ದೊಡ್ಡಬಳ್ಳಾಪುರ: ಮುತ್ಯಾಲಮ್ಮ ಜಾತ್ರೆಯಲ್ಲಿ ಆಟಗಳನ್ನಾಡಿ ಮನೆಗೆ ತೆರಳಿದ್ದ ಬಾಲಕ ಹಠಾತ್ ಸಾವು…!!: ಬಿಪಿ ಲೋ ಆಗಿತ್ತೆಂದ ಪೋಷಕರು

ದೊಡ್ಡಬಳ್ಳಾಪುರ, (ಮೇ.24): ನಗರದ ಮುತ್ಯಾಲಮ್ಮ ಜಾತ್ರೆಯ ಮೈದಾನದಲ್ಲಿ ಹಾಕಲಾಗಿದ್ದ ವಿವಿಧ ಆಟಗಳನ್ನಾಡಿ ಮನೆಗೆ ತೆರಳಿದ್ದ ಬಾಲಕ, ಬಿಪಿ ಲೋ ಆದ ಕಾರಣ ಮೃತಪಟ್ಟಿರುವ ಘಟನೆ ಬುಧವಾರ ಸಂಜೆ ನಡೆದಿದೆ.

ಇಲ್ಲಿನ ಶಾಂತಿನಗರದ ನಿವಾಸಿ ಮಂಜುನಾಥ್ ಅವರ ಪುತ್ರ ಶ್ರೇಯಸ್(9ವರ್ಷ) ಮೃತ ಬಾಲಕ.

ಜಾತ್ರೆಯಲ್ಲಿ ಮಕ್ಕಳು ಆಟವಾಡಲು ಹಾಕಲಾಗಿದ್ದ ವಿವಿಧ ಆಟಗಳನ್ನು ಆಡಿ ಮನೆಗೆ ತೆರಳಿದಾಗ ಬಾಲಕನ ಆರೋಗ್ಯದಲ್ಲಿ ಏರುಪೇರಾಗಿದೆ.

ಕೂಡಲೇ ಪೋಷಕರು ಆಸ್ಪತ್ರೆಗೆ ಕರೆದೊಯ್ದರಾದರು, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!