ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕು, ಉನ್ನತ ಶ್ರೇಣಿಯನ್ನು ಪಡದು ಅಂದುಕೊಂಡಿದ್ದನ್ನು ಸಾಧಿಸಬೇಕು ಎನ್ನುವುದು ಎಲ್ಲಾ ವಿದ್ಯಾರ್ಥಿಗಳ ಆಸೆಯಾಗಿರುತ್ತದೆ. ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುವ ಕ್ರಮ ಬಹಳ ಮುಖ್ಯವಾಗಿರುತ್ತದೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹರಿತಲೇಖನಿ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವಂತೆ, ಪ್ರಶ್ನೋತ್ತರ ವರದಿಯನ್ನು ಇಂದಿನಿಂದ ಆರಂಭಿಸುತ್ತಿದ್ದು, ಸಾಮಾಜಿಕ ಚಿಂತಕ ಮುರುಳಿ ಮೆಳೇಕೋಟೆ ಅವರು ಸಂಗ್ರಹ ವರದಿ ಈ ಕೆಳಕಂಡಂತೆ ಇರಲಿದೆ.
01. ಪ್ರಖ್ಯಾತ ಆಂಗ್ ಕರ್ ವಾಟ್ ದೇವಾಲಯವು ಎಲ್ಲಿದೆ.?
- ಎ) ಕೊಂಬೋಡಿಯ
- ಬಿ) ಇಂಡೋನೇಷಿಯಾ
- ಸಿ) ಮಲೇಶಿಯಾ
- ಡಿ) ಥೈಲ್ಯಾಂಡ್
ಉತ್ತರ: ಕೊಂಬೋಡಿಯ.
02. ಕ್ರಯೋಜೆನಿಕ್ ಎಂಜಿನ್ ಗಳ ಅನ್ವಯವನ್ನು ಇದರಲ್ಲಿ ಕಾಣಬಹುದು.?
- ಎ) ಸಬ್ – ಮೇರಿನ್ ಸಂಚಾಲನೆ
- ಬಿ) ಫ್ರಾಸ್ಟ್ ಫ್ರೀ (ಮಂಜುಗಡ್ಡೆ ಮುಕ್ತ) ರೆಫ್ರಿಜರೇಟರ್ ಗಳು
- ಸಿ) ರಾಕೆಟ್ ತಂತ್ರಜ್ಞಾನ
- ಡಿ) ಸೂಪರ್ ಕಂಡಕ್ಟಿವಿಟಿ
ಉತ್ತರ: ರಾಕೆಟ್ ತಂತ್ರಜ್ಞಾನ.
03. ಮಧ್ಯಯುಗದ ಕಾಲದಲ್ಲಿ ಸಂಸ್ಕೃತದಲ್ಲಿ ರಚಿತವಾದ ಮೊದಲ ಐತಿಹಾಸಿಕ ಕೃತಿ.?
- ಎ) ಪೃಥ್ವಿರಾಜ ವಿಜಯ
- ಬಿ) ಹಮ್ಮಿರ ವಿಜಯ
- ಸಿ) ರಾಜ ತರಂಗಿಣಿ
- ಡಿ) ರಾಜ ಕಾಲ ನಿರ್ಣಯ
ಉತ್ತರ: ರಾಜ ತರಂಗಿಣಿ.
04. ಮಾಂಟ್ರಿಯಲ್ ಪ್ರೋಟೋಕಾಲ್ ಒಪ್ಪಂದವು ಯಾವುದಕ್ಕೆ ಸಂಬಂಧಿಸಿದೆ.?
- ಎ) ಜಾಗತಿಕ ತಾಪಮಾನದ ಪರೀಕ್ಷೆಗಾಗಿ
- ಬಿ) ಓಜೋನ್ ವಿನಾಶದ ಪರೀಕ್ಷೆಗಾಗಿ
- ಸಿ) ಜೀವಿವೈದ್ಯವನ್ನು ಸಂರಕ್ಷಿಸುವುದಕ್ಕಾಗಿ
- ಡಿ) ಆರ್ದ್ರ ಭೂಮಿಯ ರಕ್ಷಣೆಗಾಗಿ
ಉತ್ತರ: ಓಝೋನ್ ವಿನಾಶದ ಪರೀಕ್ಷೆಗಾಗಿ.
05. ಈ ಪರಿಸರ ಮಾಲಿನ್ಯಕಗಳ ಪೈಕಿ ಯಾವುದು ಆಮ್ಲ ಮಳೆಗೆ ಕಾರಣ.?
- ಎ) ಕಾರ್ಬನ್ ಡೈ ಆಕ್ಸೈಡ್
- ಬಿ) ಹೈಡ್ರೋಜನ್ ಪರಾಕ್ಸೈಡ್
- ಸಿ) ಕಾರ್ಬನ್ ಮೊನಾಕ್ಸೈಡ್
- ಡಿ) ಸಲ್ಫರ್ ಡೈಆಕ್ಸೈಡ್
ಉತ್ತರ: ಸಲ್ಫರ್ ಡೈಯಾಕ್ಸೈಡ್.
06. ಕಾವೇರಿ ನದಿಯು ತಮಿಳುನಾಡನ್ನು ಪ್ರವೇಶಿಸಿದ ಕೂಡಲೇ ಅದು ಯಾವ ಜಲಪಾತವನ್ನುಂಟು ಮಾಡುತ್ತದೆ.?
- ಎ) ಜೋಗ್ ಜಲಪಾತ
- ಬಿ) ಪಂಚ ಜಲಪಾತಗಳು
- ಸಿ) ಹೊಗೆನಿಕಲ್ ಜಲಪಾತ
- ಡಿ) ಶಿವನಸಮುದ್ರ ಜಲಪಾತ
ಉತ್ತರ: ಹೊಗೆನಿಕಲ್ ಜಲಪಾತ.
07. ಮೊದಲ ಬಾರಿಗೆ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಪ್ರಾತಿನಿಧ್ಯ ನೀಡಿದ ಕಾಯ್ದೆ ಈ ಪೈಕಿ ಯಾವುದು.?
- ಎ) ಭಾರತ ಸರ್ಕಾರ ಕಾಯ್ದೆ 1919
- ಬಿ) ಭಾರತ ಮಂಡಳಿಗಳ ಕಾಯ್ದೆ 1909
- ಸಿ) ಭಾರತ ಮಂಡಳಿಗಳ ಕಾಯ್ದೆ 1892
- ಡಿ) ಭಾರತ ಮಂಡಳಿಗಳ ಕಾಯ್ದೆ 1861
ಉತ್ತರ: ಭಾರತ ಮಂಡಳಿಗಳ ಕಾಯ್ದೆ1909.
08. ಭಾರತದಲ್ಲಿ ಅತ್ಯಧಿಕವಾಗಿ ಗೋಧಿ ಬೆಳೆಯುವ ರಾಜ್ಯ ಯಾವುದು.?
- ಎ) ಹರಿಯಾಣ
- ಬಿ) ಪಂಜಾಬ್
- ಸಿ) ಬಿಹಾರ್
- ಡಿ ) ಉತ್ತರ ಪ್ರದೇಶ
ಉತ್ತರ: ಉತ್ತರ ಪ್ರದೇಶ.
09. ಬಾಳುವವರೆಗೂ ಚೆನ್ನಾಗಿ ಬಾಳಿ, ಪಡೆಯುವಾಗಲು ಚೆನ್ನಾಗಿ ಬಾಳಿ, ಒಮ್ಮೆ ಮಣ್ಣಾದರೆ ತಿರುಗಿ ಬರುವುದಿಲ್ಲ ಇದು ಯಾರ ತತ್ವ.?
- ಎ) ಕಾಪಾಲಿಕ ಪಂಥ
- ಬಿ) ನಾಗಾರ್ಜುನರ ಶೂನ್ಯವಾದ
- ಸಿ) ಅದ್ವೈತ
- ಡಿ) ಚಾರ್ವಾಕ
ಉತ್ತರ: ಚಾರ್ವಾಕ.
10. ಅಜಾತಶತ್ರುವು ಯಾವ ರಾಜ್ಯದ ದೊರೆ.?
- ಎ) ಮಗಧ
- ಬಿ) ವತ್ಸ
- ಸಿ) ಅವಂತಿ
- ಡಿ) ಕೋಸಲ
ಉತ್ತರ: ಮಗಧ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….