ದೊಡ್ಡಬಳ್ಳಾಪುರ, (ಮೇ.20): ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನತೆಗೆ ಇಂದು ಸಂಜೆ ಸುರಿದ ಮಳೆ, ನಗರ ವಾಸಿಗಳಿಗೆ ಅಲ್ಪ ಮಟ್ಟದ ತಂಪನ್ನು ತಂದಿದೆ.
ಇದೇ ವೇಳೆ ನಗರದ ತಾಲೂಕು ಕಚೇರಿ ಮುಂಭಾಗದ ರಸ್ತೆಯಲ್ಲಿ ಮಳೆ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿತ್ತು.
ಅಂತೆಯೇ ಕಾಳಮ್ಮ ಗುಡಿ ರಸ್ತೆ, ಟೋಲ್ ಗೇಟ್ ರಸ್ತೆ ಮತ್ತಿತರ ಕಡೆ ಮಳೆಯ ನೀರು ಸರಾಗವಾಗಿ ಚರಂಡಿಗೆ ಹರಿಯದ ಕಾರಣ, ರಸ್ತೆಯಲ್ಲಿ ನಿಂತು ಅವಾಂತರ ಸೃಷ್ಟಿಸಿತ್ತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….