ಚಿಕ್ಕಬಳ್ಳಾಪುರ, (ಡಿ.10): ವಿಶ್ವವಿಖ್ಯಾತ ನಂದಿಗಿರಿಧಾಮ, ಪ್ರೇಮಿಗಳ ಪಾಲಿನ ಹಾಟ್ ಫೇವರೆಟ್ ತಾಣ, ಬೆಂಗಳೂರಿಗರ ಪಾಲಿನ ವಿಕೇಂಡ್ ಹಾಟ್‍ಸ್ಫಾಟ್ ನಂದಿಬೆಟ್ಟಕ್ಕೆ ರಾಕಿಂಗ್ ಸ್ಟಾರ್ ಯಶ್ ದಂಪತಿ ಭೇಟಿ ನೀಡಿ ನಂದಿಗಿರಿಧಾಮದ ಸೌಂದರ್ಯ ಕಣ್ತುಂಬಿಕೊಂಡಿದ್ದಾರೆ.
ಅಂದಹಾಗೆ ಕಳೆದ ಎರಡು ದಿನಗಳಿಂದ ಮಾಂಡೌಸ್ ಸೈಕ್ಲೋನ್ ಎಫೆಕ್ಟ್ ನಿಂದ ಕೂಲ್ ಕೂಲ್ ನಂದಿಬೆಟ್ಟ ಮತ್ತಷ್ಟು ಮಗದಷ್ಟು ಕೂಲ್ ಆಗಿದ್ದು, ಶುಕ್ರವಾರ ಬೆಳಿಗ್ಗೆ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಪತ್ನಿ ರಾಧಿಕಾ ಪಂಡಿತ್ ನಂದಿಬೆಟ್ಟಕ್ಕೆ ಆಗಮಿಸಿ ನಂದಿಬೆಟ್ಟದ ಪ್ರಾಕೃತಿಕ ಸೊಬಗನ್ನ ಸವಿದಿದ್ದಾರೆ.
ಬೆಳಿಗ್ಗೆ 6.30 ರ ಸುಮಾರಿಗೆ ನಂದಿಗಿರಿಧಾಮಕ್ಕೆ ಆಗಮಿಸಿರುವ ದಂಪತಿ ನಂದಿಬೆಟ್ಟದ ಮೇಲೆ ಕೆಲ ಕಾಲ ರೌಂಡ್ಸ್ ಹಾಕಿದ್ದು, ಮಯೂರ ಹೋಟೆಲ್ ನಲ್ಲಿ ತಿಂಡಿ ತಿಂದು ಮರಳಿ ವಾಪಾಸ್ಸಾಗಿದ್ದಾರೆ.
ಇನ್ನೂ ಸಹಜವಾಗಿ ನಟ ಯಶ್ ಹಾಗೂ ರಾಧಿಕಾ ಪಂಡಿತ್ ರನ್ನ ನೋಡುತ್ತಿದ್ದಂತೆ ಪ್ರವಾಸಿಗರು ಸಹ ನಾ ಮುಂದು ತಾ ಮುಂದು ಅಂತ ನೋಡಲು ಮುಗಿಬಿದ್ದಿದ್ದಾರೆ. ಕೆಲವರು ಪೋಟೋ ಸೆಲ್ಫಿ ತಗೊಂಡು ಖುಷಿಯಾಗಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

