ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ

01. “ರಾಜ್ಯ ಜೀವ ವಿಮಾ ಯೋಜನೆ” ಇವರ ದಿವಾನಗಿರಿಯಲ್ಲಿ ಜಾರಿಗೆ ಬಂದಿತು.?

  • ಎ) ರಂಗಾಚಾರ್ಲು
  • ಬಿ) ಶೇಷಾದ್ರಿ ಅಯ್ಯರ್
  • ಸಿ) ವಿಶ್ವೇಶ್ವರಯ್ಯ
  • ಡಿ) ಮಿರ್ಜಾ ಇಸ್ಮಾಯಿಲ್

ಉತ್ತರ: ಬಿ) ಶೇಷಾದ್ರಿ ಅಯ್ಯರ್

02. ಬೆಂಗಳೂರನ್ನು ಮೊಘಲರಿಂದ ಕೊಂಡುಕೊಂಡ ಮೈಸೂರಿನ ದೊರೆ ಯಾರು.?

  • ಎ) ರಾಜ ಒಡೆಯರ್
  • ಬಿ) ಚಿಕ್ಕದೇವರಾಜ ಒಡೆಯರ್
  • ಸಿ) ದೊಡ್ಡದೇವರಾಜ ಒಡೆಯರ್
  • ಡಿ) 3ನೇ ಕೃಷ್ಣದೇವರಾಯ ಒಡೆಯರ್

ಉತ್ತರ: ಬಿ) ಚಿಕ್ಕದೇವರಾಜ ಒಡೆಯರ್

03. “ಮಲಗಿರುವ ಬುದ್ಧನ ಪರ್ವತ” ಇರುವ ಜಿಲ್ಲೆ ಯಾವುದು.?

ಎ) ಕಲ್ಬುರ್ಗಿ

ಬಿ) ರಾಯಚೂರು

ಸಿ) ಬಳ್ಳಾರಿ

ಡಿ) ಯಾದಗಿರಿ

ಉತ್ತರ: ಡಿ) ಯಾದಗಿರಿ

04. ” ಹಿಂದುಸ್ತಾನ್ ಸೇವಾದಳ ” ವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದವರು ಯಾರು.?

  • ಎ) ಕಡಪ ರಾಘವೇಂದ್ರ ರಾವ್
  • ಬಿ) ಹೆಚ್ ಆರ್ ದೇಶಪಾಂಡೆ
  • ಸಿ) ಗೋವಿಂದರಾವ್ ಯಾಲಗಿ
  • ಡಿ) ಎನ್ ಎಸ್ ಹರ್ಡೇಕರ್

ಉತ್ತರ: ಡಿ) ಎನ್ ಎಸ್ ಹರ್ಡೇಕರ್

05. ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ ಯಾವುದು.?

  • ಎ) ಶ್ರೀರಂಗಪಟ್ಟಣ
  • ಬಿ) ಬಾದಾಮಿ
  • ಸಿ) ಬಿಜಾಪುರ
  • ಡಿ) ಶಿರಾ

ಉತ್ತರ : ಡಿ) ಶಿರಾ

06. ಭೂದಾನ ಚಳುವಳಿಯನ್ನು ಆರಂಭಿಸಿದರು ಯಾರು.?

  • ಎ) ಮಹಾತ್ಮ ಗಾಂಧಿ
  • ಬಿ) ಸ್ವಾಮಿ ವಿವೇಕಾನಂದ
  • ಸಿ) ಜಯಪ್ರಕಾಶ ನಾರಾಯಣ
  • ಡಿ) ಆಚಾರ್ಯ ವಿನೋಬಾ ಭಾವೆ

ಉತ್ತರ: ಡಿ) ಆಚಾರ್ಯ ವಿನೋಬಾ ಭಾವೆ

07. ಶರೀರದ ಯಾವ ಭಾಗಕ್ಕೆ ಗ್ಲುಕೋಮಾ ಕಾಯಿಲೆ ಬರುತ್ತದೆ.?

  • ಎ) ಕಿವಿ
  • ಬಿ) ಮೂಗು
  • ಸಿ) ಕಣ್ಣು
  • ಡಿ) ಕಿಡ್ನಿ

ಉತ್ತರ: ಸಿ) ಕಣ್ಣು

08. ಈ ಕೆಳಗಿನವುಗಳಲ್ಲಿ ಯಾವುದು ಕಾವೇರಿ ನದಿಯ ಉಪನದಿ ಅಲ್ಲ.?

  • ಎ) ಹಾರಂಗಿ
  • ಬಿ) ಕಬಿನಿ
  • ಸಿ) ಶಿಂಷಾ 
  • ಡಿ) ಭೀಮಾ 

ಉತ್ತರ: ಡಿ) ಭೀಮಾ ನದಿ

09. ಯಾವ ವೇದದಲ್ಲಿ ಪವಿತ್ರ ಗಾಯಿತ್ರಿ ಮಂತ್ರವಿದೆ.?

  • ಎ) ಋಗ್ವೇದ
  • ಬಿ) ಯಜುರ್ವೇದ
  • ಸಿ) ಸಾಮವೇದ
  • ಡಿ) ಅಥರ್ವವೇದ

ಉತ್ತರ: ಎ) ಋಗ್ವೇದ

10. ಭಾರತದಲ್ಲಿ ಯಾವ ದಿನದಂದು ” ಕಿಸಾನ್ ದಿವಸ್ ” (ರೈತ ದಿನ) ವನ್ನು ಆಚರಿಸಲಾಗುತ್ತದೆ.?

  • ಎ) ಡಿಸೆಂಬರ್ – 21
  • ಬಿ) ಡಿಸೆಂಬರ್ – 22
  • ಸಿ) ಡಿಸೆಂಬರ್ – 23
  • ಡಿ) ಡಿಸೆಂಬರ್ – 24

ಉತ್ತರ: ಸಿ) ಡಿಸೆಂಬರ್ – 23

ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!