ದೊಡ್ಡಬಳ್ಳಾಪುರ: ಹೊಸಹಳ್ಳಿ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದ ಪುನರ್ ನಿರ್ಮಾಣ; ಶ್ರೀ ವಿದ್ಯಾ ವಿಶ್ವೇಶ ಭಾರತಿ ಸ್ವಾಮೀಜಿಗಳಿಂದ ಆಶೀರ್ವಚನ

ದೊಡ್ಡಬಳ್ಳಾಪುರ, (ಮೇ.24): ತಾಲೂಕಿನ ಉಜ್ಜನಿ ಹೊಸಹಳ್ಳಿ ಗ್ರಾಮದ ಶ್ರೀ ಚಂದ್ರಮೌಳೀಶ್ವರ ದೇವಾಲಯದಲ್ಲಿ ಮೇ.22ರಿಂದ 24 ರವರೆಗೆ ದೇವಾಲಯದ ಜೀರ್ಣೋದ್ಧಾರ ಕುರಿತಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಮಂಗಳವಾರ ಎರಡನೇ ದಿನದ ಕಾರ್ಯಕ್ರಮದ ಅಂಗವಾಗಿ ಪ್ರಧಾನ ಹೋಮ ಕುಂಡದಲ್ಲಿ ಚಂಡಿಯಾಗವನ್ನು ನೆರವೇರಿಸಲಾಯಿತು.

ಪ್ರಧಾನರಾಗಿ ಕಿತ್ತಗಾನಹಳ್ಳಿ ಶ್ರೀ ವೇದ ಬ್ರಹ್ಮ ಶ್ರೀ ಸೂರ್ಯನಾರಾಯಣ ದೀಕ್ಷಿತ್ ಪ್ರಭಾಕರ ದೀಕ್ಷಿತ್ ಹಾಗೂ ನರಸಿಂಹ ಶರ್ಮ ಕಾರ್ಯಕ್ರಮವನ್ನು ನಿರ್ವಹಿಸಿದರು.

ಈ ಸಂದರ್ಭದಲ್ಲಿ ಅವಿಚಿನ್ನ ಪರಂಪರ ಶೃಂಗೇರಿ ಕೂಡಲಿ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾ ವಿಶ್ವೇಶ ಭಾರತಿ ಸ್ವಾಮೀಜಿಗಳು ಹಾಗೂ ಆದೋನಿ ಶ್ರೀ ಶ್ರೀ ಸುಬ್ರಹ್ಮಣ್ಯ ಭಾರತಿ ಸ್ವಾಮೀಜಿಗಳು ಉಪಸ್ಥಿತರಿದ್ದರು.

ಶ್ರೀ ವಿದ್ಯಾ ವಿಶ್ವೇಶ ಭಾರತಿ ಸ್ವಾಮಿಗಳು ಭಕ್ತಾದಿಗಳಿಗೆ ಆಶೀರ್ವಚನ ನೀಡಿ, ಭಗವಂತ ಹಾಗೂ ಮಾನವ ಜನ್ಮದ ಸಾರ್ಥಕತೆಗೆ ಹೇಗೆ ನಡೆದುಕೊಳ್ಳಬೇಕೆಂಬ ವಿಚಾರದ ಬಗ್ಗೆ ಬಹಳ ವಿವರವಾಗಿ ಭಕ್ತಿ ಹಾಗೂ ಶ್ರದ್ಧೆಯಿಂದ ದಾನ ಧರ್ಮ ಹಾಗೂ ಅರ್ಥ ಮೋಕ್ಷ ಸಾಧನೆಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಧರ್ಮದರ್ಶಿ ಹೆಚ್.ಎಸ್. ಅಶ್ವಥ್ ನಾರಾಯಣ ಕುಮಾರ್ ಸೇರಿದಂತೆ  ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರುಗಳು, ನೂರಾರು ಭಕ್ತರು ಹಾಜರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!