
ದೊಡ್ಡಬಳ್ಳಾಪುರ, (ಡಿ.13): ತಾಲೂಕಿನ ಕನಸವಾಡಿ ನೇತಾಜಿ ಪ್ರೌಢಶಾಲೆಯಲ್ಲಿ ದಿ.ಜಿ.ಸತೀಶ್ ರವರ ಸ್ಮರಣಾರ್ಥ ಆಯೋಜಿಸಿದ್ದ, ಒಂಬತ್ತನೇ ಅಂತರ್ ಪ್ರೌಢಶಾಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನಗರದ ಸರಸ್ವತಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು, ಪೋಷಕರೊಂದಿಗೆ ಒಂದು ದಿನ ವಿಮಾನದಲ್ಲಿ ಪ್ರವಾಸ ಕೈಗೊಳ್ಳುವ ಬಹುಮಾನ ಗಿಟ್ಟಿಸಿದ್ದಾರೆ.

ಸರಸ್ವತಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಶ್ರೇಯಸ್ ಹಾಗೂ ನಿಖಿಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು, ತಲಾ ರೂ.1500/ನಗದು ಬಹುಮಾನ ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಮಾನದಲ್ಲಿ ಪ್ರವಾಸ: ವಿಜೇತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿ ನಗರದ ಖಾಸ್‍ಭಾಗ್ ಹತ್ತಿರವಿರುವ ಗಂಗಾನರ್ಸಿಂಗ್ ಹೋಂನ ಡಾ.ರಮೇಶ್‍ಗೌಡ ಅವರು ವಿಜೇತ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ವಿಮಾನದಲ್ಲಿ ಒಂದು ದಿನದ ಮಂಗಳೂರು ಪ್ರವಾಸವನ್ನು ಕರೆಯುವುದಾಗಿ ತಿಳಿಸಿ, ಮುಂಗಡ ಟಿಕೆಟ್ ಕಾಯ್ದಿರಿಸಿದ್ದಾರೆ.
ಇಂದು ಶಾಲೆಯ ಆವರಣದಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎ.ಸುಬ್ರಮಣ್ಯ ಅಭಿನಂದಿಸಿದರು.
ಈ ವೇಳೆ ಮುಖ್ಯ ಶಿಕ್ಷಕರಾದ ಬಿ.ಕೆ.ಸಂಪತ್‍ಕುಮಾರ್, ಶಿಕ್ಷಕಿ ನಸೀಮ್‍ತಾಜ್ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
