ದೊಡ್ಡಬಳ್ಳಾಪುರ, (ಜುಲೈ.08): ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ 16ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ರಾಜ್ಯಮಟ್ಟದ ಗಾಳಿ ಪಟ ಸ್ಪರ್ಧೆ ಜುಲೈ 09 ರಂದು ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕಲಾಸಂಘದ ವತಿಯಿಂದ ಗಾಳಿಪಟ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಖ್ಯಾತ ನಟ ಡಾ.ಶಿವರಾಜ್ ಕುಮಾರ್ ಅವರಿಗೆ ಆಹ್ವಾನ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಣ್ಣ, ವಿವಿಧ ಆಕೃತಿಯ ಹಾಳಿ ಪಟಗಳು ಪ್ರಸಿದ್ಧಿ ಪಡೆದಿದ್ದು, ಕೇವಲ ಆಟವಾಗಿ ಅಲ್ಲದೆ ಸಾಮಾಜಿಕ ಕಾಳಜಿಯ ಸಂದೇಶ ನೀಡುವಲ್ಲಿ ಸಹ ಗಾಳಿಪಟ ಸ್ಪರ್ಧೆ ಆಕರ್ಷಣೆಯವಾಗಿರುತ್ತವೆ. ಗಾಳಿ ಪಟ ಸ್ಪರ್ಧೆಯಲ್ಲಿ ಹೆಚ್ಚಿನ ಮಂದಿ ಭಾಗವಹಿಸಿ, ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ವೇಳೆ ದೊಡ್ಡಬಳ್ಳಾಪುರದ ಗಾಳಿಪಟ ಕಲಾ ಸಂಘದ ಪ್ರಕಾಶ್ ಗಾಳಿಪಟ, ಜಿ.ಆರ್. ವಿಶ್ವನಾಥ್, ಸುಬ್ರಮಣಿ, ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘದ ಚೌಡರಾಜ್ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….