ದೊಡ್ಡಬಳ್ಳಾಪುರ, (ಜೂ.24): ಖ್ಯಾತ ಮುಸಾಶಿ ಕಂಪನಿ ತನ್ನ ಸಿಎಸ್ ಆರ್ ಅನುದಾನ ಮೂರುವರೆ ಲಕ್ಷದ ವೆಚ್ಚದಲ್ಲಿ ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ಹೈ ಮಾಸ್ಕ್ ದೀಪವನ್ನು ಅಳವಡಿಸಿದ್ದು, ಇಂದು ಚಾಲನೆ ನೀಡಲಾಯಿತು .
ಕಾರ್ಯಕ್ರಮದ ಅಂಗವಾಗಿ ಹೈ ಮಾಸ್ಕ್ ದೀಪವನ್ನು ಟೇಪ್ ಕತ್ತರಿಸಿ ಉದ್ಘಾಟಿಸಲಾಯಿತು. ಈ ವೇಳೆ ಮಾತನಾಡಿದ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ಬಸ್ ನಿಲ್ದಾಣದಲ್ಲಿ ಯಾವಾಗಲೂ ಕತ್ತಲೆ ಇರುತ್ತಿದ್ದ ಕಾರಣ ಬಸ್ ನಿಲ್ದಾಣ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಕಂಪನಿಯವರ ಸಹಾಯದಿಂದ ನಮ್ಮ ಬಸ್ ನಿಲ್ದಾಣಕ್ಕೆ ಮರು ಜೀವ ಬಂದಂತಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಈ ವೇಳೆ ಮಾತನಾಡಿದ ಮುಸಾಶಿ ಕಂಪನಿಯ ಹೆಚ್.ಆರ್.ಅಧಿಕಾರಿ ಸುದರ್ಶನ್ ಶೆಟ್ಟಿ, ಕಂಪನಿಯಿಂದ ಅನೇಕ ಜನಪರ ಕಾರ್ಯಗಳನ್ನು ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಊರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಸಹಕರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಆಂಜಿನಪ್ಪ, ಮುಸಾಶಿ ಕಂಪನಿಯ ಪ್ರಧಾನ ವ್ಯವಸ್ಥಾಪಕರಾದ ಶರವಣ, ಉಮಾಶಂಕರ್, ವೆಂಕಟೇಶುಲು, ಪ್ರಕಾಶ್, ಹೆಚ್.ಆರ್. ಮ್ಯಾನೇಜರ್ ಸುದರ್ಶನ್, ರವಿಕಿರಣ್, ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷರಾದ ಶಿವಣ್ಣ,ರವೀಶ್, ತಾಪಂ ಮಾಜಿ ಸದಸ್ಯ ವೆಂಕಟರಮಣಪ್ಪ, ಗ್ರಾಪಂ ಸದಸ್ಯ ಶಿವಕುಮಾರ್, ಹನುಮಂತ ರಾಯಪ್ಪ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….