ಒಮ್ಮೆ ದುರ್ಯೋಧನನ ಹೆಂಡತಿ ಭಾನುಮತಿ ಮತ್ತು ಕರ್ಣ, ದಾಳಗಳ ಆಟ ಆಡುತ್ತಿದ್ದರು.
ಆಟ ಮುಂದುವರೆದಂತೆ, ಕರ್ಣನು ಗೆಲುವು ಸಾಧಿಸಿ, ಭಾನುಮತಿ ಸೋಲುತ್ತಾಳೆ. ಇದೇ ಸಮಯಕ್ಕೆ ದುರ್ಯೋಧನ ತನ್ನ ರಾಣಿಯ ಕೋಣೆಗೆ ಪ್ರವೇಶಿಸುತ್ತಾನೆ. ಆದರೆ ಆಟದ ಪರಿವೆಯಲ್ಲಿದ್ದ ಭಾನುಮತಿ, ಪತಿಯನ್ನು ಗಮನಿಸಿರಲಿಲ್ಲ.
ಆಟದ ಪಂತದಂತೆ ಕರ್ಣ, ತನ್ನ ಶಕ್ತಿಯುತ ಕೈಗಳಿಂದ ಅವಳ ಮುತ್ತಿನ ಮಣಿಹಾರವನ್ನು ಎಳೆದ. ದಾರ ಕಿತ್ತಿದರಿಂದ ಎಲ್ಲಾ ಮುತ್ತುಗಳು ನೆಲದ ಮೇಲೆ ಉರುಳಿದವು. ರಾಣಿ ಭಾನುಮತಿ ದಿಗ್ಭ್ರಮೆಗೊಂಡಳು.
ಕರ್ಣನ ಆಕ್ರಮಣಕಾರಿ ನಡವಳಿಕೆಯಿಂದಾಗಿ ತನ್ನ ಗಂಡ ತಪ್ಪಾಗಿ ಗ್ರಹಿಸಬಹುದೆಂದು ಹೆದರಿದಳು. ಆದರೆ ದುರ್ಯೋಧನ, “ನಾನು ಮಣಿಗಳನ್ನು ಸಂಗ್ರಹಿಸಿ ಪೋಣಿಸಿಕೊಡಲೇ” ಎಂದು ಕೇಳಿ ತನ್ನ ಸ್ನೇಹಿತನ ಮೇಲಿನ ನಂಬಿಕೆಯನ್ನು ಸಾರುತ್ತಾನೆ. (ಸಾಮಾಜಿಕ ಜಾಲತಾಣದಲ್ಲಿನ ಸಂಗ್ರಹ ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….