ದೊಡ್ಡಬಳ್ಳಾಪುರ, (ಜೂ.24): ‘ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸೆಕೆಂಡ್ ಹುಚ್ಚ ವೆಂಕಟ್ ಇದ್ದಂತೆ’ ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕರ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಪ್ರದೀಪ್ ಈಶ್ವರ್ ರೀತಿಯ ಡ್ರಾಮಾ ಕಂಪನಿ ಕಲಾವಿದರನ್ನು ನಾನು ತುಂಬಾ ನೋಡಿದ್ದೇನೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಸೋತಿರಬಹುದು. ಆದರೆ, ಅವರು ಸಚಿವರಾಗಿ ಚಿಕ್ಕ ಬಳ್ಳಾಪುರ ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ಸೇರಿದಂತೆ ಹತ್ತಾರು ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದರು.
‘ಪ್ರದೀಪ್ ಈಶ್ವರ್ ನನ್ನ ಬಳಿ ಟ್ಯೂಷನ್‌ಗೆ ಬರಲಿ ರಾಜಕೀಯ ಜೀವನದಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನು ಕಲಿಸಿಕೊಡುತ್ತೇನೆ’ ಎಂದರು.
ಮುಂದಿನ ಐದು ವರ್ಷ ಪ್ರದೀಪ್ ಈಶ್ವರ್ ಏನು ಮಾಡಿ ತೋರಿಸುತ್ತಾರೆ ಎಂಬುದನ್ನು ಜನ ಕಾದು ನೋಡಲಿ. ರಾಜಕಾರಣದಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ಮುನ್ನಡೆಯಬೇಕು ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….