01. ನಾತುರಾಮ್ ಗೋಡ್ಸೆ ಅವರನ್ನು ಯಾವ ಜೈಲಿನಲ್ಲಿ ನೇಣು ಶಿಕ್ಷೆ ನೀಡಲಾಯಿತು, ಮತ್ತು ಯಾವಾಗ.?
- ಎ. ಬೆಂಗಳೂರಿನ ಸೆಂಟ್ರಲ್ ಜೈಲ್ 15-09-1947
- ಬಿ. ಅಂಬಾಳ ಸೆಂಟ್ರಲ್ ಜೈಲ್ 15-11-1949
- ಸಿ. ನವದೆಹಲಿ ಸೆಂಟ್ರಲ್ ಜೈಲ್ 12-08-1947
- ಡಿ. ಕಾಶ್ಮೀರದ ಸೆಂಟ್ರಲ್ ಜೈಲ್ 15-08-1947
ಉತ್ತರ: ಬಿ) ಅಂಬಾಳ ಸೆಂಟ್ರಲ್ ಜೈಲ್ 15-11-1949
02. ಕೌಟಿಲ್ಯನ ಅರ್ಥಶಾಸ್ತ್ರವು ಈ ಕೆಳಗಿನವುಗಳಲ್ಲಿ ಯಾವುದನ್ನು ವ್ಯವಹರಿಸುತ್ತದೆ. ?
- ಎ. ಆಯುರ್ವೇದ
- ಬಿ. ಜೋತಿಷ್ಯ ಶಾಸ್ತ್ರ
- ಸಿ. ಸಾರ್ವಜನಿಕ ಆಡಳಿತ
- ಡಿ. ಭೂ ವಿಜ್ಞಾನ
ಉತ್ತರ: ಸಿ) ಸಾರ್ವಜನಿಕ ಆಡಳಿತ
03. ದೇಶದ ಮೊದಲ ಗ್ರಾಫಿನ್ ಇನ್ನೋವೇಶನ್ ಸೆಂಟರ್ ಯಾವ ರಾಜ್ಯದಲ್ಲಿದೆ.?
- ಎ. ಕರ್ನಾಟಕ
- ಬಿ. ಕೇರಳ
- ಸಿ. ಆಂದ್ರ ಪ್ರದೇಶ
- ಡಿ. ಉತ್ತರ ಪ್ರದೇಶ
ಉತ್ತರ: ಬಿ) ಕೇರಳ
04. ಮೈಸೂರು ಸಂಸ್ಥಾನದಲ್ಲಿ ನಾಗರೀಕ ಸೇವೆಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪರಿಚಯಿಸಿದವರು ಯಾರು.?
- ಎ. ದಿವಾನ್ ಶೇಷಾದ್ರಿ ಅಯ್ಯರ್
- ಬಿ. ಜಯಚಾಮರಾಜೇಂದ್ರ ಒಡೆಯರ್
- ಸಿ. ವಿಶ್ವೇಶ್ವರಯ್ಯ
- ಡಿ. ಕೃಷ್ಣರಾಜ ಒಡೆಯರ್
ಉತ್ತರ: ಎ) ದಿವಾನ್ ಶೇಷಾದ್ರಿ ಅಯ್ಯರ್
05. ಎಲ್ ಐ ಸಿ (LIC)ಯ ಕೇಂದ್ರ ಕಛೇರಿ ಎಲ್ಲಿದೆ.?
- ಎ. ಬೆಂಗಳೂರು
- ಬಿ. ಮುಂಬೈ
- ಸಿ. ದೆಹಲಿ
- ಡಿ. ಮಂಗಳೂರು
ಉತ್ತರ: ಬಿ) ಮುಂಬೈ
06. ಮೊಟ್ಟ ಮೊದಲು ಎಲ್ ಐ ಸಿ ಆರಂಭವಾಗಿದ್ದು ಯಾವಾಗ.?
- ಎ. 01-11-1951
- ಬಿ. 15-08-1949
- ಸಿ. 01-09-1956
- ಡಿ. 26-01-1951
ಉತ್ತರ: ಸಿ) 01-09-1956
07. ಜನಸಂಖ್ಯಾ ಸಾಂಖ್ಯಿಕ ಅಧ್ಯಯನವನ್ನು ಏನೆಂದು ಕರೆಯುತ್ತಾರೆ.?
- ಎ. ಜಿಯೋಗ್ರಾಫಿ
- ಬಿ. ಡೆಮೊಗ್ರಫಿ
- ಸಿ. ಫಿಜಿಯಾ ತೆರೀಫಿ
- ಡಿ. ನ್ಯೂಮೊರಾಲಜಿ
ಉತ್ತರ: ಬಿ) ಡೆಮೊಗ್ರಫಿ
08. ರಾಷ್ಟ್ರೀಯ ವೈದ್ಯರ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ.?
- ಎ. 01- ಜುಲೈ
- ಬಿ. 21- ಆಗಸ್ಟ್
- ಸಿ. 01- ಜೂನ್
- ಡಿ. 01- ಡಿಸೆಂಬರ್
ಉತ್ತರ: ಎ) 01- ಜುಲೈ
09. ಖ್ಯಾತ ಶಿಕ್ಷಣ ತಜ್ಞ ಡಾ. ಅಶುತೋಷ್ ಮುಖರ್ಜಿ ಅವರ ಜನ್ಮದಿನ ಈ ಕೆಳಗಿನವುಗಳಲ್ಲಿ ಯಾವುದು.?
- ಎ. 29-06-1964
- ಬಿ. 29-06-1864
- ಸಿ.19-05-1864
- ಡಿ. 29-06-1974
ಉತ್ತರ: ಬಿ) 29-06-1864
10. ಸಸ್ಯಗಳ ಯಾವುದೇ ಭಾಗವು ಅಂಡಾಶಯದಿಂದ ಬೆಳವಣಿಗೆ ಆದರೆ ಅದನ್ನು ಏನೆಂದು ಗುರುತಿಸುತ್ತಾರೆ.?
- ಎ. ಹೂವು
- ಬಿ. ಹಣ್ಣುಗಳು
- ಸಿ. ತರಕಾರಿಗಳು
- ಡಿ. ಬೇರು
ಉತ್ತರ: ಬಿ) ಹಣ್ಣುಗಳು
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….