ದೊಡ್ಡಬಳ್ಳಾಪುರ, (ಜುಲೈ.08): ಸಮಯ ಪಾಲನೆ ಮಾಡದ ರಾಜ್ಯ ಸಾರಿಗೆ ಸಂಸ್ಥೆ ವಿರುದ್ಧ ತಾಲೂಕಿನ ಉಜ್ಜನಿ ಗ್ರಾಮದಲ್ಲಿ ಬಸ್ ತಡೆದು, ಶಾಲಾ ಕಾಲೇಜು ವಿದ್ಯಾರ್ಥಿಗಳು ಶನಿವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಉದಯೋನ್ಮುಖ ನಟ ಲಕ್ಷ್ಮೀಕಾಂತ್, ಹೊಸಹಳ್ಳಿ ವ್ಯಾಪ್ತಿಯಲ್ಲಿ ಸಾರಿಗೆ ಅವ್ಯವಸ್ಥೆ ಮಿತಿಮೀರಿದೆ, ಸಮರ್ಪಕವಾಗಿ ಸಮಯ ಪಾಲನೆ ಮಾಡದ ಕಾರಣ ವಿದ್ಯಾರ್ಥಿಗಳು, ಶಾಲೆ ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲಾಗದೆ. ಶಿಕ್ಷಕರಿಂದ ನಿಂದನೆಗೆ ಒಳಗಾಗುವ, ಶಾಲೆ – ಕಾಲೇಜಿನಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಪ್ರತಿನಿತ್ಯ ಎದುರಿಸುತ್ತಿದ್ದಾರೆಂದು ಆರೋಪಿಸಿದರು.
ಈ ಕುರಿತಂತೆ ಸಾರಿಗೆ ಇಲಾಖೆ ಘಟಕ ವ್ಯವಸ್ಥಾಪಕರಿಗೆ ಪದೇ ಪದೇ ಮನವಿ ಸಲ್ಲಿಸಿದರು ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ಘಟಕ ವ್ಯವಸ್ಥಾಪಕ ಸಂತೋಷ್ ಅವರು ಕರೆ ಮಾಡಿ, ನಾಳೆಯಿಂದ ಸಮಯಕ್ಕೆ ಸರಿಯಾಗಿ ಬಸ್ ಕಳಿಸುವ ಭರವಸೆಯ ನಂತರ ಬಸ್ ತೆರಳಲು ಅವಕಾಶ ನೀಡಲಾಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….