ಮೈಸೂರು, (ಜೂ.27): ಅರಮನೆ ನಗರಿ ಮೈಸೂರಿನಲ್ಲಿ ಅಕ್ರಮವಾಗಿ ಬೌಬೌ ಬಿರಿಯಾನಿ ನಡೆಸುತ್ತಿರುವ ಕುರಿತು ವರದಿಯಾಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.
ಮೈಸೂರು ಜಿಲ್ಲೆಯ ಕೆ.ಆರ್ ನಗರದ ಪ್ರಭುಶಂಕರ ಬಿಲ್ಡಿಂಗ್ ನಲ್ಲಿದ್ದ ರೆಸ್ಟೋರೆಂಟ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ನಾಯಿ ಮಾಂಸದ ದಂಧೆ ಪತ್ತೆಯಾಗಿದೆ.
ದಾಳಿ ವೇಳೆ ರೆಸ್ಟೊರೆಂಟ್ ನಲ್ಲಿ ನಾಯಿ ಮಾಂಸ ಹಾಗೂ ಕೊಳೆತ ಕೋಳಿ ಮಾಂಸ ಕಂಡುಬಂದಿದ್ದು, ಮಾಂಸವನ್ನು ವಶಪಡಿಸಿಕೊಂಡ ಅಧಿಕಾರಿಗಳು, ರೆಸ್ಟೊರೆಂಟ್ ಗೆ ಬೀಗಮುದ್ರೆ ಜಡಿದಿದ್ದಾರೆ.
ಇನ್ನೂ ಪ್ರತಿಷ್ಠಿತ ಹೋಟೆಲ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಕೊಳೆತ ಮಾಂಸ, ಕಲ್ಲುಗಟ್ಟಿದ ಮೀನು, ಮಸಾಲೆ ಸಮೇತ ಬೂಸ್ಟ್ ಹಿಡಿದ ನಾನ್ ವೆಜ್ ನೋಡಿ ದಂಗಾಗಿದ್ದು, ಮಾಲೀಕರಿಗೆ ದಂಡ ವಿಧಿಸಿ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ತಹಶೀಲ್ದಾರ್ ಸಂತೋಷ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಮಹೇಂದ್ರಪ್ಪ, ಪುರಸಭೆ ಆರೋಗ್ಯಾಧಿಕಾರಿಗಳು ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….