ದೊಡ್ಡಬಳ್ಳಾಪುರ, (ಡಿ.16): ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್ ವತಿಯಿಂದ 49ನೇ ವರ್ಷದ ವಾರ್ಷಿಕ ಮಂಡಲ ಪೂಜಾ ಕಾರ್ಯಕ್ರಮಗಳನ್ನು ಡಿಸೆಂಬರ್ 18ರಂದು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 5 ಗಂಟೆಗೆ ಗಣಹೋಮ, ಮಧ್ಯಾಹ್ನ 11 ಗಂಟೆ ಅಯ್ಯಪ್ಪಸ್ವಾಮಿ ಭಜನೆ ಇದೆ. ಮಧ್ಯಾಹ್ನ 12 ಕ್ಕೆ ವಿದ್ಯಾವಾಚಸ್ವತಿ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ಆಶೀರ್ವಚನ ನೀಡಲಿದ್ದಾರೆ.
ಇದೇ ವೇಳೆ ವಿಷ್ಣು ಸಹಸ್ರನಾಮ ಅರ್ಥಗಳು 5ನೇ ಆವೃತ್ತಿ ಪುಸ್ತಕ ಬಿಡುಗಡೆ ಹಾಗು 2023ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುವುದು.
ಆ ನಂತರ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆಯಿರುತ್ತದೆ.
ಸಂಜೆ 4 ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿರುವ ಅಯ್ಯಪ್ಪಸ್ವಾಮಿ ಉತ್ಸವದಲ್ಲಿ ವೀರಭದ್ರ, ವೀರಗಾಸೆ ಕುಣಿತ, ಕೇರಳದ ಚಂಡೆ ವಾದ್ಯ, ದೇವರ ವೇಷಭೂಷಣಗಳ ಪ್ರದರ್ಶನದ ಕಲಾತಂಡಗಳು ಭಾಗವಹಿಸಲಿವೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

