ಮಾಜಿ ಪ್ರಧಾನಿ ದೇವೇಗೌಡರ ಜನ್ಮದಿನಾಚರಣೆ: ದೊಡ್ಡಬಳ್ಳಾಪುರದ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣಹಂಪಲು ವಿತರಣೆ

ದೊಡ್ಡಬಳ್ಳಾಪುರ, (ಮೇ.18): ಇಲ್ಲಿನ ಜೆಡಿಎಸ್ ಘಟಕದ ವತಿಯಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ 91ನೇ ಹುಟ್ಟುಹಬ್ಬ ಆಚರಿಸಲಾಯಿತು.

ಪಕ್ಷದ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ನೇತೃತ್ವದಲ್ಲಿ ಪದಾಧಿಕಾರಿಗಳು ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣಹಂಪಲು ವಿತರಿಸಿದರು.

ಈ ಸಂದರ್ಭ ಮಾತನಾಡಿದ ಬಿ.ಮುನೇಗೌಡ, ದೇಶದ ಚುಕ್ಕಾಣಿ ಹಿಡಿದಂತಹ ಮಹಾನ್ ಹೋರಾಟಗಾರ ದೇವೇಗೌಡ ಅವರು ಇಂದಿಗೂ ತಮ್ಮ ಇಳಿವಯಸ್ಸಿನಲ್ಲಿ ನಾಡಿನ ರಕ್ಷಣೆಗೆ ಪಣತೊಟ್ಟು ನಿಂತಿದ್ದಾರೆ. ಇಂತಹ ಮಹಾನ್ ಚೇತನದ ಮಾರ್ಗದರ್ಶನ ನಾಡಿಗೆ ಇನ್ನೂ ಬೇಕಿದೆ. ಅವರು ನೂರ‌್ಕಾಲ ಬಾಳಬೇಕೆಂದು ದೇಗುಲ, ಚರ್ಚ್ ಹಾಗೂ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ವೇಳೆ ಹಿರಿಯ ಮುಖಂಡ ಗೋವಿಂದರಾಜು, ನಗರಸಭೆ ಸದಸ್ಯ ವಡ್ಡರಹಳ್ಳಿ ರವಿಕುಮಾರ್, ಮಾಧ್ಯಮ ವಕ್ತಾರ ಕುಂಟನಹಳ್ಳಿ ಮಂಜುನಾಥ್, ಮಾಜಿ ನಗರಸಭೆ ಸದಸ್ಯ ಕೆಂಪರಾಜು, ಮುಖಂಡರಾದ ಚಂದ್ರಶೇಖರ್, ತಳವಾರ ನಾಗರಾಜ್, ಮಧು, ವಿನಯ್ ಮತ್ತಿತರರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!