ದೊಡ್ಡಬಳ್ಳಾಪುರ, (ಡಿ.08): ವಿಶ್ವ ಹಿಂದು ಪರಿಷದ್ – ಬಜರಂಗದಳದ ವತಿಯಿಂದ ದತ್ತಮಾಲಾ ಯಾತ್ರೆ ಬುಧವಾರ ರಾತ್ರಿ ಕೈಗೊಳ್ಳಲಾಯಿತು.
08ನೇ ವರ್ಷದ ದತ್ತಮಾಲಾ ಯಾತ್ರೆಯ ಅಂಗವಾಗಿ ನಗರ ತೇರಿನ ಬೀದಿಯಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ದತ್ತಾತ್ರೇಯ ಸ್ವಾಮಿ ಭಾವಚಿತ್ರದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಭಜನೆ ನಡೆಸಲಾಯಿತು.
ಈ ವೇಳೆ ವಿಶ್ವ ಹಿಂದು ಪರಿಷದ್ – ಬಜರಂಗದಳ ದೊಡ್ಡಬಳ್ಳಾಪುರ ಪ್ರಖಂಡದ ಅಧ್ಯಕ್ಷ ಮಧುಸೂದನ್, ಕಾರ್ಯದರ್ಶಿ ರವಿ, ತಾಲೂಕು ಸಹ ಸಂಯೋಜಕ್ ಸುಮಂತ್, ನಗರ ಸಂಯೋಜಕ್ ವಿಜಯ್ ಆರಾಧ್ಯ, ಸಹ ಸಂಯೋಜಕ್ ನವೀನ್ ಸೇರಿದಂತೆ ನೂರಕ್ಕು ಹೆಚ್ಚು ಪದಾಧಿಕಾರಿಗಳು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

