ರಾಜ್ಯಪತ್ರದಲ್ಲಿ ಮೀಸಲಾತಿ ಪ್ರಕಟ: ದೊಡ್ಡಬಳ್ಳಾಪುರ ತಾಲೂಕಿನ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಿದ್ಧತೆ ಪ್ರಾರಂಭ

ದೊಡ್ಡಬಳ್ಳಾಪುರ, (ಜು.01): ಗ್ರಾಮಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ನಿಗದಿ ಕುರಿತಂತೆ ರಾಜ್ಯಪತ್ರದಲ್ಲಿ ಪ್ರಕಟವಾಗಿದ್ದು, ಚುನಾವಣೆ ಸಿದ್ದತೆ ಗರಿಗೆದರಲಿದೆ.

ಕರ್ನಾಟಕ ರಾಜ್ಯಪತ್ರದ ಸಂದೇಶವನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ ರಾಜ್ ಅಧಿನಿಯಮ, 1993ರ ಪುಕರಣ 44ರ ಉಪ ಪ್ರಕರಣ 2ರಲ್ಲಿ ಪದತ್ತವಾದ ಅಧಿಕಾರದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಡಾ|| ಶಿವಶಂಕರ ಹೊರಡಿಸಿದ್ದಾರೆ.

ಇದರ  ಅನ್ವಯ ರಾಜ್ಯ ಚುನಾವಣಾ ಆಯೋಗದ ಆದೇಶ ಸಂ:ರಾಚುಆ 53 ಇಜಿಪಿ 2022 ದಿನಾಂಕ:25.05.2023 ಮತ್ತು ಸಮಸಂಖ್ಯೆ ಪತ್ರ ದಿನಾಂಕ:25.05.2023 ಹಾಗೂ ಪತ್ರ ಸಂ: ರಾಚುತಿ 53 ಇಜಿಪಿ 2022 ದಿನಾಂಕ:26.05.2023 ಗಳಲ್ಲಿನ ನಿರ್ದೇಶನದ ಅನುಸಾರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ ರಾಜ್ ಅಧಿನಿಯಮ 1993ರಂತೆ ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆ 2020ರ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಚುನಾವಣೆ ನಡೆಸುವ ಸಂಬಂಧವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ 28 ಗ್ರಾಮ ಪಂಚಾಯತಿಗಳಿಗೆ ದಿನಾಂಕ:22.06.2023ರಂದು ಅಧ್ಯಕ್ಷರ ಹಾಗೂ ಉಪಾಧ್ಯಕ್ಷರುಗಳ ಮೀಸಲಾತಿಯನ್ನು ಚುನಾಯಿತರಾಗಿ ಹಾಜರಿದ್ದ ಗ್ರಾಮ ಪಂಚಾಯತಿಗಳ ಸದಸ್ಯರುಗಳ ಸಮಕ್ಷಮ ನಿರ್ಧರಿಸಲಾಗಿದ್ದು, ಸದರಿ ಹುದ್ದೆಗಳಿಗೆ ಮೀಸಲಾತಿಯನ್ನು ನಿಗಧಿಪಡಿಸಿದೆ ಎಂದಿದ್ದಾರೆ.

ತೂಬಗೆರೆ; ಅಧ್ಯಕ್ಷ: ಪರಿಶಿಷ್ಟ ಜಾತಿ (ಮಹಿಳೆ), ಉಪಾಧ್ಯಕ್ಷ: ಹಿಂದುಳಿದ ವರ್ಗ -ಎ(ಮಹಿಳೆ)

ದೊಡ್ಡಬೆಳವಂಗಲ;  ಅಧ್ಯಕ್ಷ: ಪರಿಶಿಷ್ಟ ಜಾತಿ (ಮಹಿಳೆ), ಉಪಾಧ್ಯಕ್ಷ: ಸಾಮಾನ್ಯ

ಭಕ್ತರಹಳ್ಳಿ; ಅಧ್ಯಕ್ಷ: ಪರಿಶಿಷ್ಟ ಜಾತಿ (ಮಹಿಳೆ), ಉಪಾಧ್ಯಕ್ಷ: ಸಾಮಾನ್ಯ

ಆರೂಢಿ; ಅಧ್ಯಕ್ಷ: ಪರಿಶಿಷ್ಟ ಜಾತಿ (ಮಹಿಳೆ), ಉಪಾಧ್ಯಕ್ಷ: ಹಿಂದುಳಿದ ವರ್ಗ – ಎ

ಕೊನಘಟ್ಟ; ಅಧ್ಯಕ್ಷ: ಪರಿಶಿಷ್ಟ ಜಾತಿ , ಉಪಾಧ್ಯಕ್ಷ: ಸಾಮಾನ್ಯ (ಮಹಿಳೆ)

ಕಂಟನಕುಂಟೆ; ಅಧ್ಯಕ್ಷ: ಪರಿಶಿಷ್ಟ ಜಾತಿ , ಉಪಾಧ್ಯಕ್ಷ: ಹಿಂದುಳಿದ ವರ್ಗ(ಬಿ)

ಸಕ್ಕರೆಗೊಲ್ಲಹಳ್ಳಿ;  ಅಧ್ಯಕ್ಷ: ಪರಿಶಿಷ್ಟ ಜಾತಿ, ಉಪಾಧ್ಯಕ್ಷ: ಸಾಮಾನ್ಯ (ಮಹಿಳೆ)

ಚನ್ನದೇವಿ ಅಗ್ರಹಾರ; ಅಧ್ಯಕ್ಷ:  ಪರಿಶಿಷ್ಟ ಪಂಗಡ (ಮಹಿಳೆ), ಉಪಾಧ್ಯಕ್ಷ: ಸಾಮಾನ್ಯ

ಹೊನ್ನಾವರ; ಅಧ್ಯಕ್ಷ: ಪರಿಶಿಷ್ಟ ಪಂಗಡ, ಉಪಾಧ್ಯಕ್ಷ: ಸಾಮಾನ್ಯ (ಮಹಿಳೆ)

ಕೊಡಿಗೇಹಳ್ಳಿ; ಅಧ್ಯಕ್ಷ: ಹಿಂದುಳಿದ ವರ್ಗ – ಎ (ಮಹಿಳೆ), ಉಪಾಧ್ಯಕ್ಷ: ಪರಿಶಿಷ್ಟ ಜಾತಿ

ಹಣಬೆ; ಅಧ್ಯಕ್ಷ: ಹಿಂದುಳಿದ ವರ್ಗ – ಎ (ಮಹಿಳೆ), ಉಪಾಧ್ಯಕ್ಷ: ಪರಿಶಿಷ್ಟ ಜಾತಿ

ದೊಡ್ಡತುಮಕೂರು; ಅಧ್ಯಕ್ಷ: ಹಿಂದುಳಿದ ವರ್ಗ – ಎ , ಉಪಾಧ್ಯಕ್ಷ: ಪರಿಶಿಷ್ಟ ಜಾತಿ

ಹಾದ್ರಿಪುರ; ಅಧ್ಯಕ್ಷ: ಹಿಂದುಳಿದ ಜಾತಿ – ಬಿ, ಉಪಾಧ್ಯಕ್ಷ: ಪರಿಶಿಷ್ಟ ಪಂಗಡ

ಮಜರಾಹೊಸಹಳ್ಳಿ; ಅಧ್ಯಕ್ಷ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ: ಪರಿಶಿಷ್ಟ ಜಾತಿ

ಅರಳುಮಲ್ಲಿಗೆ; ಅಧ್ಯಕ್ಷ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ: ಸಾಮಾನ್ಯ

ದರ್ಗಾಜೋಗಿಹಳ್ಳಿ; ಅಧ್ಯಕ್ಷ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ: ಸಾಮಾನ್ಯ (ಮಹಿಳೆ)

ಹೊಸಹಳ್ಳಿ; ಅಧ್ಯಕ್ಷ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ: ಸಾಮಾನ್ಯ

ಕನಸವಾಡಿ; ಅಧ್ಯಕ್ಷ:  ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ: ಸಾಮಾನ್ಯ

ಹೆಗ್ಗಡಿಹಳ್ಳಿ; ಅಧ್ಯಕ್ಷ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ: ಸಾಮಾನ್ಯ

ಸಾಸಲು; ಅಧ್ಯಕ್ಷ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ: ಹಿಂದುಳಿದ ವರ್ಗ -ಎ (ಮಹಿಳೆ)

ಹಾಡೋನಹಳ್ಳಿ; ಅಧ್ಯಕ್ಷ: ಸಾಮಾನ್ಯ , ಉಪಾಧ್ಯಕ್ಷ: ಪರಿಶಿಷ್ಟ ಜಾತಿ (ಮಹಿಳೆ)

ಮೆಳೇಕೋಟೆ; ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಸಾಮಾನ್ಯ (ಮಹಿಳೆ)

ಕೆಸ್ತೂರು; ಅಧ್ಯಕ್ಷ: ಸಾಮಾನ್ಯ , ಉಪಾಧ್ಯಕ್ಷ: ಪರಿಶಿಷ್ಟ ಜಾತಿ (ಮಹಿಳೆ)

ತಿಪ್ಪೂರು; ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಪರಿಶಿಷ್ಟ ಜಾತಿ (ಮಹಿಳೆ)

ಹುಲಿಕುಂಟೆ; ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಪರಿಶಿಷ್ಟ ಪಂಗಡ (ಮಹಿಳೆ)

ಕಾಡನೂರು; ಅಧ್ಯಕ್ಷ:  ಸಾಮಾನ್ಯ, ಉಪಾಧ್ಯಕ್ಷ: ಸಾಮಾನ್ಯ (ಮಹಿಳೆ)

ಮೇಲಿನಜೂಗಾನಹಳ್ಳಿ; ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಪರಿಶಿಷ್ಟ ಜಾತಿ (ಮಹಿಳೆ)

ರಾಜಘಟ್ಟ; ಅಧ್ಯಕ್ಷ: ಪರಿಶಿಷ್ಟ ಜಾತಿ , ಉಪಾಧ್ಯಕ್ಷ: ಸಾಮಾನ್ಯ (ಮಹಿಳೆ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!