ದೊಡ್ಡಬಳ್ಳಾಪುರ, (ಮೇ.18): ಬೆಳಕಿಗಾಗಿ ಗೋಡೆ ಮೇಲೆ ಹಚ್ಚಿಟ್ಟಿದ್ದ ದೀಪ ಆಕಸ್ಮಿಕವಾಗಿ ಹಾಸಿಗೆ ಹಿಡಿದಿದ್ದ ವೃದ್ಧನ ಮೇಲೆ ಬಿದ್ದಿದ್ದು, ಬೆಂಕಿ ಕೋಣೆ ತುಂಬಾ ಆವರಿಸಿದ ಪರಿಣಾಮ ವೃದ್ಧ ಸಾವನಪ್ಪಿರುವ ದುರ್ಘಟನೆ ನಗರದ ಕಚೇರಿಪಾಳ್ಯದಲ್ಲಿ ಮಂಗಳವಾರ ರಾತ್ರಿ ಸುಮಾರು 11ಕ್ಕೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ರಾಮಾಂಜಿನಪ್ಪ (70ವರ್ಷ), ಮೃತ ದುರ್ದೈವಿ, ಮನೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಮನೆಯಲ್ಲಿ ಬೆಳಕಿಗೆಂದು ದೀಪ ಹಚ್ಚಲಾಗಿತ್ತು, ಈ ವೇಳೆ ದೀಪ ಕೆಳಗೆ ಬಿದ್ದು ಮನೆಯಲ್ಲಿದ್ದ ಬಟ್ಟೆಗಳ ಗಂಟಿಗೆ ಅಂಟಿಕೊಂಡಿದೆ, ವಯಸ್ಸಾಗಿದ್ದ ರಾಮಾಂಜಿನಪ್ಪ ಕುಳಿತರೆ ಎದ್ದೇಳಲಾಗದ ಪರಿಸ್ಥಿತಿಯಲ್ಲಿ ಬೆಂಕಿ ನಂದಿಸಲು ಆಗದೆ ಮಲಗಿದ್ದಲ್ಲೆ ನರಳಾಡಿ ಸಾಗಿವೀಡಾಗಿದ್ದಾರೆ. ಬೆಂಕಿಯ ಕೆನ್ನಾಲಗೆ ನೋಡ ನೋಡುತ್ತಿದ್ದಂತೆ ಮನೆಯನ್ನೆಲ್ಲಾ ಆವರಿಸಿ ಮನೆಯಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ಧಾವಿಸಿ ಮೃತದೇಹವನ್ನು ಹೊರಗೆ ತೆಗೆದು ಬೆಂಕಿಯನ್ನು ನಂದಿಸಿದ್ದಾರೆ.
ಸ್ಥಳಕ್ಕೆ ನಗರ ಪೊಲೀಸ್ ಠಾಣಾ ಪೊಲೀಸರು ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….