ಹರಿತಲೇಖನಿ ದಿನಕ್ಕೊಂದು ಕಥೆ: ಮಾರ್ಕಂಡೇಯನ ಭಕ್ತಿ

ಒಂದು ಕಾಡಿನ ಕುಟೀರದಲ್ಲಿ ಮೃಕಂಡ ಮುನಿಯು ತನ್ನ ಪತ್ನಿಯಾದ ಮರುದಾವತಿಯೊಂದಿಗೆ ಸಾಧನೆಯ ಜೀವನವನ್ನು ನಡೆಸುತ್ತಿದ್ದನು. ಆ ದಂಪತಿಗಳಿಗೆ ಬಹುಕಾಲವಾದರೂ ಮಕ್ಕಳಾಗಿರಲಿಲ್ಲ. 

ಒಮ್ಮೆ ಮೃಕಂಡ ಮುನಿಯು ಕಾಶಿಯಾತ್ರೆಗೆ ಹೋಗಿ ಅಲ್ಲಿರುವ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ, ವಿಶ್ವನಾಥ, ವಿಶಾಲಾಕ್ಷಿಯನ್ನು ಭಕ್ತಿಯಿಂದ ಪೂಜಿಸಿದನು. ಕಾಶೀ ವಿಶ್ವನಾಥನ ದೇವಸ್ಥಾನದ ಬಳಿಯೇ ಇದ್ದುಕೊಂಡು ಉಗ್ರ ತಪಸ್ಸು ಮಾಡತೊಡಗಿದನು. ಅವನ ಭಕ್ತಿಗೆ ಮೆಚ್ಚಿದ ಶಿವಶಂಕರನು ಪ್ರತ್ಯಕ್ಷನಾಗಿ “ಮೃಕಂಡ, ನಿನಗೆ ಬೇಕಾದ ವರವನ್ನು ಕೇಳು ಅದನ್ನು ಅನುಗ್ರಹಿಸುವೆ” ಎಂದನು. 

ಮೃಕಂಡ ಮುನಿ ಧನ್ಯತಾಭಾವದಿಂದ “ಭಗವಂತ, ನನಗೊಬ್ಬ ಮಗನನ್ನು ಕರುಣಿಸು” ಎಂದನು. ಶಿವಶಂಕರನು ನಗುತ್ತ “ನಿನಗೆ ನೂರು ವರ್ಷ ಆಯುಷ್ಯವುಳ್ಳ, ಅಶಿಸ್ತಿನ, ದುರ್ನಡತೆಯ ಮಗ ಬೇಕೋ? ಹದಿನಾರು ವರ್ಷ ಮಾತ್ರ ಬದುಕುವ ಒಳ್ಳೆಯ ಸ್ವಭಾವದ, ಶಿಸ್ತಿನ, ನನ್ನಲ್ಲಿ ಭಕ್ತಿಯಿರುವ ಬಾಲಕ ಬೇಕೋ” ಎಂದನು. ಅದಕ್ಕೆ ಮೃಕಂಡ ಮುನಿಯು “ನನಗೆ ತಮ್ಮಲ್ಲಿ ಭಕ್ತಿಯಿಟ್ಟು ಸದಾ ಪೂಜಿಸುವ ಮಗುವೇ ಬೇಕು. ಅವನು ಅಲ್ಪಾಯುಷಿಯಾದರೂ ಚಿಂತೆಯಿಲ್ಲ” ಎಂದನು. ಶಿವನು ‘ಹಾಗೇ ಆಗಲಿ’ ಎಂದು ಹರಸಿ ಅದೃಶ್ಯನಾದನು.

ಸ್ವಲ್ಪ ಕಾಲದ ನಂತರ ಮರುದಾವತಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಳು. ಮೃಕಂಡ ಋಷಿ ದಂಪತಿಗಳು ಸಂತೋಷಪಟ್ಟರು. ಬ್ರಹ್ಮದೇವನು ಪ್ರತ್ಯಕ್ಷವಾಗಿ ಮಗುವಿಗೆ ಮಾರ್ಕಂಡೇಯ ಎಂದು ಹೆಸರಿಡಿರಿ ಎಂದು ಹೇಳಿ ಮುನಿ ದಂಪತಿಗಳನ್ನು ಹರಸಿದನು. ಮಾರ್ಕಂಡೇಯನು ತಂಬಾ ಒಳ್ಳೆಯ ಹುಡುಗನೂ ಅತೀವ ಶಿವ ಭಕ್ತಿಯುಳ್ಳವನೂ ಆಗಿದ್ದನು. ಚಿಕ್ಕಂದಿನಿಂದಲೇ ಅವನಿಗೆ ವೇದಗಳು ಕಂಠಪಾಠವಾಗಿದ್ದವು.

ದಿನಗಳು ಕಳೆಯುತ್ತಾ ಅವನ ಹದಿನಾರನೆಯ ವಯಸ್ಸು ಸಮೀಪಿಸಿತು. ಅವನ ಹೆತ್ತವರು ಅವನ ಮೃತ್ಯುವು ಸಮೀಪಿಸುತ್ತಿರುವುದರ ನೆನಪಿನಿಂದ ತುಂಬಾ ಚಿಂತಿತರಾದರು. ಅವರ ಚಿಂತೆಯನ್ನು ಕಂಡು ಬಾಲಕನಾದ ಮಾರ್ಕಂಡೇಯನು ನಿಮ್ಮ ಚಿಂತೆಗೇನು ಕಾರಣ ನನಗೂ ತಿಳಿಸಿರಿ, ಎನ್ನಲು ಅವರು ತಮ್ಮ ದುಃಖದ ಕಾರಣವನ್ನು ವಿವರಿಸಿದರು.

ಮಾರ್ಕಂಡೇಯನು ಅವರನ್ನು ಸಮಾಧಾನಪಡಿಸುತ್ತ “ನೀವು ಚಿಂತಿಸಬೇಡಿ. ನಾನು ಶಿವನನ್ನು ಮೆಚ್ಚಿಸಿ ಅವನ ಅನುಗ್ರಹದಿಂದ ಯಮನನ್ನು ಜಯಿಸಿ ಹಿಂದಿರುಗುತ್ತೇನೆ, ನಿಮ್ಮ ಆಶೀರ್ವಾದ ನನ್ನ ಮೇಲಿರಲಿ” ಎಂದು ತಂದೆ-ತಾಯಿಯ ಆಶೀರ್ವಾದವನ್ನು ಪಡೆದು ಕಾಶಿಗೆ ಹೋಗಿ ಭಕ್ತಿಯಿಂದ ಶಿವನನ್ನು ಪೂಜಿಸಿದನು. ಅವನ ಭಕ್ತಿಗೆ ಶಿವನು ಪ್ರತ್ಯಕ್ಷನಾಗಿ “ಮಗು, ನೀನು ಯಮನಿಗೆ ಭಯಪಡದಿರು, ನಿನ್ನ ಪೂಜೆಯನ್ನು ಮುಂದುವರಿಸು” ಎಂದು ಅದೃಶ್ಯನಾದನು.

ಶಿವಪೂಜೆಯಲ್ಲಿ ನಿರತನಾದ ಮಾರ್ಕಂಡೇಯನ ಮೃತ್ಯುವು ಸಮೀಪಿಸಿತು. ಆಗ ಅವನ ಬಳಿ ಬಂದ ಯಮದೂತರು ಹೆದರಿ ಹಿಂದಿರುಗಿ ಯಮಧರ್ಮರಾಯನ ಬಳಿ ‘ಸ್ವಾಮಿ ಮಾರ್ಕಂಡೇಯನ ಬಳಿ ಹೋಗಲು ನಮಗೆ ತುಂಬಾ ಹೆದರಿಕೆಯಾಗುತ್ತಿದೆ” ಎಂದರು. 

ಆಗ ಯಮನು ತನ್ನ ಮಂತ್ರಿಯಾದ ಕಾಲನನ್ನು ಕರೆದು ಮಾರ್ಕಂಡೇಯನ ಪ್ರಾಣವನ್ನು ತೆಗೆದುಕೊಂಡು ಬರಲು ತಿಳಿಸಿದನು. ಆದರೆ ಆತನಿಂದಲೂ ಶಿವಪೂಜಾನಿರತ ಮಾರ್ಕಂಡೇಯನ ಪ್ರಾಣಹರಣ ಮಾಡಲು ಆಗಲಿಲ್ಲ. ಆಗ ಯಮನೇ ಬಂದು ಕೋಪದಿಂದ, ‘ಮಾರ್ಕಂಡೇಯಾ, ನನ್ನೊಂದಿಗೆ ಬಾ’ ಎನ್ನಲು ಮಾರ್ಕಂಡೇಯನು “ನಾನು ಬರುವುದಿಲ್ಲ” ಎಂದು ತನ್ನ ಪೂಜೆಯನ್ನು ಮುಂದುವರಿಸಿದಾಗ ಯಮನು ಮೃತ್ಯುಪಾಶವನ್ನು ಎಸೆದನು. 

ಆ ಪಾಶವು ಮಾರ್ಕಂಡೇಯ ಪೂಜಿಸುತ್ತಿದ್ದ ಶಿವಲಿಂಗದ ಮೇಲೆ ಬಿತ್ತು. ಶಿವಲಿಂಗದಿಂದ ಶಿವನು ಪ್ರತ್ಯಕ್ಷನಾಗಿ ಯಮನನ್ನು ತಡೆದನು. ಮಾರ್ಕಂಡೇಯನು ಶಿವನನ್ನು ಸ್ತುತಿಸತೊಡಗಿದನು. ಅವನ ಭಕ್ತಿಗೆ ಮೆಚ್ಚಿ ಶಿವನು ‘ನೀನು ಎಂದೆಂದೂ 16 ವರ್ಷದ ಚಿರಂಜೀವಿಯಾಗಿ ಬಾಳು’ ಎಂದು ಆಶೀರ್ವದಿಸಿದನು.

ಕೃಪೆ: ಹಿಂದೂ ‌ಜಾಗೃತಿ

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!