ದೊಡ್ಡಬಳ್ಳಾಪುರ, (ಮೇ.31): ಆರೋಗ್ಯಕ್ಕೆ ಹಾನಿ ತರುವ ತಂಬಾಕು ಸೇವನೆಗಿಂತ ಆರೋಗ್ಯಕ್ಕಾಗಿ ಉತ್ತಮ ಆಹಾರ ಸೇವನೆ ಮುಖ್ಯವಾಗಿದೆ ಎನ್ನುವ ಕಾರಣದಿಂದಾಗಿ ನಮಗೆ ಆಹಾರ ಬೇಕು ತಂಬಾಕು ಅಲ್ಲ ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವ ತಂಬಾಕು ರಹಿತ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಶ್ರೀ ರಾಮ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಬಿ.ಅಮ್ಮಯ್ಯ ತಿಳಿಸಿದರು.
ನಗರದ ಬೆಸೆಂಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ರಾಮ ನರ್ಸಿಂಗ್ ಕಾಲೇಜ್ ಹಾಗೂ ಶ್ರೀ ರಾಮ ಆಸ್ಪತ್ರೆ ಸಹಯೋಗದಲ್ಲಿ ನಡೆದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಂಬಾಕು ಮುಕ್ತ ದೇಶ ನಿರ್ಮಿಸುವ ಪಣತೊಟ್ಟು, ತಂಬಾಕು ಸೇವನೆಯಿಂದಾಗುವ ಮಾರಣಾಂತಿಕ ಕಾಯಿಲೆಗಳಿಗೆ ಇತಿಶ್ರೀ ಹಾಡಲು ತಂಬಾಕು ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಬೇಕಾದ ಅಗತ್ಯವಿದೆ. ತಂಬಾಕು, ಮದ್ಯ ಸೇವನೆ ವ್ಯಸನಗಳನ್ನು ಅಂಟಿಸಿಕೊಂಡವರು ಮಾದಕ ವಸ್ತುಗಳ ವ್ಯಸನಕ್ಕೂ ತುತ್ತಾಗುತ್ತಿರುವುದು ಹೆಚ್ಚಾಗಿದೆ. ತಂಬಾಕನ್ನು ಪೂರ್ಣ ಪ್ರಮಾಣದಲ್ಲಿ ನಿಷೇಸುವುದಕ್ಕೆ ಸಾಧ್ಯವಾಗುವುದಿಲ್ಲ.
ತಂಬಾಕನ್ನು ಕೀಟನಾಶಕಗಳನ್ನು ಹಾಗೂ ವಿವಿಧ ಔಷಗಳ ತಯಾರಿಕೆಯಲ್ಲಿಯೂ ಬಳಸುತ್ತಾರೆ. ಈ ದಿಸೆಯಲ್ಲಿ ತಂಬಾಕು ಬೆಳೆಯಲು ಕಟ್ಟು ಪಾಡುಗಳನ್ನು ವಿಸಿ ಅನುಮತಿ ನೀಡಲಾಗುತ್ತಿದೆ. 1987ರಲ್ಲಿ ಧೂಮಪಾನ ನಿಷೇಧವನ್ನು ಸಂಫೂರ್ಣ ಜಾರಿ ಮಾಡುವ ಧ್ಯೇಯ ಹೊಂದಲಾಗಿತ್ತು. ಆದರೆ ತಂಬಾಕು ಉತ್ಪನ್ನಗಳ ಸೇವನೆ ನಿಂತಿಲ್ಲ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದರು.
ಶ್ರೀ ರಾಮ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಜಿ.ವಿಜಯ ಕುಮಾರ್ ಮಾತನಾಡಿ, ತಂಬಾಖಿನಲ್ಲಿ ಸುಮಾರು 250 ರೀತಿಯ ರಾಸಾಯನಿಕಗಳಿದ್ದು, ಇವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ.
ಕ್ಯಾನ್ಸರ್‍ಗೆ ತಂಬಾಕು ಸೇವನೆಯೇ ಪ್ರಮುಖ ಕಾರಣವಾಗಿದೆ. ಇದಲ್ಲದೇ ಹೃದಯಾಘಾತಕ್ಕೆ ಶೇ.50ರಷ್ಟು ಮೂಲ ಕಾರಣ ಧೂಮಪಾನವಾಗಿದೆ. ವಿವಿಧ ಶ್ವಾಸಕೋಶ ಸಮಸ್ಯೆಗಳು,ಮಧುಮೇಹ ಹೆಚ್ಚಳ, ಕಾಲಿನ ನರಗಳ ಸಮಸ್ಯೆ ಮೊದಲಾದ ಹಲವಾರು ರೋಗಗಳು ತಂಬಾಕು ಉತ್ಪನ್ನಗಳಿಂದಲೇ ಬರುತ್ತಿವೆ. ಇಂದಿನ ಪೀಳಿಗೆ ಈ ಬಗ್ಗೆ ಅರಿವು ಪಡೆದುಕೊಳ್ಳುವುದರೊಂದಿಗೆ ಇತರರಿಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ಸುಜ್ಞಾನ ದೀಪಿಕಾ ಸಂಚಾಲಕರಾದ ಎಂ.ಎಸ್.ಮಂಜುನಾಥ್ ತಂಬಾಕು ಉತ್ಪನ್ನಗಳಿಗೆ ದಾಸರಾಗದಂತೆ ಅದರ ಸೇವನೆ ಮಾಡುವುದಿಲ್ಲ ಎನ್ನುವ ಪ್ರತಿಜ್ಞಾ ವಿಧಿ ಬೋಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧಾಕರ್, ಉಪಪ್ರಾಂಶುಪಾಲ ಎಂ.ಸಿ.ಮಂಜುನಾಥ್, ಉಪನ್ಯಾಸಕಿ ಪರಿಮಳಾ ಮೊದಲಾದವರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….