ಯೂಟ್ಯೂಬರ್‌ಗಳಿಗೆ ಗೃಹಸಚಿವರ ವಾರ್ನಿಂಗ್‌‌‌.. ಕೆಲ ಖಾಸಗಿ ಚಾನಲ್‌ಗಳಿಗೆ ಸಂಭ್ರಮ

Home Minister's warning to YouTubers...celebration for some private channels

ಬೆಂಗಳೂರು: ಗೃಹಸಚಿವ ಡಾ.ಜಿ.ಪರಮೇಶ್ವರ ಅವರು ಯೂಟ್ಯೂಬರ್‌ಗಳಿಗೆ (YouTubers) ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅವಹೇಳ‌ನ ನಿಲ್ಲಿಸುವಂತೆ ಸೂಚನೆ ನೀಡಿದ್ದು, ಮತ್ತೆ ಮುಂದವರಿಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ಕುರಿತು ಯೂಟ್ಯೂಬರ‌್‌ಗಳು ಅವಹೇಳನ ಮಾಡಿದ್ದಾರೆ, ಅವರ ವಿರುದ್ಧ ಕ್ರಮ ಏಕಿಲ್ಲವೆಂದು ಬಿಜೆಪಿಯ ಶಾಸಕರು ಸದನದಲ್ಲಿ ನಿನ್ನೆ ಆಕ್ರೋಶ ವ್ಯಕ್ತಪಡಿಸಿದರು.

ಈ ಬೆನ್ನಲ್ಲೇ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಯೂಟ್ಯೂಬರ್‌ಗಳಿಗೆ ಕ್ಷೇತ್ರದ ಬಗ್ಗೆ ಅವಹೇಳ‌ನ ನಿಲ್ಲಿಸುವಂತೆ ಸೂಚನೆ ನೀಡಿದ್ದು, ಮತ್ತೆ ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಗೃಹಸಚಿವರ ಎಚ್ಚರಿಕೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ. ಅದರಲ್ಲಿ ಪ್ರಮುಖವಾಗಿ ಚರ್ಚಿತ ವಿಚಾರ ಈ ರೀತಿಯಾಗಿದೆ.

ಸಾಮಾಜಿಕ ಜಾಲತಾಣ ಸಕ್ರಿಯವಾದಂತೆ ಪತ್ರಿಕೋದ್ಯಮವನ್ನು ಮಾರಾಟಕ್ಕಿಟ್ಟವರಿಗೆ ಸಿಕ್ಕಾಪಟ್ಟೆ ಆತಂಕ ಎದುರಾಗಿದೆ. ಏಕೆಂದರೆ ಯಾರದೋ ಹಂಗು, ಯಾರದೋ ಸ್ಪಾನ್ಸರ್, ಜಾಹೀರಾತು ಪಡೆದು ಅವರಿಗೆ ಪೂರಕವಾಗಿ ವರದಿ ಮಾಡಬೇಕಾದ ಅನಿರ್ವಾರ್ಯತೆಯಿಂದ ಸಾಮಾಜಿಕ ಜಾಲತಾಣ ಮುಕ್ತವಾಗಿದೆ.

ಆದರೆ ಇದು ಮಾಧ್ಯಮ ಎಂದರೆ ನಾವು ಮಾತ್ರ ಎಂದು 1970 ರ ನಿಯಮಕ್ಕೆ ಅಂಟಿಕೊಂಡಿರುವ, ಅದೇ ಕಾನೂನು ಎಂಬಂತೆ (ತಿದ್ದುಪಡಿ ಮಾಡಲು ಅವಕಾಶ ನೀಡದೆ ಷಡ್ಯಂತ್ರ ಎಂಬ ಆರೋಪ ಇದೆ) ವರ್ತಿಸುವವರಿಗೆ ಅಸಹಿನೀಯವಾಗಿದೆ.

ಏಕೆಂದರೆ ಡಿಜಿಟಲ್ ಯುಗದಲ್ಲಿ ದಿನ ಪತ್ರಿಕೆಗಳಿಗೆ ಪ್ರತಿಸ್ಪರ್ಧಿಯಾಗಿ ನ್ಯೂಸ್ ವೆಬ್ಸೈಟ್‌ಗಳು, ಖಾಸಗಿ ಚಾನಲ್ ಗಳಿಗೆ ಸ್ಪರ್ಧಿಯಾಗಿ ಯೂಟ್ಯೂಬ್ ಚಾನಲ್ಗಳು ಎದ್ದು ನಿಂತಿವೆ. ಇದು ನಮ್ಮದೇ ಸಾಮ್ರಾಜ್ಯ, ನಾವೇಳಿದ್ದೇ ಸುದ್ದಿ ಎಂಬಂತೆ ವರ್ತಿಸುತ್ತಿದ್ದವರಿಗೆ ತೀವ್ರ ಹಿನ್ನಡೆಗೂ ಕಾರಣವಾಗಿದೆ.

ಧರ್ಮಸ್ಥಳ ಪ್ರಕರಣದ ಕುರಿತು ಖಾಸಗಿ ನ್ಯೂಸ್ ಚಾನಲ್ ಗಳು ವರದಿ ಪ್ರಕಟಿಸದೆ ಇದ್ದಾಗ ಕೆಲ ಯೂಟ್ಯೂಬ್ ಚಾನಲ್‌ಗಳು ವರದಿ ಪ್ರಸಾರ ಮಾಡಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ.

ಇದರ ನಡುವೆ ಕೆಲ ಕಾನೂನು ಪ್ರಕ್ರಿಯೆಯ ಅನಿರ್ವಾರ್ಯತೆಯಿಂದ ಖಾಸಗಿ ಚಾನಲ್‌ಗಳು ಕೂಡ ವರದಿ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಆದರೆ ಧರ್ಮಸ್ಥಳ ಪ್ರಕರಣದ ಕುರಿತು ಪರ ಹಾಗೂ ವಿರುದ್ಧ ಯೂಟ್ಯೂಬರ್‌ಗಳು ಚರ್ಚೆ, ವರದಿ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಕೆಲ ಯೂಟ್ಯೂಬರ್ಗಳು ಧರ್ಮಸ್ಥಳ ಕ್ಷೇತ್ರದ ಕುರಿತು ಅವಹೇಳನ ಮಾಡುತ್ತಿದ್ದಾರೆ ಎಂಬ ಆಕ್ರೋಶ ಕೂಡ ವ್ಯಾಪಕವಾಗಿದೆ. ಇದು ಗಲಾಟೆಗೂ ಕಾರಣವಾಗಿ, ಕೆಲವರು ಆಸ್ಪತ್ರೆಗೆ ಸೇರಿದ್ದರೆ ಮತ್ತೆ ಕೆಲವರ ವಿರುದ್ಧ ದೂರು ದಾಖಲಾಗಿದೆ.

ಇದರ ಬೆನ್ನಲ್ಲೇ ನಿನ್ನೆ ಸದನದಲ್ಲಿ ಗೃಹಸಚಿವರ ನಿಲುವು ಒಪ್ಪಲೇ ಬೇಕಾದ ವಿಷಯ. ಏಕೆಂದರೆ ಅಸಹನೀಯ, ಅಗೌರವ, ಅವಹೇಳನ ಮಾಡಿದ ಯಾವುದೇ ಮಾಧ್ಯಮಗಳ ವಿರುದ್ಧ ಕ್ರಮವಾಗಬೇಕು. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ಖಾಸಗಿ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುವ ಇದೇ ರೀತಿಯ ವರದಿಗಳ ಬಗ್ಗೆ ಕೂಡ ಇದೇ ನಿಯಮ ಪಾಲನೆ ಆಗಬೇಕೆಂಬ ಮಾತು ವ್ಯಾಪಕವಾಗಿದೆ.

ಖಾಸಗಿ ಚಾನಲ್‌ಗಳ ವಿರುದ್ಧ ಕ್ರಮಕ್ಕೆ ಮುಂದಾದರೆ ಪತ್ರಿಕಾ ಸ್ವಾತಂತ್ರ್ಯ ಹರಣ ಎಂದು ಕಿರುಚುವವರು, ಯೂಟ್ಯೂಬರ್‌ಗಳಿಗೆ ಎಚ್ಚರಿಕೆ ನೀಡಿದರೆ ಸಂಭ್ರಮಿಸುತ್ತಿದ್ದಾರೆ. ಈಗ ಅವರಿಗೆ ಪತ್ರಿಕಾ ಸ್ವಾತಂತ್ರ್ಯ ಕಾಣೆಯಾಗಿದೆಯೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಇದಕ್ಕೆ ಉದಾಹರಣೆಯಾಗಿ ಒಂದು ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ನೀಡುವುದಕ್ಕೂ ಮುನ್ನವೇ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ವಿರುದ್ಧ ಕಿಲ್ಲಿಂಗ್ ಸ್ಟಾರ್ ಎಂದು ವರದಿ ಪ್ರಸಾರ, ಪತ್ರಿಕೆಗಳ ವರದಿ ಕುರಿತು ಇದೇ ರೀತಿಯ ಕ್ರಮ ಆಗಲೇ ಬೇಕು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.

ಅಳಿದುಳಿದವರಲ್ಲಿ ನಾವೇ ನಂಬರ್ 1 ಎಂದು ಮುದ್ರಣ ಕುಸಿದಿರುವ ಪತ್ರಿಕೆಗಳು, ವೀಕ್ಷಕರಿಂದ ತಿರಸ್ಕಾರಕ್ಕೆ ಒಳಗಾಗಿರುವ ಕೆಲ ಖಾಸಗಿ ಚಾನಲ್ಗಳು ಮಾತ್ರ ಮಾಧ್ಯಮ ಎಂಬ ನಿಲುವಿನಿಂದ ಸರ್ಕಾರಗಳು ಹೊರಬರಬೇಕಿದೆ.

ಸುಳ್ಳು, ಊಹಾಪೋಹ ವರದಿ ಪ್ರಸಾರ ಮಾಡುವ ಯಾವುದೇ ಮಾಧ್ಯಮವಾಗಲಿ ಅವರ ವಿರುದ್ಧ ಒಂದೇ ರೀತಿಯ ಕ್ರಮಕೈಗೊಳ್ಳುವಂತೆ ಆಗ್ರಹ ಕೇಳಿಬರುತ್ತಿದೆ. ಅಲ್ಲದೆ ಎಲ್ಲರಿಗೂ ಒಂದೇ ಮಾದರಿಯಾದ ಸುಳ್ಳು ಸುದ್ದಿಗೆ ಕಡಿವಾಣ ಕುರಿತಾದ ಕಾನೂನು ಶೀಘ್ರವೇ ಜಾರಿಗೊಳಿಸುವಂತೆ ಒತ್ತಾಯದ ಕೂಗು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ‌.

ರಾಜಕೀಯ

ಕರ್ನಾಟಕ ಶಕ್ತಿ ಕೇಂದ್ರ ಸಮಿತಿ ಅಸ್ತಿತ್ವಕ್ಕೆ; ಜಿಲ್ಲಾಧ್ಯಕ್ಷರಾಗಿ ಆದಿತ್ಯನಾಗೇಶ್, ತಾಲೂಕು ಅಧ್ಯಕ್ಷರಾಗಿ ಆಂಜನಮೂರ್ತಿ ಆಯ್ಕೆ

ಕರ್ನಾಟಕ ಶಕ್ತಿ ಕೇಂದ್ರ ಸಮಿತಿ ಅಸ್ತಿತ್ವಕ್ಕೆ; ಜಿಲ್ಲಾಧ್ಯಕ್ಷರಾಗಿ ಆದಿತ್ಯನಾಗೇಶ್, ತಾಲೂಕು ಅಧ್ಯಕ್ಷರಾಗಿ ಆಂಜನಮೂರ್ತಿ

ಮಾದಿಗ ಜನಾಂಗದ ಏಳಿಗೆಗಾಗಿ, ರಾಜಕೀಯ ಶಕ್ತಿ, ನಾಯಕತ್ವದ ಶಕ್ತಿ, ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಕರ್ನಾಟಕ ಶಕ್ತಿ ಕೇಂದ್ರ ಸಮಿತಿಯನ್ನು (Karnataka Shakti Kendra Committee) ರಚಿಸಲಾಗಿದೆ.

[ccc_my_favorite_select_button post_id="121547"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ ಭೀತಿ.!| Video ನೋಡಿ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ

ಐಪಿಎಲ್‌ನ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ನಾಯಕ ರಿಯಾನ್ ಪರಾಗ್ (Riyan Parag) ಪಂದ್ಯದ ವೇಳೆ ನಿಷೇಧಿತ 'ಇ-ಸಿಗರೇಟ್' (Vape) ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

[ccc_my_favorite_select_button post_id="121495"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ಬಿಸಿಲ ಬೇಗೆಯಿಂದ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಜನತೆ ತತ್ತರಿಸುತ್ತಿರುವ ನಡುವೆಯೇ ಇಂದು ಮಧ್ಯಾಹ್ನದಿಂದ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ.

[ccc_my_favorite_select_button post_id="121471"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]