ದೊಡ್ಡಬಳ್ಳಾಪುರ, (ಡಿ.16): ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ನೋಂದಣಿ ಇಡೀ ರಾಜ್ಯದಲ್ಲಿ ಗುರುವಾರದಿಂದ ಪ್ರಾರಂಭವಾಗಿದೆ. ಅಂತೆಯೇ ಅಧಿಕಾರಿಗಳ ಗೊಂದಲದ ನಡುವೆ ದೊಡ್ಡಬಳ್ಳಾಪುರದಲ್ಲಿ ಮಧ್ಯಾಹ್ನದ ನಂತರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
2022-23ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (ಕೆಎಫ್ಸಿಎಸ್ಸಿ ಬೆಂಗಳೂರು ದಕ್ಷಿಣ) ಇವರನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ.
ಡಿ.15 ರಿಂದ ರಾಗಿ ಖರೀದಿಗೆ ಸಂಬಂಧಿಸಿದಂತೆ ರೈತರ ನೋಂದಣಿ ಕಾರ್ಯವನ್ನು ಮಾಡಲಾಗುತ್ತಿದ್ದು, ಎರಡನೇ ದಿನವಾದ ಇಂದು ನಗರದ ಎಪಿಎಂಸಿ ಮಾರುಕಟ್ಟೆ ಬಳಿಯಿರುವ ನೋಂದಣಿ ಕೇಂದ್ರದ ಬಳಿ ರೈತರು ಬೆಳ್ಳಂಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದಾರೆ.
ನೋಂದಣಿ ಬೆಳಗ್ಗೆ 10.30ರ ನಂತರ ಆರಂಭವಾಗಲಿದೆ ಎನ್ನಲಾಗುತ್ತಿದ್ದು, ಹೆಚ್ಚುವರಿ ಕಂಪ್ಯೂಟರ್ ಅಳವಡಿಕೆ ಮೂಲಕ ಅಧಿಕಾರಿಗಳು ತ್ವರಿತವಾಗಿ ನೋಂದಣಿ ಮಾಡುವರೋ ಅಥವಾ ಗುರುವಾರದಂತೆ ಗೊಂದಲ ಸೃಷ್ಟಿಸುವರೋ ಕಾದು ನೋಡಬೇಕಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

