ದೊಡ್ಡಬಳ್ಳಾಪುರ, (ಜುಲೈ.03): ತಾಲೂಕಿನ ಗ್ರಾಮಪಂಚಾಯಿತಿಗಳ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಿಗೆ ಚುನಾವಣೆ ನಡೆಸಲು ಚುನಾವಣೆ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಡಾ.ಶಿವಶಂಕರ್ ಎನ್ ಆದೇಶಿಸಿದ್ದಾರೆ.
ಇದರ ಅನ್ವಯ ತಾಲೂಕು ಪಂಚಾಯಿತಿ ಇಒ ಶ್ರೀನಾಥ್ ಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಚುನಾವಣೆ ಅಧಿಕಾರಿಗಳನ್ನಾಗಿ ನೇಮಕ ಮಾಡಿದ್ದಾರೆ.
ನೇಮಕವಾದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಗಳು:
ತಾಪಂ ಇಒ: ಕೊನಘಟ್ಟ, ತಿಪ್ಪೂರು.
ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆ ಎಇಇ: ಕೊಡಿಗೇಹಳ್ಳಿ, ಕಂಟನಕುಂಟೆ.
ಪಿಡಬ್ಲ್ಯುಡಿ ಎಇಇ: ಚನ್ನದೇವಿ ಅಗ್ರಹಾರ.
ಮಿನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು: ರಾಜಘಟ್ಟ, ಹಾದ್ರಿಪುರ.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ: ಸಾಸಲು, ಭಕ್ತರಹಳ್ಳಿ.
ಕೃಷಿ ಇಲಾಖೆ ಸಹಾಯಕ ನಿರ್ದೇಶಕರು: ಸಕ್ಕರೆಗೊಲ್ಲಹಳ್ಳಿ, ಹೊಸಹಳ್ಳಿ, ದರ್ಗಾಜೋಗಿಹಳ್ಳಿ.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು: ಹಣಬೆ, ಆರೂಢಿ.
ಶಿಕ್ಷಣ ಇಲಾಖೆ ಬಿಇಒ: ದೊಡ್ಡಬೆಳವಂಗಲ, ಹುಲಿಕುಂಟೆ.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು: ಕಾಡನೂರು, ದೊಡ್ಡತುಮಕೂರು, ಅರಳು ಮಲ್ಲಿಗೆ, ಮಜರಾಹೊಸಹಳ್ಳಿ.
ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರು: ತೂಬಗೆರೆ, ಹಾಡೋನಹಳ್ಳಿ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಡಿಪಿಒ: ಕನಸವಾಡಿ, ಹೊನ್ನಾವರ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು: ಮೆಳೇಕೋಟೆ, ಮೇಲಿನಜೂಗಾನಹಳ್ಳಿ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….