ದೊಡ್ಡಬಳ್ಳಾಪುರ, (ಮೇ.18): ಶನೇಶ್ಚರ ಜಯಂತಿ ಅಂಗವಾಗಿ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ಸಮೀಪದ ಬಂಡೇಪಾಳ್ಯ ದೇವರ ಬೆಟ್ಟದ ಶ್ರೀ ವಿಶ್ವ ಶನೇಶ್ಚರ ಸ್ವಾಮಿಯ (30ಅಡಿ) ಬ್ರಹ್ಮರಥೋತ್ಸವ ಮೇ.19ರಂದು ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಮೇ.18ರಿಂದ 20 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇದರ ಅಂಗವಾಗಿ ಮೇ.19ರ ಶುಕ್ರವಾರದಂದು ಅಭಿಷೇಕ, ತೋಮಾಲೇಸೇವೆ, ಎಲ್ಲಾ ನಕ್ಷತ್ರ, ರಾಶಿಗಳ ಹಾಗೂ ಸಂವತ್ಸರಗಳ ದೋಷ, ಶಾಂತಿ ಹೋಮ ಮಾಡಲಾಗುತ್ತಿದ್ದು, ಪ್ರಧಾನ ಪೂರ್ಣಾಹುತಿ, ಜ್ಯೇಷ್ಠದೇವಿ ನೀಲಾದೇವಿ ಸಮೇತ ಶ್ರೀ ವಿಶ್ವಶನೇಶ್ಚರ ಸ್ವಾಮಿಯ ಕಲ್ಯಾಣೋತ್ಸವ, ಶೇಷವಾಹನೋತ್ಸವ, ಮಧ್ಯಾಹ್ನ 01 ರಿಂದ 02 ಗಂಟೆಯ ನಡುವಿನ ಶುಭ ಲಗ್ನದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ.
ಅದೇ ದಿನ ಸಂಜೆ ವಸಂತೋತ್ಸವ, ಉಯಲೋತ್ಸವ, ಶಯನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕರದಾ ಶ್ರೀಧರ್ ಶರ್ಮ ಗುರೂಜಿ ಹರಿತಲೇಖನಿಗೆ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….