ಬೆಂ.ಗ್ರಾ.ಜಿಲ್ಲೆ, (ಡಿ.28): ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಮುಖಂಡ ರಾಜಘಟ್ಟರವಿ ನೇಮಕವಾಗಿದ್ದಾರೆ.
ದೇವನಹಳ್ಳಿಯ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕಸಾಪ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ರಾಜಘಟ್ಟರವಿ ನೇಮಕಾತಿ ಪತ್ರ ಸ್ವೀಕರಿಸಿದರು.
ಈ ಮೂಲಕ ರಾಜ್ಯಮಟ್ಟ ಕನ್ನಡ ಪರ ಹೋರಾಟಗಾರರ ಎಂಟ್ರಿಯಿಂದ ಜಿಲ್ಲಾ ಕಸಾಪ ಘಟಕದಲ್ಲಿ ಕುತೂಹಲ ಕೆರೆಳಿಸಿದ್ದು, ಪರಿಷತ್ತಿನ ಜವಬ್ದಾರಿ ಪಡೆದು ಸಕ್ರಿಯರಾಗದೆ, ಕೇವಲ ವೇದಿಕೆಗೆ ಸೀಮಿತರಾಗುತ್ತಿದ್ದ ಪದಾಧಿಕಾರಿಗಳಿಗೆ ಬಿಸಿ ತಟ್ಟಲಿದೆ ಎನ್ನಲಾಗುತ್ತಿದೆ.
ಇನ್ನೂ ಇದೇ ವೇಳೆ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಯಾಗಿ ಅಶ್ವಥ್ ಗೌಡ, ಸಂಘನಾಕಾರ್ಯದರ್ಶಿಯಾಗಿ ವಿನೋಧ್ ಕುಮಾರ್, ಸಹ ಕಾರ್ಯದರ್ಶಿಯಾಗಿ ರಾಜಘಟ್ಟರವಿ, ರಮೇಶ್ ಕುನಾರ್, ಮಹಾ ಪೋಷಕರಾಗಿ ಬಿ.ಕೆ.ನಾರಾಯಣಸ್ವಾಮಿ, ಸಂಘಟನೆಗಳ ಪ್ರತಿನಿಧಿಯಾಗಿ ಅಂಬರೀಶ್ ಗೌಡ, ರಮೇಶ್ ಎಲುವನಹಳ್ಳಿ, ಅಲ್ಪಸಂಖ್ಯಾತರ ಪ್ರತಿನಿಧಿಯಾಗಿ ಅಸಾಧುಲ್ಲಾ, ಕೆ.ವಿಕಾಸ್, ಹಿಂದುಳಿದ ವರ್ಗಗಳ ಪ್ರತಿನಿಧಿ ಚಂದ್ರಶೇಖರ್ ಸೇರಿದಂತೆ ದೇವನಹಳ್ಳಿ ತಾಲೂಕು ಘಟಕ, ನಗರ ಘಟಕ, ಕಸಬಾ, ಚನ್ನರಾಯಪಟ್ಟಣ, ಕುಂದಾಣ ಮತ್ತು ವಿಜಯಪುರ ಹೋಬಳಿ ಘಟಕಗಳ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಸಾಪ ಜಿಲ್ಲಾ ಅಧ್ಯಕ್ಷ ಕೃಷ್ಣಪ್ಪ, ಗೌರವ ಕಾರ್ಯದರ್ಶಿ ಕೆ.ಆರ್.ರವಿಕಿರಣ್, ದೇವನಹಳ್ಳಿ ಅಧ್ಯಕ್ಷ ಆರ್.ಕೆ.ನಂಜೇಗೌಡ, ದೊಡ್ಡಬಳ್ಳಾಪುರ ಅಧ್ಯಕ್ಷ ಪಿ.ಗೋವಿಂದರಾಜು, ಕರವೇ ರಾಜ್ಯ ಉಪಾಧ್ಯಕ್ಷ ಆಂಜಿನಪ್ಪ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….