ದೊಡ್ಡಬಳ್ಳಾಪುರ, (ಡಿ.05): ನಗರದ ಮುತ್ಯಾಲಮ್ಮ ದೇವಾಲಯದ ಸಮೀಪದ ರಸ್ತೆಯಲ್ಲಿ ಮಹಿಳೆಯೋರ್ವವರ ಮಾಂಗಲ್ಯ ಸರ ಕಳ್ಳತನದ ನಡೆದಿದೆ.
ಶಾಂತಿ ನಗರದ ನಿವಾಸಿ ಎನ್ನಲಾಗುತ್ತಿರುವ ನಿರ್ಮಲ ಎನ್ನುವವರು ಸೋಮವಾರ ರಾತ್ರಿ 8ರ ವೇಳೆ ಮನೆಗೆ ಹಾಲು ತರಲೆಂದು ತೆರಳಿದ್ದ ವೇಳೆ, ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ದುಸ್ಕರ್ಮಿಯೋರ್ವ, ಸುಮಾರು 15 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ನಗರ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

