ಹರಿತಲೇಖನಿ ದಿನಕ್ಕೊಂದು ಕಥೆ: ಅಂಡ್ರೋ ಕ್ಲಸ್ ಮತ್ತು ಸಿಂಹ

ಬಹಳ ವರ್ಷಗಳ ಹಿಂದೆ ರೋಮ್‌ನಲ್ಲಿ ಅಂಡ್ರೋ ಕ್ಲಸ್ ಎಂಬ ಗುಲಾಮನಿದ್ದ. ಅವನ ಯಜಮಾನ ಬಹಳ ಕ್ರೂರಿಯಾಗಿದ್ದ. ಯಾವಾಗಲೂ ಅವನನ್ನು ಹಿಂಸಿಸುತ್ತಿದ್ದ. ಚಿಕ್ಕ ವಿಷಯಕ್ಕೂ ಅವನಿಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದ. ಇದರಿಂದ ಬೇಸರ ಗೊಂಡ ಅಂಡ್ರೋಕ್ಲಸ್ ಊರು ಬಿಟ್ಟು ಕಾಡಿಗೆ ಓಡಿಹೋದ. 

ಕಾಡಿಗೆ ಹೋಗಿ ಮರದ ಪೊಟರೆಯೊಂದರಲ್ಲಿ ಜೀವಿಸತೊಡಗಿದ. ಕಾಡಿನಲ್ಲಿ ಆಹಾರ ಸಿಗದೆ ಹಸಿವೆಯಿಂದ ಬಳಲತೊಡಗಿದ. ಜೊತೆಗೆ ಜ್ವರ ಕೂಡ ಅವನನ್ನು ಬಾಧಿಸಿತು. ಆಹಾರ ಅರಸುತ್ತಾ ಸುಸ್ತಾಗಿ ಒಂದು ಗುಹೆಯಲ್ಲಿ ಬಂದು ಮಲಗಿದ. ಸ್ವಲ್ಪ ಹೊತ್ತು ಕಳೆದ ಬಳಿಕ ಒಂದು ಭಯಂಕರ ಶಬ್ದ ಕೇಳಿ ಎಚ್ಚರಗೊಂಡ. ನೋಡಿದರೆ ಸಿಂಹವೊಂದು ಅವನ ಮುಂದೆ ನಿಂತಿದೆ.

ಅಂಡ್ರೋ ಕ್ಲಸ್, ಸಿಂಹ ತನ್ನನ್ನು ಕೊಲ್ಲುತ್ತದೆ ಎಂದು ಭಯಭೀತನಾಗಿ ಸುಮ್ಮನೆ ನಿಂತುಬಿಟ್ಟ. ಆದರೆ ಸಿಂಹ ಏನೂ ತೊಂದರೆ ಕೊಡದೆ ತನ್ನ ಕಾಲನ್ನು ಅಂಡ್ರೋಕ್ಲಸ್‌ನ ಮುಂದೆ ಚಾಚಿತು. ಅದು ಕಾಲಿಗೆ ಮುಳ್ಳು ಚುಚ್ಚಿಸಿಕೊಂಡು ನೋವಿನಿಂದ ನರಳಾಡುತಿತ್ತು. ಅಂಡ್ರೋಕ್ಲಸ್ ತನ್ನ ಉಗುರುಗಳ ಸಹಾಯದಿಂದ ಸಿಂಹದ ಕಾಲಿಗೆ ಚುಚ್ಚಿಕೊಂಡಿದ್ದ ಮುಳ್ಳನ್ನು ಹೊರತೆಗೆದ.

ಸಂತೋಷಗೊಂಡ ಸಿಂಹ ಕುಣಿದು ಕುಪ್ಪಳಿಸತೊಡಗಿತು. ತನ್ನ ಹೊಸ ಸ್ನೇಹಿತ ಅಂಡ್ರೋಕ್ಲಸ್‌ನಿಗೆ ಹಸ್ತಲಾಘವ ಮಾಡಿ ಧನ್ಯವಾದ ಹೇಳಿತು. ಇದಾದ ಬಳಿಕ ಅಂಡ್ರೋಕ್ಲಸ್ ಮತ್ತು ಸಿಂಹ ಒಂದೇ ಗುಹೆಯಲ್ಲಿ ವಾಸಿಸತೊಡಗಿದರು.

ಒಟ್ಟಿಗೆ ಸ್ನೇಹಿತರಂತೆ ಬಾಳತೊಡಗಿದರು. ಸಿಂಹ ದಿನಾಲೂ ಅಂಡ್ರೋಕ್ಲಸ್‌ನಿಗೆ ತಿನ್ನಲು ಆಹಾರ ತರುತ್ತಿತ್ತು. ಸುಮಾರು ದಿನಗಳು ಉರುಳಿದ ಬಳಿಕ ಕಾಡಿಗೆ ಬೇಟೆಗೆಂದು ಬಂದ ಸೈನಿಕರು ಗುಹೆಯಲ್ಲಿ ಅಂಡ್ರೋಕ್ಲಸ್‌ನನ್ನು ಕಂಡು ಆತನನ್ನು ಊರಿಗೆ ಕರೆದುಕೊಂಡು ಹೋಗುತ್ತಾರೆ. ಆಗ ಸಿಂಹಕ್ಕೆ ಬಹಳ ದುಃಖವಾಯಿತು.

ಆ ಕಾಲದಲ್ಲಿ ಯಾರಾದರೂ ಗುಲಾಮರು ತಪ್ಪಿಸಿಕೊಂಡು ಹೋದರೆ ಅವರನ್ನು ಹಸಿದ ಸಿಂಹದ ಬಾಯಿಗೆ ಹಾಕಿ ಕಾದಾಟ ನೋಡುತ್ತ ಮಜಾ ತೆಗೆದುಕೊಳ್ಳುವ ಅಮಾನವೀಯ ಸಂಪ್ರದಾಯ ಜಾರಿಯಲ್ಲಿತ್ತು. ಆ ಕಾದಾಟದ ದಿನದಂದು ಸಾವಿರಾರು ಮಂದಿ ದೊಡ್ಡ ಮೈದಾನದಲ್ಲಿ ಕಿಕ್ಕಿರಿದು ಸೇರಿದ್ದರು. ಪ್ರಾಣಭಯದಿಂದ ಅಂಡ್ರೋಕ್ಲಸ್ ಮೆಲ್ಲನೆ ಅಲ್ಲಿಗೆ ಬರುತ್ತಾನೆ. ಸುತ್ತ ನೋಡಿದರೆ ಜನವೋ ಜನ. ಆದರೆ ಅವನ ಮೇಲೆ ಕರುಣೆ ತೋರುವವರು ಯಾರೂ ಇರಲಿಲ್ಲ.

ಎಲ್ಲರೂ ಕೇಕೆ ಹಾಕಿ, ಶಿಳ್ಳೆ ಹೊಡೆದು ಸಂಭ್ರಮಿಸುತ್ತಿದ್ದರು. ಅವನನ್ನು ಹಸಿದ ಸಿಂಹ ಇರುವ ಬೋನಿನ ಬಳಿ ತರಲಾಯಿತು. ಅಂಡ್ರೋಕ್ಲಸ್ ಅಳುತ್ತಾ, ಹೆದರಿಕೆಯಿಂದ ಸಿಂಹದ ಬಳಿ ಬಂದ. ಘರ್ಜಿಸುತ್ತಾ ಅಂಡ್ರೋಕ್ಲಸ್‌ನ ಬಳಿ ಬಂದ ಸಿಂಹ ಒಮ್ಮೆಲೇ ನಿಂತು ಬಿಟ್ಟಿತು. ಅವತ್ತು ಕಾಡಿನಲ್ಲಿ ಅಂಡ್ರೋಕ್ಲಸ್ ಮುಳ್ಳು ತೆಗೆದಿದ್ದ ಅದೇ ಸಿಂಹವಾಗಿತ್ತು ಅದು. ಅಂಡ್ರೋಕ್ಲಸ್ ಅಂದು ತನಗೆ ಮಾಡಿದ ಉಪಕಾರವನ್ನು ನೆನೆದು ಸಿಂಹ ಸುಮ್ಮನೆ ನಿಂತುಬಿಟ್ಟಿತು. ಅಂಡ್ರೋಕ್ಲಸ್ ತುಂಬಾ ಸಂತಸಗೊಂಡ. ಸಿಂಹವನ್ನು ಅಪ್ಪಿ ಮುದ್ದಾಡಿದ.

ನೋಡುತಿದ್ದವರೆಲ್ಲಾ ಆಶ್ಚರ್ಯಚಕಿತರಾಗಿ ಇವರನ್ನೇ ಗಮನಿಸುತಿದ್ದರು. ಅಂಡ್ರೋಕ್ಲಸ್ ಸಿಂಹದ ಬಳಿ ಆಟವಾಡುತ್ತಾ ಇದ್ದ. ಇದು ಹೇಗೆ ಸಾಧ್ಯ ಎಂದು ಅಲ್ಲಿದ್ದವರು ಕೇಳಿದ್ದಕ್ಕೆ ಅಂಡ್ರೋಕ್ಲಸ್ ಎಲ್ಲವನ್ನೂ ವಿವರಿಸಿದ. ಅಲ್ಲಿದ್ದವರು ಇಬ್ಬರನ್ನೂ ಬಿಡುಗಡೆ ಮಾಡಿ ಎಂದು ಜೋರಾಗಿ ಕೂಗತೊಡಗಿದರು. ಸಿಂಹ ಮತ್ತು ಅಂಡ್ರೋಕ್ಲಸ್ ನನ್ನು ಬಂಧನದಿಂದ ಬಿಡುಗಡೆ ಮಾಡಿದರು. ಅದಾದಮೇಲೆ ಸುಮಾರು ವರ್ಷಗಳ ಕಾಲ ಅಂಡ್ರೋಕ್ಲಸ್ ಮತ್ತು ಸಿಂಹ ಒಟ್ಟಿಗೆ ಅನ್ಯೋನ್ಯತೆಯಿಂದ ಕಾಡಿನಲ್ಲಿದ್ದರು.

ಕೃಪೆ: ಸಿನಾನ್ ಇಂದಬೆಟ್ಟು. ಸಂಗ್ರಹ: ನರಸಿಂಹಮೂರ್ತಿ ಬರಗೂರು. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ದೊಡ್ಡಬಳ್ಳಾಪುರದಲ್ಲಿ JDS ಪ್ರತಿಭಟನೆ..!: ಕಾಂಗ್ರೆಸ್ ವಿರುದ್ಧ ಹರೀಶ್ ಗೌಡ ವಾಗ್ದಾಳಿ

ದೊಡ್ಡಬಳ್ಳಾಪುರದಲ್ಲಿ JDS ಪ್ರತಿಭಟನೆ..!: ಕಾಂಗ್ರೆಸ್ ವಿರುದ್ಧ ಹರೀಶ್ ಗೌಡ ವಾಗ್ದಾಳಿ

ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿ ಮಾಡಲು ಅವಕಾಶ ಕೊಡದ ಕಾಂಗ್ರೆಸ್, ಮಹಿಳಾ ವಿರೋಧಿ ಎಂಬುದು ಸಾಬೀತು ಮಾಡಿದೆ ಎಂದು ಜೆಡಿಎಸ್ (JDS) ಹಿರಿಯ ಮುಖಂಡ ಹರೀಶ್

[ccc_my_favorite_select_button post_id="121251"]
ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ಸುಳ್ಳು ವಿಡಿಯೋ ಪೋಸ್ಟ್.. ನಟ ದುನಿಯಾ ವಿಜಯ್‌, ಭಾಸ್ಕರ್ ರಾವ್ಗೆ ಸಂಕಷ್ಟ..!

ಸುಳ್ಳು ವಿಡಿಯೋ ಪೋಸ್ಟ್.. ನಟ ದುನಿಯಾ ವಿಜಯ್‌, ಭಾಸ್ಕರ್ ರಾವ್ಗೆ ಸಂಕಷ್ಟ..!

ಝಾಂಬಿ ಡ್ರಗ್ಸ್ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯ ವಿಡಿಯೊ ಶೇರ್ ಮಾಡಿದ್ದ ನಟ ದುನಿಯಾ ವಿಜಯ್‌ಗೆ (Duniya Vijay) ಸಂಕಷ್ಟ ಎದುರಾಗಿದೆ.

[ccc_my_favorite_select_button post_id="121217"]
ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ಕ್ಯಾಂಟರ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ (Accident) ಸಂಭವಿಸಿ, ಓರ್ವ ಸಾವನಪ್ಪಿರುವ ಘಟನೆ ತಾಲೂಕಿನ *** ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

[ccc_my_favorite_select_button post_id="121087"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!