ದೊಡ್ಡಬಳ್ಳಾಪುರ, (ಡಿ.15): ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ನೋಂದಣಿ ಮಧ್ಯಾಹ್ನದ ನಂತರ ಆರಂಭವಾಗಿದ್ದು, ಬೆಳಗ್ಗೆಯಿಂದ ಕಾದು, ಪ್ರತಿಭಟನೆ ನಡೆಸಿ, ಟೋಕನ್ ಪಡೆದು ಮಧ್ಯಾಹ್ನದ ನಂತರ ಬಂದ ರೈತರಿಗೆ ನಿರಾಸೆ ಎದುರಾಗಿದೆ.

ರಾಗಿ ಖರೀದಿ ನೋಂದಣಿ ಹಿನ್ನಲೆಯಲ್ಲಿ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿನ ನೋಂದಣಿ ಕೇಂದ್ರಕ್ಕೆ ರೈತರು ದೌಡಾಯಿಸಿದ್ದು, ಬೆಳಗ್ಗೆ 5 ಗಂಟೆಯಿಂದ ಕಾದು ಕುಳಿತಿದ್ದರು.

ಆದರೆ ಸ್ಥಳದಲ್ಲಿದ್ದ ಅಧಿಕಾರಿಗಳು ಇಂದಿನಿಂದ ನೋದಣಿಯಿಲ್ಲ. ನಾಳೆ ಅಥವಾ ನಾಡಿದ್ದಿನಿಂದ ನೋಂದಣಿ ಮಾಡಲಾಗುವುದು ಎಂಬ ಮಾತಿಗೆ ಆಕ್ರೋಶ ವ್ಯಕ್ತಪಡಿಸಿ, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು.
ಆ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳು ಟೋಕನ್ ನೀಡುತ್ತೇವೆ, ಮಧ್ಯಾಹ್ನದ ನಂತರ ಬಂದು ನೋಂದಣಿ ಮಾಡಿಸಿ ಎಂದು ಸೂಚನೆ ನೀಡಿದ್ದರು.
ನಂತರ ಟೋಕನ್ ಪಡೆದು ಮನೆಗೆ ತೆರಳಿದ್ದ ರೈತರು. ಮಧ್ಯಾಹ್ನದ ನಂತರ ನೋಂದಣಿಗೆ ಬಂದಿದ್ದು, ಟೋಕ್ ನಡೆಯುವುದಿಲ್ಲ ಎಂದು ಅಧಿಕಾರಿಗಳು ಉಲ್ಟಾಹೊಡೆದಿದ್ದಾರೆ ಎನ್ನಲಾಗಿದೆ. ಬೆಳಗ್ಗೆಯಿಂದ ಕಾದ ರೈತರು ಮತ್ತೆ ಸರದಿ ಸಾಲಿನಲ್ಲಿ ನಿಂತು ನೋಂದಣಿ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಗೊಂದಲ ಏರ್ಪಟ್ಟಿದೆ.
2022-23ನೇ ಸಾಲಿನಲ್ಲಿ ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (ಕೆಎಫ್‌ಸಿಎಸ್‌ಸಿ ಬೆಂಗಳೂರು (ದಕ್ಷಿಣ)) ರವರನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದ್ದು, 2022ರ ಡಿಸೆಂಬರ್ 15 ರಿಂದ ರಾಗಿ ಖರೀದಿಗೆ ಸಂಬಂಧಿಸಿದಂತೆ ರೈತರ ನೋಂದಣಿ ಕಾರ್ಯವನ್ನು ಕೈಗೊಳ್ಳಲಾಗಿದ್ದು. ಸುಮಾರು 100ಕ್ಕು ಹೆಚ್ಚು ರೈತರು ಸಾಲಿನಲ್ಲಿ ನಿಂತಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
