ಈ ದಿನದ ವಿಶೇಷ: ವಿಶ್ವ ಸಹೋದರರ ದಿನ

ಪ್ರತಿ ವರ್ಷ, ಮೇ 24 ಅನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮತ್ತು ಜಗತ್ತಿನ ಇತರ ಭಾಗಗಳಲ್ಲಿ ವಿಶ್ವ ಸಹೋದರರ ದಿನವಾಗಿ ಆಚರಿಸಲಾಗುತ್ತದೆ. ಅಮ್ಮಂದಿರ ದಿನ, ತಂದೆಯ ದಿನ ಮತ್ತು ಒಡಹುಟ್ಟಿದವರ ದಿನವನ್ನು ಆಚರಿಸುವಂತೆ, ಈ ದಿನವನ್ನು ಆಚರಿಸಲಾಗುತ್ತದೆ. 

ಇಂದು ಸಹೋದರರ ಮೇಲಿನ ಪ್ರೀತಿ, ವಾತ್ಸಲ್ಯ ಮತ್ತು ಮಮಕಾರವನ್ನು ಪ್ರಚುರಪಡಿಸುತ್ತದೆ. ಹಾಗೆಂದು ಇವತ್ತಿನ ದಿನ ಮಾತ್ರ ಸಹೋದರ ನೆನಪಾಗುತ್ತಾನೆ ಎಂದು ಅರ್ಥವಲ್ಲ. ಬೆನ್ನ ಹಿಂದೆ ಬೆಂಬಲವಾಗಿ ನಿಂತು, ಎಂದೂ ತಂಗಿ/ಅಕ್ಕನೊಡನೆ ತುಂಟಾಟ, ಕಪಿಚೇಷ್ಟೆ ಮಾಡುವ ಪ್ರತಿಯೊಂದು ಕ್ಷಣವನ್ನು ಇಂದು ನೆನೆದು ಸಹೋದರನಿಗೆ ನೀನಿಲ್ಲದ ಜೀವನ ನಿಜಕ್ಕೂ ಮನರಂಜನೆಯಿಲ್ಲದ ಬದುಕು ಎಂದು ಮುಗುಳು ನಗೆ ಬೀರುವ ಸಮಯವಿದು.

ತಂದೆ- ತಾಯಿಯಲ್ಲಿ ಹೇಳದ ಕೆಲವೊಂದಿಷ್ಟು ವಿಷಯಗಳಿಗೆ ಸಹೋದರನೇ ನಿಜವಾದ ಕೇಳುಗ. ಹಿರಿಯರಲ್ಲಿ ಅಂತರಾಳದಲ್ಲಾಗುವ ಬದಲಾವಣೆಗಳನ್ನು ಹೇಳಲು ಸಾಧ್ಯವಿಲ್ಲ. ಮುಜುಗರ ಇದಕ್ಕೆಲ್ಲಾ ಬೇಲಿ ಹಾಕುತ್ತದೆ. ಆದರೆ ಸಹೋದರನ ಪ್ರಪಂಚದಲ್ಲಿ ಇಂತಹ ವಿಷಯಗಳಿಗೆ ಸದಾ ಬಾಗಿಲು ತೆರೆದಿರುತ್ತದೆ. 

2005 ರಿಂದ, ಪ್ರತಿ ವರ್ಷ ಮೇ 24 ರಂದು ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ರಜೆ ಇರುವ ಬಗ್ಗೆ ನಿಖರವಾದ ವಿವರಗಳು ತಿಳಿದಿಲ್ಲವಾದರೂ, ಅಲಬಾಮಾ ಮೂಲದ ಕಲಾವಿದ, ಶಿಲ್ಪಿ ಮತ್ತು ಲೇಖಕರಾಗಿರುವ ಸಿ. ಡೇನಿಯಲ್ ರೋಡ್ಸ್ ಸಹೋದರ ದಿನ ಎನ್ನುವ ಪರಿಕಲ್ಪನೆಯನ್ನು ಜಾರಿಗೆ ತಂದರು. 

ಪ್ರತಿ ವರ್ಷ ಏಪ್ರಿಲ್ 10 ರಂದು ಆಚರಿಸಲಾಗುವ ವಿಶ್ವ ಒಡಹುಟ್ಟಿದವರ ದಿನವನ್ನು ಮತ್ತು ಸಹೋದರರ ದಿನವನ್ನು ಒಂದೇ ಎಂದು ಅರ್ಥೈಸಿಕೊಳ್ಳಬಾರದು. ಈ ದಿನ ಒಡಹುಟ್ಟಿದವರನ್ನು ನೆನೆಯಲಾಗುತ್ತದೆ. ಆದರೆ ವಿಶ್ವ ಸಹೋದರರ ದಿನದಂದು ಅಣ್ಣ ಅಥವಾ ತಮ್ಮಂದಿರ ಜೊತೆಗೆ ಸಂಭ್ರಮಿಸಲಾಗುತ್ತದೆ.

ವಿಶ್ವ ಸಹೋದರರ ದಿನಾಚರಣೆಯನ್ನು ಹೆಚ್ಚಾಗಿ ಯುಎಸ್‌ನಲ್ಲಿ ಆಚರಿಸಲಾಗುತ್ತದೆ. ಆದರೆ ಜಗತ್ತಿನಾದ್ಯಂತದ ಅನೇಕ ದೇಶಗಳು ಈ ದಿನವನ್ನು ಆಚರಿಸಲು ಮುಂದಾಗಿದೆ. ಅದರಂತೆ ರಷ್ಯಾ, ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಹಲವು ದೇಶಗಳು ಈ ದಿನವನ್ನು ಮೇ 24 ರಂದು ಆಚರಿಸುತ್ತವೆ. ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ, ವಿಶ್ವ ಸಹೋದರರ ದಿನವನ್ನು ಅನಧಿಕೃತ ರಜಾದಿನವೆಂದು ಆಚರಿಸಲಾಗುತ್ತದೆ.

ಒಬ್ಬರಿರಲಿ ಅಥವಾ ಇಬ್ಬರು ಸಹೋದರರಿರಲಿ ಅಥವಾ ಸಹೋದರರು ಇಲ್ಲದಿರಲಿ ಎಲ್ಲರಲ್ಲೂ ಸಹೋದರತ್ವ ಕಾಣಬೇಕು ಮತ್ತು ಪ್ರೀತಿಯ ಸಹಬಾಳ್ವೆ ಬಹಳ ಮುಖ್ಯ ಎಂಬುವುದು ಈ ದಿನದ ಮಹತ್ವ. ಪುರುಷರಲ್ಲಿ ಸಹೋದರತ್ವದ ಪ್ರಜ್ಞೆ ಅತ್ಯಂತ ಪ್ರಬಲವಾಗಿರುತ್ತದೆ. ಇದು ರಕ್ತ ಸಂಬಂಧವಾಗಿರಲಿ ಅಥವಾ ಇಲ್ಲದಿರಲಿ, ಪುರುಷರು ತಮ್ಮ ಬ್ರದರ್ಸ್ ಅಥವಾ ಇತ್ತೀಚೆಗೆ ಹುಟ್ಟಿಕೊಂಡಿರುವ ಟ್ರೇಂಡ್ ಬ್ರೋ ಗೆ ಹೆಚ್ಚು ಮಹತ್ವ ನೀಡುತ್ತಾರೆ.

ಈ ವಿಷಯವು ಅಮೇರಿಕನ್ ಸಿಟ್ಕಾಮ್ ಬ್ರದರ್ಸ್, ಡಿಸ್ನಿಯ ದಿ ಸೂಟ್ ಲೈಫ್ ಆಫ್ ಜ್ಯಾಕ್ ಮತ್ತು ಕೋಡಿ ಮತ್ತು ಎಚ್‌ಬಿಒನ ಬ್ಯಾಂಡ್ ಆಫ್ ಬ್ರದರ್ಸ್‌ನಂತಹ ಕೆಲವು ಚಲನಚಿತ್ರಗಳು, ಕಾದಂಬರಿಗಳು, ನಾಟಕಗಳು ಮತ್ತು ದೂರದರ್ಶನ ಕಾರ್ಯಕ್ರಮಗಳನ್ನು ಪ್ರೇರೇಪಿಸಿದೆ.

ಸಹೋದರತ್ವದ ಭಾವನೆಯನ್ನು ವಿಶ್ವದಾದ್ಯಂತ ಪಸರಿಸಲು ಮತ್ತು ಸಹೋದರನ ತ್ಯಾಗವನ್ನು ಶ್ಲಾಘಿಸಲು ಈ ದಿನವನ್ನು ಆದರ್ಶವಾಗಿ ಪರಿಗಣಿಸಲಾಗುತ್ತದೆ. 

ಸಾಮಾನ್ಯವಾಗಿ, ಇತ್ತೀಚೆಗೆ ಕುಟುಂಬದವರೆಲ್ಲಾ ಸೇರಿ ಸಿಹಿ ಹಂಚಿ ಈ ದಿನವನ್ನು ಸಂಭ್ರಮಿಸುತ್ತಾರೆ. ಹಾಗೇಯೇ ಪ್ರೀತಿಯ ಸಹೋದರನಿಗೆ ಇಷ್ಟವಾಗುವ ತಿನಿಸು, ಉಡುಗೊರೆ ನೀಡಿ ಖುಷಿಪಡಿಸಲು ಈ ದಿನ ಪ್ರಯತ್ನಿಸಬಹುದು. ಜತೆಗೆ ಸಾಕಷ್ಟು ಸಮಯವನ್ನು ಸಹೋದರನೊಂದಿಗೆ ಕಳೆಯಲು ಕೂಡ ನೀವು ಇಂದು ಪ್ರಯತ್ನಿಸಬಹುದಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ಮತ್ತೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಯುವಕನ ಮೇಲೆರಗಿದ (Accident) ಲಾರಿ, ಸ್ಥಳದಲ್ಲಿಯೇ ಬಲಿ ಪಡೆದಿರುವ ಘಟನೆ

[ccc_my_favorite_select_button post_id="113040"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!