ದೊಡ್ಡಬಳ್ಳಾಪುರದಲ್ಲಿ RRR ಕೇಂದ್ರಗಳ ಆರಂಭ: ಹಳೇ ಸಾಮಗ್ರಿ ನೀಡಿ ಮರು ವಸ್ತುಗಳನ್ನು ಪಡೆಯಲು ಅವಕಾಶ..!!

ದೊಡ್ಡಬಳ್ಳಾಪುರ, (ಮೇ.20): ಕಡಿಮೆ ಮಾಡು, ಮರು ಬಳಕೆ ಹಾಗೂ ಮರು ಉಪಯೋಗದ ಧ್ಯೇಯವನ್ನು ಹೊಂದಿರುವ  ಆರ್‌ ಆರ್ ‌ಆರ್ ಕೇಂದ್ರಗಳನ್ನು ಆರಂಭ ಮಾಡಲಾಗಿದ್ದು, ಸಾರ್ವಜನಿಕರು ಹಳೆಯ ಸಾಮಗ್ರಿ ಕೊಟ್ಟು ಸಾರ್ವಜನಿಕರು ಪ್ರೋತ್ಸಾಹದಾಯಕ ಅಥವಾ ಮನೆಯಲ್ಲಿ ಬಳಸಬಹುದಾದ ವಸ್ತುಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ ಹೇಳಿದರು.

ನಗರದ ಬಸ್ ನಿಲ್ದಾಣದ ಸಮೀಪ ನಗರಸಭೆ ವತಿಯಿಂದ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ನನ್ನ ಬದುಕು ನನ್ನ ಸ್ವಚ್ಛ ನಗರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಕಸ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಮರು ಬಳಕೆ ವಸ್ತುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಪೌರಾಯುಕ್ತ ಕೆ.ಜಿ.ಶಿವಶಂಕರ್ ಮಾತನಾಡಿ, ನಗರಸಭೆ ವತಿಯಿಂದ ನಗರಸಭೆ ವ್ಯಾಪ್ತಿಯಲ್ಲಿ ಮೇರಿ ಲೈಫ್ ಮೇರಾ ಸ್ವಚ್ಛ ಶೇಹರ್ ಸ್ವಚ್ಛ ಭಾರತ ಯೋಜನೆ ಅಡಿ ನನ್ನ ಬದುಕು ನನ್ನ ಸ್ವಚ್ಛ ನಗರ ಕಾರ್ಯಕ್ರಮವನ್ನು ಮೇ 20ರಿಂದ ಜೂನ್ 5ರವರೆಗೆ ಹಮ್ಮಿಕೊಳ್ಳಲಾಗಿದೆ.

ಆರ್‌ಆರ್‌ಆರ್ (ಕಡಿಮೆ ಮಾಡು, ಮರು ಬಳಕೆ, ಮರು ಉಪಯೋಗ) ಆದಷ್ಟು ತ್ಯಾಜ್ಯವನ್ನು ಕಡಿಗೊಳಿಸಿ ಮರುಬಳಕೆ ಮಾಡುವುದಕ್ಕೆ ಆದ್ಯತೆ ನೀಡಲಾಗುತ್ತಿದ್ದು, ನಗರದಲ್ಲಿ ಒಟ್ಟು 6 ಕಡೆಗಳಲ್ಲಿ ಅಂದರೆ ನಗರದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದ ನಗರಸಭೆ ಮಳಿಗೆಗಳ ಸಮೀಪ, ರೈಲ್ವೆ ಸ್ಟೇಷನ್ ವೃತ್ತದ ಬಸ್ ನಿಲ್ದಾಣದ ಹತ್ತಿರ, ನಗರಸಭೆ ಮಳಿಗೆಗಳ ಹತ್ತಿರ, ಕಲ್ಲುಪೇಟೆ, ಒಣ ಕಸ ಸಂಗ್ರಹಣಾ ಕೇಂದ್ರ, ನಗರಸಭೆ ಕಛೇರಿ ಹಿಂಭಾಗ, ಒಣಕಸ ಸಂಗ್ರಹ ಕೇಂದ್ರ, ಬಡಾವಣೆ ವಾರ್ಡ್ ನಂ.3, ನಗರಸಭೆ ಮಳಿಗೆ, ಬಸ್ ನಿಲ್ದಾಣದ ಸಮೀಪ, ವಾರ್ಡ್ ನಂ.21, ಆರ್‌ಆರ್‌ಆರ್ ಕೇಂದ್ರಗಳನ್ನು ತೆರೆಯಲಾಗಿದೆ.

ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಮಕ್ಕಳ ಹಳೆಯ ಆಟದ ವಸ್ತುಗಳು, ಹಳೆಯ ಬಟ್ಟೆಗಳು, ದಿನಪತ್ರಿಕೆಗಳು, ಹಳೆಯ ಪುಸ್ತಕಗಳು, ಪ್ಲಾಸಿಕ್ ಚೀಲಗಳು, ಕ್ಯಾರಿ ಬ್ಯಾಗ್, ನಿರುಪಯುಕ್ತ ಎಲೆಕ್ಟ್ರಾನಿಕ್ ವಸ್ತುಗಳು, ವಿದ್ಯುತ್ ಬಿಡಿ ಸಾಮಗ್ರಿಗಳನ್ನು ಕೂಡಿಸಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕೇಂದ್ರಗಳಿಗೆ ಕೊಡಬಹುದು.

ಈ ಕಾರ್ಯಕ್ರಮದಲ್ಲಿ ಹಳೆಯ ಸಾಮಗ್ರಿಗಳನ್ನು  ಕೊಟ್ಟು ಸಾರ್ವಜನಿಕರು ಪ್ರೋತ್ಸಾಹದಾಯಕ ಅಥವಾ ಮನೆಯಲ್ಲಿ ಬಳಸಬಹುದಾದ ವಸ್ತುಗಳನ್ನು ಪಡೆದುಕೊಳ್ಳಬಹುದು. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಹಳೆಯ ಸಾಮಗ್ರಿಗಳನ್ನು ನೀಡಿದ ಸಾರ್ವಜನಿಕರಿಗೆ ಪ್ರೋತ್ಸಾಹದಾಯಕವಾಗಿ ಎರೆಹುಳು ಗೊಬ್ಬರ ವಿತರಿಸಲಾಯಿತು.

ನಗರಸಭೆ ಪರಿಸರ ವಿಭಾಗದ ಸಹಾಯಕ ಅಭಿಯಂತರ ಈರಣ್ಣ ಸೇರಿದಂತೆ ನಗರಸಭೆ ಆರೋಗ್ಯ ಶಾಖೆಯ ಸಿಬ್ಬಂದಿ ಹಾಜರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!