ವಿಧಾನಸಭೆ ನೂತನ ಸ್ಪೀಕರ್‌ ಆಗಿ ಯುಟಿ ಖಾದರ್‌ ಅವಿರೋಧ ಆಯ್ಕೆ, ಅಧಿಕಾರ ಸ್ವೀಕಾರ

ಬೆಂಗಳೂರು, (ಮೇ.24): ವಿಧಾನಸಭೆ ನೂತನ ಸ್ಪೀಕರ್‌ ಆಗಿ ಯುಟಿ ಖಾದರ್‌ ಅವಿರೋಧ ಆಯ್ಕೆಯಾಗಿದ್ದಾರೆ.

ಸ್ಪೀಕರ್‌ ಸ್ಥಾನಕ್ಕೆ ಯುಟಿ ಖಾದರ್‌ ಮಾತ್ರ ನಾಮಪತ್ರವನ್ನು ಸಲ್ಲಿಸಿದ್ದರು, ಹೀಗಾಗಿ ಅವರು ಇಂದು ಅಧಿಕೃತವಾಗಿ ಸ್ಪೀಕರ್‌ ಆಗಿ ಅಧಿಕಾರ ಸ್ವೀಕಾರವನ್ನು ಹಂಗಾಮಿ ಸ್ಪೀಕರ್‌ ಆರ್.ವಿ ದೇಶಪಾಂಡೆ ಅವರಿಂದ ಸ್ವೀಕಾರ ಮಾಡಿದರು.

ಇದೇ ವೇಳೆ ನೂತನ ಸ್ಪೀಕರ್‌ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಮಾಜಿ‌ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ‌, ಹೆಚ್.ಡಿ.ಕುಮಾರಸ್ವಾಮಿ, ಸಚಿವರಾದ ಜಿ.ಪರಮೇಶ್ವರ್, ಮಾಜಿ ಸಚಿವ ಅಶ್ವಥ್ ನಾರಾಯಣ್ ಅವರು ಅಭಿನಂದನೆ ಸಲ್ಲಿಸಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!