ಹರಿತಲೇಖನಿ ದಿನಕ್ಕೊಂದು ಕಥೆ: ದ್ರೌಪದಿಯ ಪಾತ್ರೆ !

ನಿಮಗೆ ಮಹಾಭಾರತದ ಕೌರವರು ಹಾಗೂ ಪಾಂಡವರ ಬಗ್ಗೆ ತಿಳಿದಿರಬಹುದು. ಕೌರವರ ಯುವರಾಜ ದುರ್ಯೋಧನ ಹಾಗೂ ಅವನ ಮಾಮ ಶಕುನಿಯು ಕಪಟದಿಂದ ಪಾಂಡವರ ರಾಜ್ಯವನ್ನು ಕಸಿದುಕೊಂಡಿದ್ದರು. ಹಾಗೂ ಅವರನ್ನು 12 ವರ್ಷಗಳ ವನವಾಸ ಹಾಗೂ 01 ವರ್ಷದ ಅಜ್ಞಾತವಾಸಕ್ಕಾಗಿ ಕಳಿಸಿದರು.

ಈ ವಿಷಯ ಪಾಂಡವರ ವನವಾಸದ ಸಮಯದ್ದಾಗಿದೆ. ಕುರುಡನಾಗಿದ್ದ ಧೃತರಾಷ್ಟ್ರನು ಹಸ್ತಿನಾಪುರದ ರಾಜನಾಗಿದ್ದನು. ಇದರಿಂದಾಗಿ ದೃತರಾಷ್ಟ್ರನ ಮಗ ದುರ್ಯೋಧನನ ಕೈಯಲ್ಲಿ ರಾಜ್ಯದ ಕಾರ್ಯಭಾರವಿತ್ತು. ಒಂದು ಬಾರಿ ಮಹರ್ಷಿ ದೂರ್ವಾಸರು ಆಕಸ್ಮಿಕವಾಗಿ ಕೌರವರ ದರಬಾರಿಗೆ ಬಂದರು. 

ಮಹರ್ಷಿ ದೂರ್ವಾಸರು ಮುಂಗೋಪಿ ಎಂದು ತ್ರಿಲೋಕದಲ್ಲಿ ಎಲ್ಲರಿಗೂ ತಿಳಿದಿತ್ತು. ಮಹರ್ಷಿ ದೂರ್ವಾಸರ ಎದುರು ಏನಾದರೂ ಅಯೋಗ್ಯವಾಗಿರುವುದು ಘಟಿಸಿದರೆ ಅಥವಾ ಅವರ ಅನಾದರವಾದರೆ ಅವರು ಕೂಡಲೇ ಸಿಟ್ಟಿಗೊಳಗಾಗುತ್ತಿದ್ದರು. ಹಾಗೂ ಅವರು ಎದುರಿನಲ್ಲಿರುವವನಿಗೆ ಆ ಕ್ಷಣದಲ್ಲೇ ಶಾಪವನ್ನು ಕೊಡುತ್ತಿದ್ದರು. 

ಮಹರ್ಷಿ ದೂರ್ವಾಸರು ಆಕಸ್ಮಿಕವಾಗಿ ಹಸ್ತಿನಾಪುರಕ್ಕೆ ಆಗಮಿಸಿದ್ದರು. ಆದರೆ ದುರ್ಯೋಧನನು ಅವರಿಗೆ ಯೋಗ್ಯವಾದ ಆದರಾತಿಥ್ಯವನ್ನು ಮಾಡಿದನು. ಅವರ ಸ್ನಾನ, ಸಂಧ್ಯಾ, ಭೋಜನ, ನಿದ್ರೆ ಹಾಗೂ ಯೋಗ್ಯ ಆಯೋಜನೆಗಳನ್ನು ಮಾಡಿ ಅವರನ್ನು ಸತ್ಕರಿಸಿದನು. ಅವರಿಗೆ ಯಾವುದೇ ವಿಷಯದ ಕೊರತೆಯು ಅನುಭವವಾಗದಂತೆ ನೋಡಿಕೊಂಡನು. 

ಈ ಆದರದ ಸತ್ಕಾರದಿಂದ ಮಹರ್ಷಿ ದೂರ್ವಾಸರು ಬಹಳ ಪ್ರಸನ್ನರಾದರು. ಅವರು ದುರ್ಯೋಧನನಿಗೆ ‘ನಾನು ನಿನ್ನ ಮೇಲೆ ಅತ್ಯಂತ ಪ್ರಸನ್ನನಾಗಿದ್ದೇನೆ, ಏನು ಬೇಕೋ ಕೇಳು’ ಎಂದು ಹೇಳಿದರು. ಇದನ್ನು ಕೇಳಿ ದುರ್ಯೋಧನನು ಮನಸ್ಸಿನಲ್ಲಿಯೇ ಅತ್ಯಂತ ಪ್ರಸನ್ನನಾದನು. ದುರ್ಯೋಧನನಿಗೆ ಪಾಂಡವರ ಮೇಲೆ ಸಿಟ್ಟಿತ್ತು. ಅವನು ‘ಪಾಂಡವರು ಈಗ ವನವಾಸದಲ್ಲಿದ್ದಾರೆ ಹಾಗೂ ಅವರ ಬಳಿ ಯಾವುದೇ ಯೋಗ್ಯ ಸೌಲಭ್ಯಗಳಿಲ್ಲ, ನಾನು ಮಾಡಿದಂತೆ ಆದರ-ಆತಿಥ್ಯವನ್ನು ಪಾಂಡವರಿಗೆ ಮಾಡಲು ಸಾಧ್ಯವಾಗುವುದಿಲ್ಲ, ನಾನು ದೂರ್ವಾಸ ಋಷಿಗಳನ್ನು ಅವರ ಬಳಿ ಕಳುಹಿಸಿದರೆ ಅವರ ಬಳಿ ಯೋಗ್ಯ ಆದರ ಸತ್ಕಾರವು ಸಿಗದಿರುವುದರಿಂದ ಅವರು ಬೇಗನೇ ಸಿಟ್ಟಾಗಿ ಅವರಿಗೆ ಶಾಪ ಕೊಡುತ್ತಾರೆ. ಆದುದರಿಂದ ನಾನು ಈ ಅವಕಾಶದ ಲಾಭ ಪಡೆಯಬೇಕು’ ಎಂಬ ಕೆಟ್ಟವಿಚಾರ ಬಂತು.

ಅನಂತರ ಅವನು ಕೃತಕ ನಮ್ರತೆಯಿಂದ ‘ಋಷಿಗಳೇ ನಾನು ನಿಮ್ಮ ಯಥಾ ಶಕ್ತಿ ಸತ್ಕಾರವನ್ನು ಮಾಡಿದ್ದೇನೆ. ತಾವು ಇದರಿಂದ ಸಂತುಷ್ಟರಾಗಿರುವುದು ನಮಗೆ ಬಹಳ ಆನಂದದ ಸಂಗತಿಯಾಗಿದೆ, ಇದರಿಂದ ನನ್ನ ಪುಣ್ಯವೂ ಹೆಚ್ಚಾಗುವುದು, ಇದು ಮಹತ್ವದ ವಿಷಯವಾಗಿದೆ. ಇಂತಹ ಪುಣ್ಯವು ನನ್ನ ಪಾಂಡವ ಸಹೋದರರಿಗೂ ದೊರೆಯಲಿ ಎಂಬುದು ನನ್ನ ತೀವ್ರ ಇಚ್ಛೆಯಾಗಿದೆ. ಆದುದರಿಂದ ತಾವು ಹತ್ತಿರದಲ್ಲಿಯೇ ವಾಸಿಸುತ್ತಿರುವ ನನ್ನ ಪಾಂಡವ ಸಹೋದರರ ಗುಡಿಸಲಿಗೆ ಹೋಗಿ ಅವರಿಗೂ ಆಶೀರ್ವಾದ ನೀಡಿ, ತಾವು ತಮ್ಮ ಶಿಷ್ಯರೊಂದಿಗೆ ಒಂದು ಸಮಯದ ಭೋಜನವನ್ನು ಪಾಂಡವರ ಗುಡಿಸಲಿನಲ್ಲಿ ಮಾಡಿ ಅವರಿಗೂ ಆಶೀರ್ವಾದ ನೀಡಿ. ತಾವು ತಮ್ಮ ಶಿಷ್ಯರೊಂದಿಗೆ ಒಂದು ಹೊತ್ತಿನ ಊಟವನ್ನು ಪಾಂಡವರ ಪರ್ಣಕುಟೀರದಲ್ಲಿಯೂ ಮಾಡಬೇಕು ಎಂಬುದು ನನ್ನ ಇಚ್ಛೆಯಾಗಿದೆ. ನನ್ನ ಇಚ್ಛೆಯನ್ನು ಪೂರ್ಣಗೊಳಿಸಿ’ ಎಂದು ಹೇಳಿದನು. ಆಗ ದೂರ್ವಾಸರು ‘ತಥಾಸ್ತು, ನಾನು ನಿನ್ನ ಇಚ್ಛೆಯನ್ನು ಅವಶ್ಯವಾಗಿ ಪೂರ್ಣಗೊಳಿಸುವೆನು’ ಎಂದು ಹೇಳಿ ತಮ್ಮ ಶಿಷ್ಯರ ಬಳಗದೊಂದಿಗೆ ಪಾಂಡವರ ಗುಡಿಸಿಲಿನ ಕಡೆಗೆ ಹೋದರು.

ದುರ್ಯೋಧನನು ಮನಸ್ಸಿನಲ್ಲಿ ಬಹಳ ಸಂತುಷ್ಟಗೊಂಡನು. ಅವನು, ‘ಪಾಂಡವರ ಬಳಿ ಏನೂ ಇಲ್ಲ, ಅವರ ವನವಾಸದ ದಾರಿದ್ರ್ಯದಲ್ಲಿ ಅವರು ಇಷ್ಟು ಜನರಿಗೆ ಊಟದ ಹಾಗೂ ಅವರ ಸತ್ಕಾರದ ವ್ಯವಸ್ಥೆಯನ್ನು ಹೇಗೆ ಮಾಡಬಹುದು? ಹೀಗಿರುವಾಗ ದೂರ್ವಾಸ ಋಷಿಗಳ ಕ್ರೋಧದಿಂದ ಅವರು ಉಳಿಯುವರೇ ? ಋಷಿಗಳು ಅವರಿಗೆ ಶಾಪವನ್ನು ನೀಡುವರು’ ಎಂದು ವಿಚಾರ ಮಾಡಿ ಸಂತೋಷಗೊಂಡನು.

ಮಾರನೇ ದಿನ ದೂರ್ವಾಸ ಋಷಿಗಳು ಹಾಗೂ ಅವರ ಶಿಷ್ಯಗಣವು ಪಾಂಡವರ ಪರ್ಣಕುಟೀರವನ್ನು ತಲುಪಿದಾಗ ಮಧ್ಯಾಹ್ನದ ಊಟದ ಸಮಯವು ಕಳೆದಿತ್ತು. ಅಲ್ಲಿ ತಲುಪುತ್ತಲೇ ಅವರು ದ್ರೌಪದಿಗೆ ‘ಮಗಳೇ, ಊಟದ ಸಮಯವು ಕಳೆದಿದೆ. ನಾವು ನದಿಗೆ ಹೋಗಿ ಸ್ನಾನ, ಸಂಧ್ಯಾ ಮಾಡಿ ಬರುವೆವು. ಅಲ್ಲಿಯ ವರೆಗೆ ಊಟದ ತಯಾರಿಯನ್ನು ಮಾಡಿ ಇಡು’ ಎಂದು ಹೇಳಿ ಶಿಷ್ಯರೊಂದಿಗೆ ನದಿಗೆ ಹೋದರು. 

ದ್ರೌಪದಿಗೆ ಏನೂ ಹೇಳಲು ಸಾಧ್ಯವಾಗಲಿಲ್ಲ. ಮಕ್ಕಳೇ, ಪಾಂಡವರು ವನವಾಸಕ್ಕೆ ಹೋಗುವಾಗ ಅವರಿಗೆ ಸೂರ್ಯದೇವರ ಕೃಪೆಯಿಂದ ಒಂದು ಅಕ್ಷಯ ಪಾತ್ರೆಯು ಲಭಿಸಿತ್ತು. ಆ ಅಕ್ಷಯ ಪಾತ್ರೆಯ ವೈಶಿಷ್ಟ್ಯವೇನೆಂದರೆ ಪ್ರತಿದಿನ ದ್ರೌಪದಿಯು ಆ ಪಾತ್ರೆಗೆ ಪ್ರಾರ್ಥಿಸಿದ ನಂತರ ಅದರಿಂದ ಊಟವು ದೊರೆಯುತ್ತಿತ್ತು. ಯಾರು ಎಷ್ಟೇ ಊಟ ಮಾಡಿದರೂ ಅದರಲ್ಲಿ ಮಾತ್ರ ಅನ್ನ ಮುಗಿಯುತ್ತಿರಲಿಲ್ಲ. ಆದರೆ ದ್ರೌಪದಿಯೂ ಊಟವನ್ನು ಮುಗಿಸಿದ ನಂತರ ಆ ಪಾತ್ರೆಯಿಂದ  ಅನ್ನವು ಸಿಗುತ್ತಿರಲಿಲ್ಲ. ಆ ದಿನ ಎಲ್ಲರ ಊಟವಾಗಿ ದ್ರೌಪದಿಯ ಊಟವೂ ಆಗಿತ್ತು. ಆದುದರಿಂದ ಆ ಪಾತ್ರೆಯಿಂದ ಅಷ್ಟೂ ಜನರಿಗೆ ಊಟ ದೊರೆಯುವುದು ಅಸಾಧ್ಯವಾಗಿತ್ತು.

ಇಂತಹ ಸ್ಥಿತಿಯಲ್ಲಿ ಶಿಷ್ಯರೊಂದಿಗೆ ಬಂದ ಋಷಿಗಳ ಊಟದ ವ್ಯವಸ್ಥೆಯನ್ನು ಹೇಗೆ ಮಾಡುವುದು, ಆದರಾತಿಥ್ಯ ಮಾಡದೇ ಇದ್ದರೆ ದೂರ್ವಾಸ ಋಷಿಗಳು ಅನಾದರವಾಗಿರುವುದಕ್ಕೆ ಶಾಪ ನೀಡುತ್ತಾರೆ ಎಂಬುದರ ಬಗ್ಗೆ ದ್ರೌಪದಿಗೆ ಚಿಂತೆಯಾಗತೊಡಗಿತು. 

ದ್ರೌಪದಿಗೆ ಈ ಮಹಾ ಸಂಕಟದಿಂದ ಹೊರಗೆ ತರಲು ಕೇವಲ ಭಗವಂತನಾದ ಶ್ರೀಕೃಷ್ಣನು ಮಾತ್ರ ತನಗೆ ಸಹಾಯ ಮಾಡಬಹುದು ಎಂಬುದು ತಿಳಿದಿತ್ತು. ಅದಕ್ಕೆ ದ್ರೌಪದಿಯು ಭಗವಾನ ಶ್ರೀಕೃಷ್ಣನನ್ನು ಆರ್ತತೆಯಿಂದ ಕರೆದಳು. ದ್ರೌಪದಿಯ ಮೊರೆ ಕೇಳಿ ಶ್ರೀಕೃಷ್ಣನು ಅಲ್ಲಿ ಪ್ರತ್ಯಕ್ಷನಾದನು. ಅವನು ದ್ರೌಪದಿಗೆ ‘ನನಗೆ ಬಹಳ ಹಸಿವಾಗಿದೆ, ನನಗೆ ಊಟ ಬಡಿಸು’ ಎಂದು ಹೇಳಿದನು. 

ಇದನ್ನು ಕೇಳಿ ಅಸಹಾಯಕಳಾದ ದ್ರೌಪದಿಯು ಶ್ರೀಕೃಷ್ಣನಿಗೆ ಸ್ಥಿತಿಯನ್ನು ಹೇಳಿದಳು. ಇದನ್ನು ಕೇಳಿ ಶ್ರೀ ಕೃಷ್ಣನು, ‘ನೀನು ಆ ಪಾತ್ರೆಯನ್ನಾದರೂ ತೆಗೆದುಕೊಂಡು ಬಾ’ ಎಂದು ಹೇಳಿದನು. ಆಗ ದ್ರೌಪದಿಯು ‘ನಾನು ಅದನ್ನು ತೊಳೆಯಲು ಇಟ್ಟಿದ್ದೇನೆ. ಈಗ ಅದರಿಂದ ಏನೂ ಸಿಗಲಾರದು’ ಎಂದು ಹೇಳಿದಳು. ಆಗ ಭಗವಾನ ಶ್ರೀಕೃಷ್ಣನು ಮತ್ತೊಮ್ಮೆ ‘ನೀನು ಪಾತ್ರೆಯನ್ನು ತೆಗೆದುಕೊಂಡು ಬಾ’ ಎಂದು ಹೇಳಿದಾಗ ದ್ರೌಪದಿಯು ಪಾತ್ರೆಯನ್ನು ತಂದಳು. ಭಗವಾನ ಶ್ರೀಕೃಷ್ಣನಿಗೆ ಅದರಲ್ಲಿ ಅನ್ನದ ಒಂದು ಕಣವು ಕಾಣಿಸಿತು. ಅವನು ‘ಈ ಅನ್ನದ ಕಣವು ಸಂಪೂರ್ಣ ಬ್ರಹ್ಮಾಂಡವನ್ನು ತೃಪ್ತಗೊಳಿಸಲು ಸಾಕಾಗಿದೆ’ ಎಂದು ಹೇಳಿ ಆ ಅನ್ನದ ಕಣವನ್ನು ತಿಂದಬಿಟ್ಟನು. ಆ ಕ್ಷಣದಲ್ಲಿ ಸ್ನಾನಕ್ಕಾಗಿ ಹೋದ ದೂರ್ವಾಸ ಋಷಿಗಳ ಹಾಗೂ ಅವರ ಶಿಷ್ಯರ ಹೊಟ್ಟೆಯೂ ತುಂಬಿ ಹೋಯಿತು ಹಾಗೂ ಎಲ್ಲರಿಗೂ ತೇಗು ಬರಲಾರಂಭಿಸಿತು. ನಿದ್ರೆಯೂ ಬರಲಾರಂಭಿಸಿತು.

ಕೇವಲ ತನ್ನದಷ್ಟೇ ಅಲ್ಲ ತನ್ನ ಎಲ್ಲ ಶಿಷ್ಯರ ಇದೇ ಸ್ಥಿತಿಯನ್ನು ನೋಡಿದಾಗ ದೂರ್ವಾಸರು ಪಾಂಡವರ ಗುಡಿಸಲಿಗೆ ಊಟಕ್ಕಾಗಿ ಹೋಗುವುದು ವ್ಯರ್ಥವಾಗಿದೆ ಎಂದು ತಿಳಿದರು. ಪಾಂಡವರು ಊಟಕ್ಕಾಗಿ ಕರೆಯಲು ಬಂದರೆ ನಮಗೆ ಊಟ ಮಾಡುವ ಕ್ಷಮತೆಯೂ ಇಲ್ಲ. ಅದಕ್ಕೆ ಅವರು ಪಾಂಡವರ ಗುಡಿಸಲಿಗೆ ಹೋಗುವುದನ್ನು ಬಿಟ್ಟು ಮುಂದಿನ ಯಾತ್ರೆಗಾಗಿ ಹೊರಟರು. ಭಗವಾನ ಶ್ರೀಕೃಷ್ಣನ ಕೃಪೆಯಿಂದ ದ್ರೌಪದಿಯ ಮತ್ತು ಪಾಂಡವರ ಮೇಲೆ ಬಂದಂತಹ ಸಂಕಟವು ದೂರವಾಯಿತು.

ಇಂದಿಗೂ ಯಾವುದೇ ಗೃಹಿಣಿಯು ಮನೆಯಲ್ಲಿ ಸಾಧನ ಸಾಮಗ್ರಿಗಳು ಕಡಿಮೆ ಇರುವಾಗಲೂ ಅತಿಥಿಗಳ ಪ್ರಸನ್ನತೆಯಿಂದ ಆದರಾತಿಥ್ಯವನ್ನು ಮಾಡಿ ಅವರನ್ನು ತೃಪ್ತಗೊಳಿಸಿದರೆ ಅವರ ಬಳಿ ‘ದ್ರೌಪದಿಯ ಪಾತ್ರೆಯು’ ಇದೆ ಎಂದು ಹೇಳಲಾಗುತ್ತದೆ.

ಕೃಪೆ: ಹಿಂದೂ ಜಾಗೃತಿ ‌

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!