ಎಲ್ಲವೂ ಸಾಧ್ಯ.
ಇಂಗ್ಲಿಷ್‌ನಲ್ಲಿ ಒಂದು ಸುಂದರ ಪದ್ಯವಿದೆ cobweb story ಅಂತ ಅದರಲ್ಲಿ ಒಂದು ಜೇಡರಹುಳು ಗೋಡೆಯ ಮೇಲಿನ ಮೂಲೆಯಲ್ಲಿ ಬಲೆ ನೇಯಲು ಆರು ಸಲ ಮೇಲೆ ಹೋಗಿ ಮತ್ತೆ ಬೀಳುತ್ತದೆ. ಆದರೂ ಛಲ ಬಿಡದೆ ಏಳನೇ ಸಲ ಸಫಲವಾಗುತ್ತದೆ.
ಈ ಸಣ್ಣಹುಳುವಿನ ತಾಳ್ಮೆ ನಮಗೆ ಮಾದರಿಯಾಗುತ್ತದೆ. ಇನ್ನು ತಾಳ್ಮೆಗೆಟ್ಟು ಆಗುವ ಅನಾಹುತಗಳಿಗೆ ವಿಶ್ವಾಮಿತ್ರರು ತಾಳ್ಮೆಗೆಟ್ಟು ಮನ್ಮಥನಿಗೆ ಶಾಪ ಕೊಟ್ಟ ಕಥೆಯನ್ನು ಉದಾಹರಿಸಬಹುದು.
ಕುಂತಿ ದೇವಿಗೆ ಧರ್ಮರಾಜ ಹುಟ್ಟಿದ್ದ ಕಾರಣ ಗಾಂಧಾರಿ ತಾಳ್ಮೆ ಕಳೆದುಕೊಂಡು ಹೊಟ್ಟೆಗೆ ಗುದ್ದಿಕೊಂಡಿದ್ದರಿಂದ ನೂರೊಂದು ಕೌರವಾದಿಗಳು ಜನಿಸಿದರು.
ದೀರ್ಘ ತಪಸ್ಸಿನಲ್ಲಿದ್ದ ಕೌಶಿಕ ಋಷಿಗಳು ಮರದ ಮೇಲಿನ ಪಕ್ಷಿ ತಮ್ಮ ಮೈಮೇಲೆ ಹೊಲಸು ಮಾಡಿತೆಂದು ತಾಳ್ಮೆಗೆಟ್ಟು ತಮ್ಮ ದೃಷ್ಟಿಯಿಂದ ಪಕ್ಷಿಯನ್ನು ಸುಟ್ಟು ತಮ್ಮ ತಪಃಶಕ್ತಿ ಕಳೆದುಕೊಳ್ಳುತ್ತಾರೆ. ಆದ್ದರಿಂದ ತಾಳ್ಮೆಯೇ ಜೀವನ ತತ್ತ್ವ ವಾಗಬೇಕು, ತಾಳ್ಮೆಯೇ ಜೀವನವಾಗಬೇಕು.
ಕೃಪೆ: ಫೇಸ್ಬುಕ್.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

