ಹರಿತಲೇಖನಿ ದಿನಕ್ಕೊಂದು ಕಥೆ: ಮೇಕೆ ಮತ್ತು ಕೋಳಿ ಹಿಂಡು

ಆ ಊರಿನ ರಸ್ತೆಯಂಚಿನ ಎರಡೂ ಕಡೆ ಕಾಲುವೆ ಹರಿಯುತ್ತಿತ್ತು. ಆ ಕಾಲುವೆಗೆ ಹೊಂದಿಕೊಂಡಿರುವ ಮನೆಗಳಲ್ಲಿ ಕುರಿ, ಕೋಳಿ, ಮೇಕೆ, ಹಸು, ಎಮ್ಮೆ ಸಾಕಲಾಗುತ್ತಿತ್ತು. ಆ ರಸ್ತೆಗೆ ಆ ಕಾಲುವೆಗೆ ಆ ಮನೆಗಳಿಗೆ ಆ ಪ್ರಾಣಿಗಳಿಗೆ ಒಂದಕ್ಕೊಂದು ಸಂಬಂಧವಿತ್ತು. ಇವೆಲ್ಲದಕ್ಕೂ ಕಾಲುವೆ ಆಧಾರವಾಗಿತ್ತು.

ಅಲ್ಲೊಂದು ಕಾಲು ಮುರಿದ ಮೇಕೆಯಿತ್ತು. ತನ್ನ ತುಂಟ ಬುದ್ಧಿಯಿಂದಲೇ ಅದು ಕಾಲು ಮುರಿದುಕೊಂಡಿತ್ತು. ಅದಕ್ಕೆ ಕಾಡೌಷಧಿ ಕೊಡಿಸಿ ಗುಣಪಡಿಸಲು ನೋಡಿದರೂ ಅದರ ಕಾಲು ಮೊದಲಿನಂತಾಗಲಿಲ್ಲ. ಅದಕ್ಕಾಗಿ ಈ ಮೇಕೆಯನ್ನು ಉಳಿದ ಮೇಕೆ ಹಿಂಡಿನಲ್ಲಿ ಮೇಯಲು ಹೊಡೆದುಕೊಂಡು ಹೋಗುತ್ತಿರಲಿಲ್ಲ. ಸ್ವಲ್ಪ ದಿನ ಮೇಕೆಗೆ ಕಾಲ ಕಳೆಯುವುದೇ ಕಷ್ಟವಾಯಿತು. ಕಟ್ಟಿದ ಜಾಗದಲ್ಲಿಯೇ ನಿಂತು ಗೂಟಕ್ಕೆ ಕಟ್ಟಿದ ಹುಲ್ಲನ್ನು ತಿನ್ನಲು ಬೇಸರವಾಯಿತು. ಥರೇಹವಾರಿ ಗಿಡ ತಿಂದು ತೇಗುತ್ತಿದ್ದ ಅದಕ್ಕೆ ನಾಲಿಗೆ ಕೆಟ್ಟಂತಾಗಿ ಸಾಕು ಸಾಕಾಗಿ ಹೋಯಿತು. ದಿನಕಳೆದಂತೆ ಅದು ಊರಿನ ಇತರ ಪ್ರಾಣಿಗಳ ಜೊತೆ ಗೆಳೆತನ ಬೆಳೆಸಿತು. ಕುಂಟು ಕಾಲಿನಲ್ಲಿಯೇ ಊರು ಅಲೆಯುತ್ತಾ ಗೆಳೆಯರ ಗುಂಪನ್ನು ವಿಸ್ತರಿಸಿಕೊಂಡಿತು.

ಆಗ ಮೇಕೆಗೆ ಹೆಚ್ಚು ಗೆಳೆಯರಾಗಿದ್ದು ಕೋಳಿ ಹಿಂಡು. ಅದಕ್ಕೆ ಮುಂದಿನ ಕಾಲನ್ನೆತ್ತಿ ಗಿಡಗಳನ್ನು ಬಾಗಿಸಲು ಮತ್ತು ಗಿಡಗಳ ತುದಿ ಹಿಡಿದುಕೊಂಡು ನಿಲ್ಲಲು ಆಗುತ್ತಿರಲಿಲ್ಲ. ಮುಂಗಾಲುಗಳನ್ನು ಮಡಚಿಕೊಂಡೇ ಮೇಯುತ್ತಿತ್ತು. ಇದರಿಂದ ಕೋಳಿಗಳಿಗೆ ಹಲವಾರು ಲಾಭಗಳಾಗುತ್ತಿದ್ದವು. ಬಗ್ಗಿ ನಿಲ್ಲುತ್ತಿದ್ದ ಮೇಕೆಯ ಹೊಟ್ಟೆಯ ಕೆಳಭಾಗದ ಉಣ್ಣೆಗಳು ಸುಲಭವಾಗಿ ತಿನ್ನಲು ಸಿಗುತ್ತಿದ್ದವು. ಕಾಲುವೆ ಪಕ್ಕದ ಹುಲ್ಲನ್ನು ಮೇಕೆ ತಿನ್ನುವಾಗ ಮಣ್ಣು ಮೆತ್ತಗಿರುವ ಕಾರಣದಿಂದ ಹುಲ್ಲಿನ ಬೇರುಗಳು ಮೇಲೆ ಬಂದು ಅದರ ಬುಡದಲ್ಲಿದ್ದ ಹುಳಗಳು ಕೋಳಿಗಳಿಗೆ ನಿರಾಯಾಸವಾಗಿ ಸಿಕ್ಕು ಮೃಷ್ಟಾನ್ನ ಭೋಜನವಾಗುತ್ತಿತ್ತು.

ಕೋಳಿಗಳು ನೀರನ್ನು ಕುಡಿಯಲು ಹೋದಾಗ ಕಾಲುವೆಯ ನೀರು ಎಟುಕದಿದ್ದರೆ ಮೇಕೆಯ ಮೇಲೆ ಹತ್ತಿ ಕುಡಿಯುತ್ತಿದ್ದವು. ಮೇಕೇಗೂ ಎತ್ತರದ ಗಿಡಗಳ ಎಲೆಗಳನ್ನು ತಿನ್ನಲು ಸಾಧ್ಯವಾಗದಿದ್ದಾಗ ಎಲ್ಲಾ ಕೋಳಿಗಳು ಗಿಡದ ಮೇಲೆ ಹತ್ತಿ ಕುಳಿತು ಕೊಂಬೆಯನ್ನು ಬಾಗಿಸುತ್ತಿದ್ದವು. ಮೇಕೆ ಎಲೆಗಳನ್ನು ತಿಂದು ಖುಷಿಪಡುತ್ತಿತ್ತು. ರಕ್ತ ಹೀರುವ ಉಣ್ಣೆಗಳನ್ನು ತಿನ್ನುವುದರಿಂದ ಮೇಕೆಗೆ ಉಣ್ಣೆ ಕಾಟ ತಪ್ಪಿತ್ತು.

ಒಮ್ಮೆ ಮೇಕೆ ಬಾಗಿ ಹುಲ್ಲು ತಿನ್ನುತ್ತಿದ್ದಾಗ ಕೋಳಿಯೊಂದು ಉಣ್ಣೆ ಹಿಡಿದು ತಿನ್ನುತ್ತಿತ್ತು. ಮೇಯುವತ್ತ ಗಮನ ವಹಿಸಿದ್ದ ಮೇಕೆಯು ಕೋಳಿಯ ಮೇಲೆ ಹಿಕ್ಕೆ ಹಾಕಿಬಿಟ್ಟಿತು. ಸಿಟ್ಟಾದ ಕೋಳಿ ಮೇಕೆಯ ಹೊಟ್ಟೆಗೆ ಜೋರಾಗಿ ಕುಕ್ಕಿತು. ಅವುಗಳು ಪರಸ್ಪರ ಜಗಳವಾಡಿಕೊಂಡವು. ಈ ಸುದ್ದಿ ತಿಳಿದ ಕೋಳಿ ಹಿಂಡು ಮೇಕೆಯ ಮೇಲೆ ಮುನಿಸಿಕೊಂಡಿತು. ‘ನಾವು ಮೇಕೆಗೆ ಎಷ್ಟೊಂದು ಸಹಾಯ ಮಾಡುತ್ತೇವೆ. ಆದರೂ ಅದು ಋುಣ ಮರೆತ ಕೃತಘ್ನ’ ಎಂದು ಬೈದುಕೊಂಡವು. ಮೇಕೆಗೂ ಅದೇ ಭಾವ ಮೂಡಿತ್ತು. ‘ತಮ್ಮ ಹಸಿವಿಗೆ ನನ್ನನ್ನೇ ಉಂಡ ಈ ಕೋಳಿಗಳಿಗೆ ಅದೆಷ್ಟು ಸೊಕ್ಕು. ಕೇಜಿ ತೂಕದ ಕೋಳಿಗಳಿಗೆ ಅಷ್ಟಿರಬೇಕಾದರೆ ನನಗೆಷ್ಟಿರಬೇಡ’ ಎಂದು ಬೀಗಿತು.

ಕೆಲ ದಿನಗಳು ಉರುಳಿದಂತೆ ಕಾಲುವೆಯ ನೀರು ನಿಂತುಬಿಟ್ಟಿತು. ಕಾಲುವೆಯ ಅಕ್ಕಪಕ್ಕದ ಹುಲ್ಲು ಒಣಗಿ ಮೇಕೆಗೆ ಹಸಿವಿನ ಚಿಂತೆ ಹೆಚ್ಚಾಯಿತು. ಉಣ್ಣೆಗಳು ಹೆಚ್ಚಾಗಿ ಸೊರಗಿಹೋಯಿತು. ಕೋಳಿ ಹಿಂಡು ಮಾತ್ರ ಬೇಕಂತಲೇ ಮೇಕೆಯ ಮುಂದೆ ಬಿಂಕದಿಂದ ಓಡಾಡಿಕೊಂಡಿತ್ತು. ಒಂದು ಹುಂಜಕ್ಕೆ ಮಾತ್ರ ಇದು ಸರಿ ಅನಿಸಲಿಲ್ಲ. ಒಂದು ದಿನ ಮೇಕೆಯನ್ನು ಕರೆದುಕೊಂಡು ಬಂದು ‘ಈ ಮೇಕೆ ಏನು ತಪ್ಪು ಮಾಡಿದೆ ಅಂತ ನಾವೆಲ್ಲ ಹೀಗಿರಬೇಕು? ಗೊತ್ತಿಲ್ಲದೆ ಮಾಡಿದ್ದು ತಪ್ಪಲ್ಲ. ನಮ್ಮ ನಮ್ಮ ಅಹಂಕಾರಕ್ಕೆ ಗೆಳೆತನ ಹಾಳಾಗಬೇಕೇ?’ ಎಂದು ಕೋಪ ಮಾಡಿಕೊಂಡಿತು. ಆಗ ತಕ್ಷ ಣ ಮಾತಾಡಿದ ಮೇಕೆ ‘ಇಲ್ಲ ನನ್ನಿಂದಾನೂ ತಪ್ಪಾಗಿದೆ ಕ್ಷ ಮಿಸಿ. ನಮ್ಮಿಬ್ಬರ ಜಗಳ ಎಲ್ಲರಿಗೂ ಬೇಸರ ತಂದಿದೆ. ಮೊದಲಿನ ಹಾಗೆಯೇ ಚೆನ್ನಾಗಿರೋಣ’ ಅನ್ನುತ್ತಾ ಕೋಳಿ ಹಿಂಡನ್ನು ಸೇರಿಕೊಂಡಿತು. ಮೇಕೆಯ ಜೊತೆ ಜಗಳವಾಡಿದ್ದ ಕೋಳಿ ಪುರ್ರನೆ ಹಾರಿ ಮೇಕೆಯ ಮೇಲೆ ಕುಳಿತುಕೊಂಡಿತು.

ಕೃಪೆ: ಸಾಮಾಜಿಕ ಜಾಲತಾಣ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!