ಬೆಂಗಳೂರು, (ಮೇ.24): ವಿಧಾನಸಭೆ ಚುನಾವಣೆ ಮುಗಿದು ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಇತರೆ 08 ಮಂದಿ ಸಚಿವರೊಂದಿಗೆ ಅಧಿಕಾರ ವಹಿಸಿಕೊಂಡಿದ್ದಾರೆ.
2023ರ ವಿಧಾನಸಭೆ ಚುನಾವಣೆ ಹಲವು ಅಚ್ಚರಿಗೆ ಕಾರಣವಾಗಿದ್ದು, ಘಟಾನುಘಟಿ ನಾಯಕರನ್ನು ಮತದಾರರು ತಿರಸ್ಕರಿಸಿದ್ದಾನೆ. ಅದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಕುರಿತಂತೆ ಇರುವ ಆಸಕ್ತಿ, ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆ, ಹಣದ ಪ್ರಭಾವ, ಜಾತಿ ರಾಜಕಾರಣ ಸೇರಿದಂತೆ ಹಲವಾರು ವಿಚಾರಗಳು ಮುನ್ನೆಲೆಗೆ ಬಂದಿದೆ.
ಈ ಬೆಳವಣಿಗೆ ಬೆನ್ನಲ್ಲೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎರಡು ವರ್ಷಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದ್ದು, ಚುನಾವಣೆಯಲ್ಲಿ ಗೆಲ್ಲಬೇಕಾದರೆ ಅಭಿವೃದ್ಧಿ ಮುಖ್ಯವಲ್ಲ ಕೇವಲ ಚುನಾವಣೆ ಹಿಂದಿನ ರಾತ್ರಿ ಹರಿಸುವ ಹಣದ ಹೊಳೆ ಮಾತ್ರ ಕಾರಣ ಎಂಬಂತಿರುವ ವಿಡಿಯೋ ಸಂಚಲನ ಮೂಡಿಸಿದೆ.
ವಿಡಿಯೋದಲ್ಲಿ ಸಂದರ್ಶಕ ಸೋಮಣ್ಣ ಮಾಚಿಮಾಡ ರಾಜಕೀಯದ ಬಗ್ಗೆ ದರ್ಶನ್‌ಗೆ ಆಸಕ್ತಿ ಇದೆಯೇ ಎಂಬ ಪ್ರಶ್ನೆಗೆ ದರ್ಶನ್ ಇಲ್ಲವೆನ್ನುತ್ತಾರೆ. ಮುಂದುವರೆದ ಸಂದರ್ಶಕ ಎಲ್ಲಾ ಪಕ್ಷಗಳಲ್ಲುನಿಮಗೆ ಸ್ನೇಹಿತರಿದ್ದಾರೆ, ನೀವ್ ಹೇಳ್ತಿರಿ ಜೀವನದಲ್ಲಿ ಯಾವುದು ನಾವ್ ಅಂದುಕೊಂಡಂತಲ್ಲ. ಆದರೆ ಮುಂದಿನ ದಿನಗಳಲ್ಲಿ ಹತ್ತು, ಹದಿನೈದು, ಇಪ್ಪತ್ತು ವರ್ಷದ ನಂತರ ನಿಮ್ಮದೇ ಆದ ಸಿಕ್ಸ್ ಸೆನ್ಸ್ ಇರುತ್ತಲ್ವಾ ಆ ಕುರಿತು ಹೇಳಿ ಎಂದು ಪ್ರಶ್ನಿಸುತ್ತಾರೆ.
ಈ ಕುರಿತಂತೆ ಉತ್ತರಿಸಿರುವ ನಟ ದರ್ಶನ್, ಸಾಮಾನ್ಯರ ಮೇಲೆ ಆರೋಪ ಹೊರಿಸುವುದು ತಪ್ಪು ಸರ್, ನೀವೆ ಹೇಳಿ ರಾಜಕಾರಣಿ ಸುದ್ದಿ ಪ್ರಸಾರ ಮಾಡಬೇಕಾದರೆ ಜಾಹೀರಾತು ಪಡೆಯುತ್ತೀರಿ, ಎಲ್ಲವೂ ಕರ್ಮಷಿಯಲ್ ಯಾವತ್ ಹಣ ನಡೆಯದೆ, ಪ್ರೀಯಾಗಿ ಚುನಾವಣೆ ನಡೆಯುತ್ತೆ ಆ ಸಂದರ್ಭದಲ್ಲಿ ಚುನಾವಣೆಗೆ ಬರ್ತೀನಿ.
ಪ್ರತಿಯೊಬ್ಬರಿಗೆ ಇಂತಿಷ್ಟು ಹಣ ಬೇಕೇಬೇಕು, ಅದಕ್ಕೆ ಎಷ್ಟು ಕೋಟಿ ಲೆಕ್ಕ ಮಾಡಿ. ರಾಜಕೀಯ ಈಗ ವ್ಯವಹಾರವಾಗಿದೆ. ರಾಜಕೀಯಕ್ಕೆ ದುಡ್ಡು ಬೇಕಿದ್ದರು, ಮತ್ತೆ ಕೊಡಲು ದುಡ್ ಮಾಡ್ಲೇ ಬೇಕಲ್ಲ. ಈ ಚುನಾವಣೆಯಲ್ಲಿ ಓಟಿಗೆ ಇಷ್ಟು ದುಡ್ ಅಂತ ಕೊಟ್ರೆ, ನೆಕ್ಟ್ ಅದಕ್ಕಿಂತ ಹೆಚ್ಚು ಹಣ ಬಯಸುತ್ತಿರುತ್ತಾರೆ. ಹಾಗದರೆ ಆ ರೀತಿ ಕೊಡಲು ನಾ ಎಷ್ಟು ಮಾಡಬೇಕು..?
ರಾಜಕೀಯದ ಕುರಿತು ರೀಸರ್ಚ್ ಮಾಡಿರಲೇ ಬೇಕಿಲ್ಲ. ನೀವ್ ಎಷ್ಟೇ ಒಳ್ಳೆಯ ಕೆಲಸ ಮಾಡಿ ಸರ್, ನಮ್ಮ ಜನಗಳಿಗೆ ಇರುವುದು ವೆರಿ ಶಾರ್ಟ್ ಮೆಮರಿ, ಇವತ್ ನೀವ್ ಈಗ್ ಬ್ರೇಕಿಂಗ್ ನ್ಯೂಸ್ ಹಾಕುದ್ರೆ.. ಸಂಜೆಗ್ ಅದ್ ನೆನಪಲ್ ಇರಲ್ಲ. ಜನ ಚಿಟಿಕೆ ಹೊಡೆಯುವಷ್ಟರಲ್ಲಿ ಮರೆಯುತ್ತಾರೆ. ಇನ್ ನೀವ್ ಮಾಡಿರುವ ಒಳ್ಳೆ ಕೆಲಸ ಯಾರ್ ತಲೆಲ್ ಇಟ್ಕೊಂಡ್. ಏ ಇವ ನಮಗೆ ಒಳ್ಳೆದ್ ಮಾಡಿದ್ದಾನೆ ಇವನಿಗೆ ಮತ ನೀಡೋಣ ಅಂತ ಯಾರು ಹೇಳಲ್ಲ. ಇವತ್ ಸಾಯಂಕಾಲ ನನಗೆಷ್ಟು ಕೊಟ್ಟ..? ದುಡ್ ಎಲ್ಲಾ ಕಡೆ ದುಡ್ಡೇ.
ಚುನಾವಣೆ ನಡೆಸಲು ಚುನಾವಣೆ ಆಯೋಗ ಬೇರೆ ಮಾಡಿದ್ದಾರೆ ಸರ್ಕಾರದಲ್ಲಿ. ಹೇಳ್ತಾರೆ ಚುನಾವಣೆ ಖರ್ಚು ಕೊಡಿ ಅಂತ, ಯಾರ್ ಕರೆಕ್ಟಾಗ್ ಕೊಟ್ಟಿದ್ದಾರೆ ಹೇಳಿ ನೋಡೋಣ. ಅಷ್ಟೇ ಅಲ್ಲ ಎಷ್ಟ್ ಎಷ್ಟೋ ನಡೆದೋಗಿರುತ್ತೆ ಎಂದು ನಟ ದರ್ಶನ್ ಉತ್ತರಿಸಿದ್ದಾರೆ.
ಈ ವಿಡಿಯೋದ ತುಣುಕು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರಾಭವಗೊಂಡ ಅಭ್ಯರ್ಥಿಗಳ ಬೆಂಬಲಿಗರು ಜನತೆಗೆ ಅಭಿವೃದ್ಧಿ, ಸೇವೆ ಮುಖ್ಯವಲ್ಲ ಕೇವಲ ಚುನಾವಣೆ ಹಿಂದಿನ ದಿನ ನೀಡುವ ಹಣವೇ ಮುಖ್ಯವಾಗಿ ಸೋಲುಂಟಾಯಿತು ಎಂದು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸುತ್ತಿದ್ದು, ಪರ ವಿರೋಧದ ಚರ್ಚೆಗಳು ಕಂಡು ಬರುತ್ತಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….