ದೊಡ್ಡಬಳ್ಳಾಪುರ, (ಜುಲೈ.01): ಬೈಕ್ ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರೋಗಿಯನ್ನು ಮಾಹಿತಿ ಬಂದ ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಲ್ಲದೆ, ಅಪಘಾತಕ್ಕೆ ಒಳಗಾಗಿದ್ದ ವ್ಯಕ್ತಿ ಜೋಬಿನಲ್ಲಿದ್ದ ಹಣ, ಪರ್ಸ್, ಮೊಬೈಲ್ ಅನ್ನು ಸಂಬಂಧಿಕರಿಗೆ ತಲುಪಿಸುವ ಮೂಲಕ ದೊಡ್ಡಬಳ್ಳಾಪುರದಲ್ಲಿನ 108 ಆಂಬುಲೆನ್ಸ್ ಚಾಲಕ ನರಸಿಂಹಮೂರ್ತಿ ಪ್ರಮಾಣಿಕತೆ ತೋರಿದ್ದಾರೆ.
ಶುಕ್ತವಾರ ಮಧ್ಯಾಹ್ನ ತಾಲ್ಲೂಕಿನ ಗೌರಿಬಿದನೂರು ರಸ್ತೆಯ ಗುಂಡಮಗೆರೆ ಕ್ರಾಸ್ನಲ್ಲಿ ಲೇಪಾಕ್ಷಿಗೆ ಹೋಗುತ್ತಿದ್ದ ಮಂಜುನಾಥ್ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಇವರ ಜೋಬಿನಲ್ಲಿದ್ದ ಪರ್ಸ್ನಲ್ಲಿ ರೂ.9,100 ಹಣ, ಮೊಬೈಲ್ ಸಹ ಇತ್ತು.
ದೊಡ್ಡಬಳ್ಳಾಪುರದಲ್ಲಿ ಚಿಕಿತ್ಸೆ ನೀಡುವುದು ಕಷ್ಟ ಎಂದು ವೈದ್ಯರು ಹೇಳಿದ್ದರಿಂದ ತಕ್ಷಣವೇ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೂ ಕರೆದೊಯ್ದಿದ್ದಾರೆ. ಹಣ, ಮೊಬೈಲ್ ಹಾಗೂ ಪರ್ಸ್ ಅನ್ನು ಪಡೆದಿರುವ ಮಂಜುನಾಥ್ ಅವರ ಕುಟುಂಬದ ಆಂಬುಲೆನ್ಸ್ ಚಾಲಕ ಹಾಗೂ ಆಂಬುಲೆನ್ಸ್ ನಲ್ಲಿದ್ದ ನರ್ಸ್ ಹೇಮಾವತಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….